Home> Viral
Advertisement

Viral News: 83 ವರ್ಷದ ಪೋಲೆಂಡ್ ಅಜ್ಜಿ ಮದುವೆಯಾದ 28ರ ಪಾಕ್ ಯುವಕ!

ಸೆಂಟ್ರಲ್ ಪಂಜಾಬ್‌ನ ಹಫೀಜಾಬಾದ್​​ನಲ್ಲಿ ಮೆಕ್ಯಾನಿಕ್ ವೃತ್ತಿ ಮಾಡಿಕೊಂಡಿದ್ದ 28 ವರ್ಷದ ಹಫೀಜ್​ ಮಹಮ್ಮದ್ ನದೀಮ್‍ ಎಂಬಾತನೇ ಅಜ್ಜಿ  ಮದುವೆಯಾಗಿರುವುದು.

Viral News: 83 ವರ್ಷದ ಪೋಲೆಂಡ್ ಅಜ್ಜಿ ಮದುವೆಯಾದ 28ರ ಪಾಕ್ ಯುವಕ!

ನವದೆಹಲಿ: ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ ಅಂತಾರೆ. ಅದೇ ರೀತಿ ಪ್ರೀತಿ ಯಾವಾಗ, ಯಾರ ಮೇಲೆ ಹೇಗಾಗುತ್ತೋ ಹೇಳಲು ಸಾಧ್ಯವಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಪಾಕಿಸ್ತಾನದ ವ್ಯಕ್ತಿಯೊಬ್ಬ ಪೋಲೆಂಡ್ ದೇಶದ ಮಹಿಳೆಯೊಬ್ಬಳ ಜೊತೆ ಮದುವೆಯಾಗಿದ್ದಾನೆ. ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದು ಯಾಕೆ ಅಷ್ಟು ಸುದ್ದಿಯಾಗ್ತಿದೆ ಅಂತೀರಾ..? ಇದಕ್ಕೆ ಕಾರಣ ಈ ಜೋಡಿಯ ವಯಸ್ಸಿನ ಅಂತರ. ಹೌದು, ಪೋಲೆಂಡ್ ದೇಶದ 83 ವರ್ಷದ ಅಜ್ಜಿಯನ್ನು 28 ವರ್ಷದ ಪಾಕಿಸ್ತಾನ ಯುವಕ ಪ್ರೀತಿಸಿ ಮದುವೆಯಾಗಿದ್ದಾನೆ. ಹೀಗಾಗಿ ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.  

ಇದನ್ನೂ ಓದಿ: Baba Vanga Predictions: ರಷ್ಯಾ vs ಅಮೆರಿಕ, 3ನೇ ವಿಶ್ವ ಯುದ್ಧದ ಬಗ್ಗೆ ಬಾಬಾ ವಂಗಾ ಭಯಾನಕ ಭವಿಷ್ಯ!

6 ವರ್ಷಗಳ ಹಿಂದೆ ಫೇಸ್​ಬುಕ್ ಮೂಲಕ ಈ ಜೋಡಿ ಪರಸ್ಪರ ಪರಿಚಯವಾಗಿತ್ತಂತೆ. ಅಂದಿನಿಂದ ದಿನನಿತ್ಯವೂ ನಡೆದ ಚಾಟಿಂಗ್ ಸ್ನೇಹವಾಗಿ, ನಂತರ ಪ್ರೀತಿಯೆಡೆಗೆ ತಿರುಗಿದೆ. ಸೆಂಟ್ರಲ್ ಪಂಜಾಬ್‌ನ ಹಫೀಜಾಬಾದ್​​ನಲ್ಲಿ ಮೆಕ್ಯಾನಿಕ್ ವೃತ್ತಿ ಮಾಡಿಕೊಂಡಿದ್ದ 28 ವರ್ಷದ ಹಫೀಜ್​ ಮಹಮ್ಮದ್ ನದೀಮ್‍ ಎಂಬಾತನೇ ಅಜ್ಜಿಯನ್ನು ಮದುವೆಯಾಗಿರುವುದು.

ಹಫೀಜ್‍ಗೆ ಫೇಸ್​ಬುಕ್ ಮೂಲಕ ಪೋಲೆಂಡ್ ದೇಶದಲ್ಲಿದ್ದ 83 ವರ್ಷದ ಬ್ರೋಮಾ ಎಂಬ ಮಹಿಳೆಯ ಪರಿಚಯವಾಗಿದೆ. ನಂತರ ಸ್ನೇಹವಾಗಿ ಇಬ್ಬರು ಪರಸ್ಪರ ಪ್ರೀತಿಸಲು ಶುರುಮಾಡಿದ್ದಾರೆ. ಬಳಿಕ ಸಾಕಷ್ಟು ಯೋಚಿಸಿ ಮದುವೆಯಾಗಲು ನಿರ್ಧರಿಸಿದ್ದಾರೆ. ವಿಶೇಷ ಅಂದ್ರೆ ಮದುವೆಗೂ ಮೊದಲು ಈ ಜೋಡಿ ಒಂದೇ ಒಂದ ಬಾರಿಯೂ ಭೇಟಿಯಾಗಿಲ್ಲವಂತೆ.

ಇದನ್ನೂ ಓದಿ: ಕೊನೆಗೂ ಬಯಲಾಯ್ತು ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಸಾವಿನ ರಹಸ್ಯ! ಇಲ್ಲಿದೆ ನೋಡಿ ಸಮಾಧಿ ಸ್ಥಳ

ಈ ವಿಶೇಷ ಜೋಡಿಯ ಪ್ರೀತಿಗೆ ಯಾರೂ ಸಹ ಅಡ್ಡ ಬಂದಿಲ್ಲವಂತೆ. ಇಸ್ಲಾಮಿಕ್​ ನಿಯಮದಡಿ ಒಪ್ಪಿಗೆ ಪಡೆದುಕೊಂಡ ಈ ಜೋಡಿ ಇಸ್ಲಾಂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ನಂತರ ಬ್ರೋಮಾ ತನ್ನ ಹೆಸರನ್ನು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಫಾತೀಮಾ ಅಂತಾ ಬದಲಾಯಿಸಿಕೊಂಡಿದ್ದಾಳಂತೆ.

ತಾನು ಖುಷಿಯಿಂದಲೇ ಹಫೀಜ್ ಜೊತೆಗೆ ಮದುವೆಯಾಗಿದ್ದಾನೆ ಎಂದು ಬ್ರೋಮಾ ಹೇಳಿದರೆ, ವಧು ತನ್ನನ್ನು ಮದುವೆಯಾಗಲು ಇಸ್ಲಾಂ ಧರ್ಮ ಸ್ವೀಕರಿಸಿದ್ದರಿಂದ ತಾನು ಅದೃಷ್ಟಶಾಲಿಯಾಗಿದ್ದೇನೆ ಅಂತಾ ವರ ಹೇಳಿದ್ದಾನೆ. ಇವರಿಬ್ಬರ ಸಂದರ್ಶನವನ್ನು ಡೈಲಿ ಪಾಕಿಸ್ತಾನ ಮಾಡಿದ್ದು, ತನ್ನ ಯೂಟ್ಯೂಬ್ ಚಾನಲ್‍ನಲ್ಲಿ ಹಂಚಿಕೊಂಡಿದೆ. ಈ ಜೋಡಿ ಮದುವೆಯಾಗಿರುವ ವಿಷಯ ಕೇಳಿ ಅನೇಕರು ಶುಭ ಹಾರೈಸಿದರೆ, ಇನ್ನೂ ಅನೇಕರು ವಿವಿಧ ರೀತಿಯಲ್ಲಿ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More