Home> Viral
Advertisement

ಫುಲ್ ಜೋಶ್ ನಲ್ಲಿ ಹುಲಿಯ ಮೇಲೆರಗಿ ಬಂತು ಕರಡಿ.! ಮುಂದೆನಾಯಿತು ಈ ವಿಡಿಯೋ ನೋಡಿ

Animal Video : ಎದುರಿಗಿರುವ ಪ್ರಾಣಿಗಳು  ಸ್ವಲ್ಪ ದುರ್ಬಲ ಎಂದು ಗೊತ್ತಾಗುತ್ತಿದ್ದಂತೆಯೇ ಅವುಗಳ ಮೇಲೆರಗಲು ಮುಂದಾಗುತ್ತದೆ. ಹೀಗಾದಾಗ ಆ ಸಣ್ಣ ಸಣ್ಣ ಪ್ರಾಣಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಎದ್ದು ಬಿದ್ದು ಓಡುತ್ತವೆ. 

ಫುಲ್ ಜೋಶ್ ನಲ್ಲಿ ಹುಲಿಯ ಮೇಲೆರಗಿ ಬಂತು ಕರಡಿ.! ಮುಂದೆನಾಯಿತು ಈ ವಿಡಿಯೋ ನೋಡಿ

Animal Video : ಸಿಂಹ, ಹುಲಿ ಅಥವಾ ಚಿರತೆಯಂತಹ ಪ್ರಾಣಿಗಳು ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಕಾಡು ಪ್ರಾಣಿಗಳೆಂದರೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇತರ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಎದುರಿಗಿರುವ ಪ್ರಾಣಿಗಳು  ಸ್ವಲ್ಪ ದುರ್ಬಲ ಎಂದು ಗೊತ್ತಾಗುತ್ತಿದ್ದಂತೆಯೇ ಅವುಗಳ ಮೇಲೆರಗಲು ಮುಂದಾಗುತ್ತದೆ. ಹೀಗಾದಾಗ ಆ ಸಣ್ಣ ಸಣ್ಣ ಪ್ರಾಣಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಎದ್ದು ಬಿದ್ದು ಓಡುತ್ತವೆ. ಆದರೆ ಒಮ್ಮೊಮ್ಮೆ ಯಾವ ಪ್ರಾಣಿಯನ್ನು ದುರ್ಬಲ ಎಂದುಕೊಂಡು ದಾಳಿ ಮಾಡಲು ಹುಲಿಗಳಂಥ ಪ್ರಾಣಿಗಳು ಮುಂದಾಗುತ್ತವೆಯೋ ಆ ದುರ್ಬಲ ಪ್ರಾಣಿಯೇ ಪ್ರತಿದಾಳಿಗೆ ಮುಂದಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕರಡಿ ಮತ್ತು ಹುಲಿ ಕಾಣಿಸುತ್ತದೆ.  

ಹುಲಿ ಮತ್ತು ಕರಡಿ ಘರ್ಷಣೆ :

ಈ ವೈರಲ್ ವೀಡಿಯೊದಲ್ಲಿ, ಕರಡಿ ಮತ್ತು ಹುಲಿ ಕಾಡಿನಲ್ಲಿ ಮುಖಾಮುಖಿಯಾಗುವುದನ್ನು ಕಾಣಬಹುದು. ಹುಲಿಯನ್ನು ಕಂಡ ಕರಡಿಗೆ ತಾನು ಸುಮ್ಮನಿದ್ದರೆ ಹುಲಿರಾಯ ತನ್ನ ಮೇಲೆ ದಾಳಿ ಮಾಡುವುದು ಖಂಡಿತಾ ಎಂಬ ಸೂಕ್ಷ್ಮ  ಅರ್ಥವಾಗಿ ಬಿಡುತ್ತದೆ. ಅದು ಹುಲಿಗೆ ಒಂದು ಸ್ವಲ್ಪವೂ ಯೋಚಿಸುವುದಕ್ಕೆ ಅವಕಾಶವನ್ನೂ ಕೊಡದೆ ಹುಲಿಯ ಮೇಲೆ ದಾಳಿಗೆ ಮುಂದಾಗುತ್ತದೆ. 

ಇದನ್ನೂ ಓದಿ : Viral Video: ಇಂತಹ ಬಣ್ಣದ ಹೆಬ್ಬಾವನ್ನು ನೀವು ನಿಮ್ಮ ಜೀವನದಲ್ಲಿಯೇ ನೋಡಿರಲಿಕ್ಕಿಲ್ಲ... ವಿಡಿಯೋ ನೋಡಿ

ಕರಡಿಯ ಈ ನಡೆಯನ್ನು ಹುಲಿ ಊಹಿಸಿಯೂ ಇರಲಿಲ್ಲ. ಹಾಗಾಗಿ ಹುಲಿ ತನ್ನನ್ನು ಕಾಪಾಡಿಕೊಳ್ಳಲು ಮುಂದಾಗುತ್ತದೆ. ಕರಡಿ ಮೇಲೆರಗಿ ಬರುತ್ತಿದ್ದಂತೆಯೇ ಹಿಂದೆ ಹಿಂದೆ ಬಂದು ನದಿ ಸೇರಿ ಬಿಡುತ್ತದೆ. ಹುಲಿರಾಯ ತನ್ನನ್ನು ಕಂಡು ಹೆದರಿರುವುದನ್ನು ಕಂಡು ಕರಡಿ ನೆಮ್ಮದಿಯಿಂದ ವಾಪಾಸಾಗುತ್ತದೆ. 

 

ಇದನ್ನೂ ಓದಿ : Viral Video: ಸೀರೆಯುಟ್ಟು, ಸೆರಗನ್ನು ಹೊದ್ದು 'ಕಬ್ಬಡ್ಡಿ... ಕಬ್ಬಡ್ಡಿ' ಎಂದು ಸೆಡ್ಡು ಹೊಡೆದ ಮಹಿಳಾಮಣಿಗಳು... ವಿಡಿಯೋ ನೋಡಿ

ಈ ವೀಡಿಯೊವನ್ನು ವೈಲ್ಡ್‌ಲೈಫ್_ಸ್ಟೋರೀಸ್_ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More