Home> Viral
Advertisement

ಲೆಹಂಗಾ ವಿಚಾರಕ್ಕೆ ಮದುವೆ ದಿನವೇ ಮುರಿದು ಬಿತ್ತು ವಿವಾಹ.!

Viral News : ಮದುವೆಗೆಂದು ಬಂದ ಅತಿಥಿಗಳು, ನೆಂಟರಿಷ್ಟರು ಈ ನಾಟಕಕ್ಕೆ ಸಾಕ್ಷಿಯಾಗಿ ಹಿಂತಿರುಗಬೇಕಾಗುತ್ತದೆ. ಇಲ್ಲೊಂದು ಮದುವೆಯಲ್ಲಿ ಇಂಥದ್ದೇ ಒಂದು ಹೈ ಡ್ರಾಮಾ ನಡೆದಿದೆ.  

ಲೆಹಂಗಾ ವಿಚಾರಕ್ಕೆ ಮದುವೆ ದಿನವೇ ಮುರಿದು ಬಿತ್ತು ವಿವಾಹ.!

Viral News : ಭಾರತೀಯ ವಿವಾಹಗಳೆಂದರೆ ಅದು ಭಾವನೆಗಳ ಮೇಳ. ಇದರೊಂದಿಗೆ ಡ್ರಾಮಾಗಳಿಗೂ ಕೊರತೆಯಿರುವುದಿಲ್ಲ. ಇಂಥ ಕೆಲ ಡ್ರಾಮಾಗಳ ಕಾರಣದಿಂದಲೇ ಮಂಟಪದವರೆಗೆ ಬಂದ ಮದುವೆ ಮುರಿದು ಬೀಳುತ್ತದೆ.  ಮದುವೆಗೆಂದು ಬಂದ ಅತಿಥಿಗಳು, ನೆಂಟರಿಷ್ಟರು ಈ ನಾಟಕಕ್ಕೆ ಸಾಕ್ಷಿಯಾಗಿ ಹಿಂತಿರುಗಬೇಕಾಗುತ್ತದೆ. ಇಲ್ಲೊಂದು ಮದುವೆಯಲ್ಲಿ ಇಂಥದ್ದೇ ಒಂದು ಹೈ ಡ್ರಾಮಾ ನಡೆದಿದೆ.  

ಮದುವೆ ದಿನ ತಾನು ಎಲ್ಲರಿಗಿಂತ ಸುಂದರವಾಗಿ ಕಾಣಿಸಬೇಕು. ವಿಶೇಷ ಉಡುಗೆ ತನ್ನದಾಗಿರಬೇಕು ಎಂದು ವಧು ಬಯಸುವುದು ಸಾಮಾನ್ಯ. ಆದರೆ ಮದುವೆಯಲ್ಲಿ ಕೇವಲ ಅದೇ ಮುಖ್ಯವಾಗಿರಬಾರದು. ಉತ್ತರಾಖಂಡದ ಹಲ್ದ್ವಾನಿಯ ವಧುವೊಬ್ಬಳು, ತನಗೆ ದುಬಾರಿ ಲೆಹೆಂಗಾವನ್ನು ವರನ ಕಡೆಯವರು ನೀಡಲಿಲ್ಲ ಎನ್ನುವ ಕಾರಣಕ್ಕೆ ಮದುವೆಯನ್ನೇ ನಿರಾಕರಿಸಿದ್ದಾಳೆ. ಅದು ಕೂಡಾ ಮದುವೆಯ ದಿನವೇ. 

ಇದನ್ನೂ ಓದಿ :  Viral Video : ಕೆನ್ನೆ ಮುಟ್ಟಿದ್ದಕ್ಕೆ ಕೆರಳಿ ಕೆಂಡವಾದ ವಧು .! ಮಂಟಪದಲ್ಲೇ ವಧು ವರರ ಫೈಟಿಂಗ್

ಅಗ್ಗದ ಲೆಹೆಂಗಾ ಕಂಡು ಕೆಂಡಾಮಂಡಲವಾದ ವಧು : 
ವಧುವಿನ ಲೆಹೆಂಗಾವನ್ನು ವಿಶೇಷವಾಗಿ ಮಾಡಿಸಿ ಲಕ್ನೋದಿಂದ ಖರೀದಿಸಿರುವುದಾಗಿ ವರನ ಕಡೆಯವರು ಹೇಳಿಕೊಂಡಿದ್ದಾರೆ. ಆದರೆ ಮದುವೆಯ ದಿನ ವರನ ಕಡೆಯವರು ತಂದಿರುವುದು ಕೇವಲ 10,000 ರೂಪಾಯಿ ಬೆಲೆಯ ಲೆಹೆಂಗಾ ಎನ್ನುವುದು ವಧುವಿಗೆ ಗೊತ್ತಾಗಿದೆ. ಈ ವಿಷಯ  ತಿಳಿಯುತ್ತಿದ್ದಂತೆಯೇ ಕೆರಳಿ ಕೆಂಡವಾದ ವಧು ಲೆಹೆಂಗಾವನ್ನು ಎಸೆದಿದ್ದಾಳೆ.  ಮಾತ್ರವಲ್ಲ ಇಷ್ಟು ಅಗ್ಗದ ಲೆಹೆಂಗಾ ತಂದಿರುವ ವರನನ್ನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. 

ದಿಬ್ಬಣದೊಂದಿಗೆ ಬಂದ ವರ ಖಾಲಿ ಕೈಯ್ಯಲ್ಲಿ ವಾಪಸ್ :  
ಕೊನೆಗೆ ಈ ವಿಷಯ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದೆ.  ಹಲವು ಗಂಟೆಗಳ ಕಾಲ ನಡೆದ ತೀವ್ರ ವಾಗ್ವಾದದ ನಂತರ, ಈ ಮದುವೆಯನ್ನು ರದ್ದುಗೊಳಿಸಲಾಯಿತು. ಪೊಲೀಸರು ಪ್ರಕರಣವನ್ನು ಇತ್ಯರ್ಥಪಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಫಲ ಕಾಣಲಿಲ್ಲ. ಇಷ್ಟೆಲ್ಲಾ ಆದ ನಂತರ ಮದುವೆ ಮುರಿಯುವುದೇ ಉತ್ತಮ ಎಂಬ ತೀರ್ಮಾನಕ್ಕೆ ಎರಡೂ ಮನೆಯವರು ಬಂದಿದ್ದಾರೆ. 

ಇದನ್ನೂ ಓದಿ :  Viral Video: ಗಾಳಿಪಟದೊಂದಿಗೆ ಹಾರಿ ಹೋದ ವ್ಯಕ್ತಿ, ಹೇಗಿತ್ತು ನೋಡಿ ಪರದಾಟ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More