Home> Viral
Advertisement

WATCH : ಪುಟ್ಟ ಬೆಕ್ಕನ್ನು ರಕ್ಷಿಸಲು ನಾಯಿ ಮಾಡಿದ ಉಪಾಯ ನೋಡಿ! ಕ್ಯೂಟ್‌ ವಿಡಿಯೋ ವೈರಲ್‌

Dog Saving Cat Video : ಅಂತರ್ಜಾಲದಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ನಾಯಿ ಮತ್ತು ಬೆಕ್ಕಿನ ವಿಡಿಯೋವೊಂದು ಟ್ರೆಂಡಿಂಗ್ ಆಗಿದೆ. ನಾಯಿ ಮತ್ತು ಬೆಕ್ಕಿನ ವಿಡಿಯೋಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ನಾಯಿ ಮತ್ತು ಬೆಕ್ಕಿನ ಈ ವಿಡಿಯೋ ನೋಡಿದರೆ ಖಂಡಿತವಾಗಿಯೂ ನಿಮ್ಮ ಮುಖದ ಮೇಲೆ ನಗು ಅರಳುತ್ತದೆ. 

WATCH : ಪುಟ್ಟ ಬೆಕ್ಕನ್ನು ರಕ್ಷಿಸಲು ನಾಯಿ ಮಾಡಿದ ಉಪಾಯ ನೋಡಿ! ಕ್ಯೂಟ್‌ ವಿಡಿಯೋ ವೈರಲ್‌

Dog Saving Cat Video : ಅಂತರ್ಜಾಲದಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ನಾಯಿ ಮತ್ತು ಬೆಕ್ಕಿನ ವಿಡಿಯೋವೊಂದು ಟ್ರೆಂಡಿಂಗ್ ಆಗಿದೆ. ನಾಯಿ ಮತ್ತು ಬೆಕ್ಕಿನ ವಿಡಿಯೋಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ನಾಯಿ ಮತ್ತು ಬೆಕ್ಕಿನ ಈ ವಿಡಿಯೋ ನೋಡಿದರೆ ಖಂಡಿತವಾಗಿಯೂ ನಿಮ್ಮ ಮುಖದ ಮೇಲೆ ನಗು ಅರಳುತ್ತದೆ. ಸಾಮಾನ್ಯವಾಗಿ ನಾಯಿ ಮತ್ತು ಬೆಕ್ಕು ವೈರಿಗಳಂತೆ ಕಿತ್ತಾಡುತ್ತವೆ. ನಾಯಿಗಳು ಬೆಕ್ಕನ್ನು ಕಂಡರೆ ಹಿಡಿದು ಕೊಲ್ಲುವುದನ್ನು ಸಹ ನೋಡಿರಬಹುದು. ಆದರೆ ಈ ನಾಯಿ ಪುಟ್ಟ ಬೆಕ್ಕಿನ ಮರಿಯನ್ನು ಮುಳುಗದಂತೆ ರಕ್ಷಿಸುತ್ತದೆ. ಈ ವೇಳೆ ಅದು ಮಾಡಿದ ಉಪಾಯ ನೆಟ್ಟಿಗರ ಗಮನಸೆಳೆಯುತ್ತಿದೆ.

ಇದನ್ನೂ ಓದಿ : ನಿರ್ಮಾಣದ ಜೊತೆಗೆ ನಟನೆಗೂ ಧೋನಿ ಎಂಟ್ರಿ! ದಳಪತಿ ವಿಜಯ್ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್!

ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಕಾಡಿನ ಮಧ್ಯೆ ನಾಯಿಯೊಂದು ತನ್ನ ಬಾಯಿಯ ಮೇಲೆ ಮರದ ಹಲಗೆಯೊಂದಿಗೆ ನೀರಿನಲ್ಲಿ ನಡೆದು ಹೋಗುವುದನ್ನು ಕಾಣಬಹುದು. ಇದೇಕೆ ಈ ಶ್ವಾನ ಹಲಗೆ ಹಿಡಿದು ಓಡುತ್ತಿದೆ ಎಂದು ನಿಮಗೂ ಅರೆಕ್ಷಣ ಅನಿಸುತ್ತದೆ.

 

 

ನೀರಿನ ಗುಂಡಿಯ ಮಧ್ಯದಲ್ಲಿ ಸಿಲುಕಿರುವ ಪುಟ್ಟ ಬೆಕ್ಕಿನ ಬಳಿಗೆ ಹಲಗೆ ಹಿಡಿದು ನಾಯಿ ಬರುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು. ನಾಯಿಯು ಮರದ ಹಲಗೆಯನ್ನು ಚಿಕ್ಕ ಬೆಕ್ಕಿನ ಬಳಿ ನಿಧಾನವಾಗಿ ಇರಿಸುತ್ತದೆ. ಬಳಿಕ ಈ ಹಲಗೆಯ ಸಹಾಯದಿಂದ ಈ ಬೆಕ್ಕಿನ ಮರಿ ನೀರನ್ನು ದಾಟಿ ದಡಕ್ಕೆ ಹೋಗುತ್ತದೆ. 

ಹೀಗೆ ನಾಯಿಯೊಂದು ಬೆಕ್ಕಿನ ಮರಿಯನ್ನು ಪ್ರಾಣಾಪಾಯದಿಂದ ಕಾಪಾಡುವ ದೃಶ್ಯ ಎಲ್ಲೆಟೆ ವೈರಲ್‌ ಆಗಿದೆ. ಸಾಕಷ್ಟು ನೆಟ್ಟಿಗರು ಇದನ್ನು ಮೆಚ್ಚಿಕೊಂಡಿದ್ದಾರೆ. ವಿವಿಧ ರೀತಿ ಕಾಮೆಂಟ್‌ಗಳನ್ನು ಸಹ ಜನ ಮಾಡುತ್ತಿದ್ದಾರೆ. ಒಟ್ಟಾರೆ ಈ ಕ್ಯೂಟ್‌ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ಹರಿದಾಡುತ್ತಿದೆ. 

ಇದನ್ನೂ ಓದಿ : ಗೂಗಲ್‌ ಸರ್ಚ್‌, ದ್ವೇಷವಾಗಿ ಬದಲಾದ ಪ್ರೀತಿ.. ಶ್ರದ್ಧಾ ಕೊಲೆಯ ಕರಾಳ ಕಹಾನಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More