Home> Viral
Advertisement

Viral Video : ಹಾವನ್ನೇ ಶೂವಾಗಿಸಿದ ಭೂಪ ! ನಡೆದಾಡಿಕೊಂಡು ಹೋಗುತ್ತಿದ್ದರೆ ಜುಮ್ಮೆನ್ನುತ್ತದೆ ಮೈ ಮನ !

Viral Video : ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಶೂ ವೊಂದು ಭಾರೀ ಸದ್ದು ಮಾಡುತ್ತಿದೆ. ಆ ಶೂ ತಲೆ ಎತ್ತಿ ನಿಂತಿರುವ ನಾಗರಹಾವಿನ ವಿನ್ಯಾಸದಲ್ಲಿದೆ. 

Viral Video : ಹಾವನ್ನೇ ಶೂವಾಗಿಸಿದ ಭೂಪ ! ನಡೆದಾಡಿಕೊಂಡು ಹೋಗುತ್ತಿದ್ದರೆ ಜುಮ್ಮೆನ್ನುತ್ತದೆ ಮೈ ಮನ !

Viral Video : ಇತ್ತೀಚಿನ ದಿನಗಳಲ್ಲಿ ಎಲ್ಲವೂ ಫ್ಯಾಷನ್.  ಫ್ಯಾಷನ್ ಎನ್ನುವ ಹೆಸರಿನಲ್ಲಿ ಏನು ಮಾಡಿದರೂ ನಡೆಯುತ್ತದೆ. ಹೇಗೆ ಆಡಿದರೂ ನಡೆಯುತ್ತದೆ ಎನ್ನುವ ಮನಸ್ಥಿತಿಗೆ ಬಂದು ತಲುಪಿದ್ದೇವೆ. ಇಲ್ಲಿಯವರೆಗೆ ಬಟ್ಟೆಗಳಲ್ಲಿ ವಿವಿಧ ರೀತಿಯ ವಿನ್ಯಾಸಗಳನ್ನು ನೋಡುತ್ತಿದ್ದೆವು. ಅಲ್ಲಿ ತುಂಡು ಬಟ್ಟೆ, ಹರಿದ ಬಟ್ಟೆ, ಹರಿದ ಪ್ಯಾಂಟ್ ಎಲ್ಲದಕ್ಕೂ ಫ್ಯಾಷನ್ ಹೆಸರು ಕೊಡಲಾಗಿದೆ. ಒಂದು ವೇಳೆ ಯಾರಾದರೂ ಇದನ್ನೂ ಪ್ರಶ್ನೆ ಮಾಡಿದರೆ ಅವರೇ ಅವಹೇಳನಕ್ಕೆ ಗುರಿಯಾಗಬೇಕು. ಈಗ ಈ ಫ್ಯಾಷನ್ ಸರದಿ  ಬೂಟಿನದ್ದು. ಈ ವಿಶೇಷ ಶೂವನ್ನು ನೋಡುವಾಗ ಒಮ್ಮೆ ಎಂಥವರೂ ಬೆಚ್ಚಿ ಬೀಳಬೇಕು. 

ಧಾರ್ಮಿಕ ವಿಚಾರಗಳಲ್ಲಿ ನಂಬಿಕೆ ಇರುವವರು ಸಾಮಾನ್ಯವಾಗಿ ಹಾವಿಗೆ ದೇವರ ಸ್ಥಾನವನ್ನು ನೀಡುತ್ತಾರೆ.  ಈ ಕಾರಣದಿಂದಲೇ ನಾಗಪ್ಪ, ನಗ ದೇವರು, ನಾಗ ರಾಜ ಎಂದೆಲ್ಲಾ ಕರೆಯುತ್ತಾರೆ. ಎದುರಿಗೆ ನಾಗರ ಹಾವು ಬಂದು ನಿಂತರೆ ತಲೆ ಬಾಗಿ ಕೈ ಮುಗಿಯುತ್ತಾರೆ. ಇನ್ನು ಕರಾವಳಿ ಭಾಗಗಳಲ್ಲಿ ನಾಗನ ಪೂಜೆಗೆ ವಿಶೇಷ ಮನ್ನಣೆ ಇದೆ. ಮಾತ್ರವಲ್ಲ ಈ ಭಾಗದಲ್ಲಿ ನಾಗ ಕಂಡರೆ ಮನುಷ್ಯರಲ್ಲಿ ಮಾತನಾಡುವಂತೆ ಮಾತನಾಡಿಸುತ್ತಾರೆ. ಮತ್ತೆ ಆ ಜಾಗದಲ್ಲಿ ಕಾಣಿಸಿಕೊಳ್ಳದಂತೆ  ಮನವಿ ಮಾಡುತ್ತಾರೆ. ಇವೆಲ್ಲವೂ ನಂಬಿಕೆಗೆ ಬಿಟ್ಟ ವಿಚಾರ. 

ಇದನ್ನೂ ಓದಿ : Video Viral : ವಿದ್ಯಾ ದೇಗುಲದ ಒಳಗೆಯೇ ಕಿಸ್ಸಿಂಗ್ - ಹಗ್ಗಿಂಗ್ ! ಅದೇನು ಪಾಠ ಕಲಿಯುತ್ತಾರೋ ಈ ವಿದ್ಯಾರ್ಥಿಗಳು !

ಇಷ್ಟೆಲ್ಲಾ ಇಲ್ಲಿ ಯಾಕೆ ಹೇಳುತ್ತಿದ್ದೇವೆ ಎಂದರೆ ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಶೂ ವೊಂದು ಭಾರೀ ಸದ್ದು ಮಾಡುತ್ತಿದೆ. ಆ ಶೂ ತಲೆ ಎತ್ತಿ ನಿಂತಿರುವ ನಾಗರಹಾವಿನ ವಿನ್ಯಾಸದಲ್ಲಿದೆ. ಅದನ್ನು ಕಾಲಿಗೆ ಹಾಕಿಕೊಂಡು ವ್ಯಕ್ತಿಯೊಬ್ಬ ನಡೆದಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಈ ವಿಡಿಯೋ ನೋಡುವಾಗ ಒಂದು ಕ್ಷಣಕ್ಕೆ ಎದೆ ಝಲ್ಲೆನ್ನುತ್ತದೆ.  

 

ಇದನ್ನೂ ಓದಿ : Trending Video : ಹುಡುಗಿ ಹಾಟ್ ಡ್ಯಾನ್ಸ್ ಕಂಡು ದಂಗಾದ ನೆಟ್ಟಿಗರು.!

ಉದ್ಯಮಿ ಹರ್ಷ್ ಗೋಯೆಂಕಾ ಅವರು ವೀಡಿಯೊವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.  ಈ ವಿಡಿಯೋ ವೀಕ್ಷಿಸಿದವರು ಕೂಡಾ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More