Home> Viral
Advertisement

Viral News: ಭಾರತದ ಈ ಗ್ರಾಮದಲ್ಲಿ 32 ಎಕರೆ ಜಮೀನಿಗೆ ಮಂಗಗಳೇ ಒಡೆಯ! ಇದರ ಹಿಂದಿನ ಕಾರಣವೇನು?

ಒಸ್ಮಾನಾಬಾದ್‌ನ ಉಪಲಾ ಗ್ರಾಮದಲ್ಲಿ ಮಂಗಗಳು ಯಾರ ಮನೆಗೆ ಹೋಗಲಿ ಅವುಗಳಿಗೆ ಅಲ್ಲಿನ ಜನರು ವಿಶೇಷ ಗೌರವ ನೀಡುತ್ತಾರೆ. ಈ ಗ್ರಾಮದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಮಂಗಗಳು ಸಹ ಭಾಗವಹಿಸುತ್ತವಂತೆ.   

Viral News: ಭಾರತದ ಈ ಗ್ರಾಮದಲ್ಲಿ 32 ಎಕರೆ ಜಮೀನಿಗೆ ಮಂಗಗಳೇ ಒಡೆಯ! ಇದರ ಹಿಂದಿನ ಕಾರಣವೇನು?

ನವದೆಹಲಿ: ಜನರಲ್ಲಿ ಭೂ ವಿವಾದಗಳು ಸಾಮಾನ್ಯವಾಗಿರುವ ಈ ಕಾಲದಲ್ಲಿ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ 32 ಎಕರೆ ಭೂಮಿಯನ್ನು ಮಂಗಗಳ ಹೆಸರಿಗೆ ನೋಂದಾಯಿಸಲಾಗಿದೆ. ಇದು ಅಚ್ಚರಿಯಾದರೂ ನಿಜ. ವಿಶೇಷ ಅಂದರೆ ಈ ಮಂಗಗಳಿಗೆ ಉಸ್ಮಾನಾಬಾದ್‌ನ ಉಪಲಾ ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಬಹಳ ಗೌರವ ನೀಡುತ್ತಾರೆ. ಅಷ್ಟೇ ಅಲ್ಲ ಕೆಲವೊಮ್ಮೆ ಮದುವೆಯಲ್ಲೂ ಗೌರವಿಸುತ್ತಾರೆ. ಉಪಳ ಗ್ರಾಮ ಪಂಚಾಯಿತಿ ಬಳಿ ಪತ್ತೆಯಾದ ಭೂ ದಾಖಲೆಗಳಲ್ಲಿ 32 ಎಕರೆ ಜಮೀನು ಗ್ರಾಮದಲ್ಲಿ ವಾಸಿಸುತ್ತಿರುವ ಎಲ್ಲ ಕೋತಿಗಳ ಹೆಸರಿನಲ್ಲಿದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

ಇದನ್ನೂ ಓದಿಹಬ್ಬದ ಸೀಸನ್ ನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ರೂಪಾಂತರಿ: ಈ ರಾಜ್ಯದಲ್ಲಿ ಕಠಿಣ ಕ್ರಮ ಜಾರಿ

ಜಮೀನು ದಾಖಲೆಗಳಲ್ಲಿ ಮಂಗಗಳ ಹೆಸರು

ಈ ಬಗ್ಗೆ ಗ್ರಾಮದ ಸರಪಂಚ್ ಬಪ್ಪಾ ಪಡವಾಲ್ ಮಾತನಾಡಿ, ‘ದಾಖಲೆಗಳಲ್ಲಿ ಒಟ್ಟು 32 ಎಕರೆ ಜಮೀನು ಮಂಗಳಿಗೆ ಸೇರಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಈ ಪ್ರಾಣಿಗಳಿಗೆ ಯಾರು ಮತ್ತು ಯಾವಾಗ ಈ ವ್ಯವಸ್ಥೆ ಮಾಡಿದ್ದಾರೆಂಬುದು ತಿಳಿದಿಲ್ಲ. ಈ ಹಿಂದೆ ಗ್ರಾಮದಲ್ಲಿ ನಡೆಯುವ ಎಲ್ಲ ಆಚರಣೆಗಳಲ್ಲಿ ಮಂಗಗಳು ಸೇರುತ್ತಿದ್ದವಂತೆ. ಗ್ರಾಮದಲ್ಲಿ ಈಗ ಸುಮಾರು 100 ಮಂಗಗಳು ವಾಸವಾಗಿವೆ. ಪ್ರಾಣಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲ ಉಳಿಯದ ಕಾರಣ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಊರಿನ ಗ್ರಾಮಸ್ಥರು ಇಲ್ಲಿನ ಮಂಗಗಳಿಗೆ ವಿಶೇಷ ಗೌರವ ನೀಡುತ್ತಾರೆ’ ಎಂದು ತಿಳಿಸಿದ್ದಾರೆ.  

ಇದನ್ನೂ ಓದಿ: Himachal Pradesh Assembly Election: ಹಿಮಾಚಲ ಪ್ರದೇಶ ಚುನಾವಣೆಗೆ 62 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಮಂಗಗಳಿಗೆ ಆಹಾರ ನೀಡುವ ಗ್ರಾಮಸ್ಥರು

‘ಅರಣ್ಯ ಇಲಾಖೆಯ ಜಮೀನಿನಲ್ಲಿ ನೆಡುತೋಪು ಕಾಮಗಾರಿ ನಡೆಸಲಾಗಿದೆ. ನಿವೇಶನದಲ್ಲಿ ಪಾಳು ಬಿದ್ದ ಮನೆಯೂ ಇದ್ದು, ಈಗ ಕುಸಿದು ಬಿದ್ದಿದೆ. ಅಲ್ಲಿ ಹೆಚ್ಚಿನ ಮಂಗಗಳು ವಾಸವಾಗಿವೆ. ಈ ಹಿಂದೆ ಗ್ರಾಮದಲ್ಲಿ ಮದುವೆ ನಡೆದಾಗಲೆಲ್ಲಾ ಕೋತಿಗಳಿಗೆ ಮೊದಲು ಉಡುಗೊರೆ ನೀಡಿ ನಂತರವೇ ಸಮಾರಂಭ ಆರಂಭವಾಗುತ್ತಿತ್ತು. ಈಗ ಎಲ್ಲರೂ ಈ ಅಭ್ಯಾಸವನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಮಂಗಗಳು ಮನೆಬಾಗಿಲಿಗೆ ಬಂದಾಗಲೆಲ್ಲ ಗ್ರಾಮಸ್ಥರು ಅವುಗಳಿಗೆ ಆಹಾರ ನೀಡಿ ಸತ್ಕರಿಸುತ್ತಾರೆ. ಅವುಗಳಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ, ಮಂಗಗಳು ಸಹ ಗ್ರಾಮದಲ್ಲಿರುವವರಿಗೆ ಯಾವುದೇ ರೀತಿಯ ತೊಂದರೆ ಮಾಡಿಲ್ಲ’ವೆಂದು ಸರಪಂಚ್ ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More