Home> Viral
Advertisement

ಕ್ಲಾಸ್‌ ರೂಂನಲ್ಲೇ ಜಡೆ ಹಿಡಿದು ಜಗಳವಾಡಿದ ಯವತಿಯರು..! ವಿಡಿಯೋ ವೈರಲ್‌

ಶಾಲೆ ಮಕ್ಕಳಿಗೆ ಜ್ಞಾನ ಮತ್ತು ತಿಳುವಳಿಕೆ ನೀಡುವ ದೇಗುಲವಿದ್ದಂತೆ. ಆದರೆ ಈಗ ವೈರಲ್ ಆಗುತ್ತಿರುವ ವೀಡಿಯೋ ನೋಡಿದ್ರೆ ನಿಜವಾಗ್ಲೂ ಆ ಮಾತು ತಪ್ಪು ಎನಿಸುತ್ತದೆ. ನಿಮಗೇ ಗೊತ್ತಿದೆ, ತರಗತಿಯಲ್ಲಿ ಗುರುವಿಗೆ ಅಗೌರವ ನೀಡುವ ವಿದ್ಯಾರ್ಥಿಗಳ ಅದೇಷ್ಟೋ ವಿಡಿಯೋಗಳು ಸೊಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಅಂತ. ಇದೀಗ ಮೂವರು ಹುಡುಗಿಯರು ವಿದ್ಯಾಮಂದಿರದಲ್ಲಿ ಜಗಳವಾಡಿರುವ ವಿಡಿಯೋ ವೈರಲ್‌ ಆಗಿದೆ.

ಕ್ಲಾಸ್‌ ರೂಂನಲ್ಲೇ ಜಡೆ ಹಿಡಿದು ಜಗಳವಾಡಿದ ಯವತಿಯರು..! ವಿಡಿಯೋ ವೈರಲ್‌

Viral video : ಶಾಲೆ ಮಕ್ಕಳಿಗೆ ಜ್ಞಾನ ಮತ್ತು ತಿಳುವಳಿಕೆ ನೀಡುವ ದೇಗುಲವಿದ್ದಂತೆ. ಆದರೆ ಈಗ ವೈರಲ್ ಆಗುತ್ತಿರುವ ವೀಡಿಯೋ ನೋಡಿದ್ರೆ ನಿಜವಾಗ್ಲೂ ಆ ಮಾತು ತಪ್ಪು ಎನಿಸುತ್ತದೆ. ನಿಮಗೇ ಗೊತ್ತಿದೆ, ತರಗತಿಯಲ್ಲಿ ಗುರುವಿಗೆ ಅಗೌರವ ನೀಡುವ ವಿದ್ಯಾರ್ಥಿಗಳ ಅದೇಷ್ಟೋ ವಿಡಿಯೋಗಳು ಸೊಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಅಂತ. ಇದೀಗ ಮೂವರು ಹುಡುಗಿಯರು ವಿದ್ಯಾಮಂದಿರದಲ್ಲಿ ಜಗಳವಾಡಿರುವ ವಿಡಿಯೋ ವೈರಲ್‌ ಆಗಿದೆ.

ವೈರಲ್‌ ವಿಡಿಯೋದಲ್ಲಿ ಮೂವರು ಯುವತಿಯರು ಶಾಲಾ ಕೊಠಡಿಯನ್ನು ಯುದ್ಧಭೂಮಿಯ ಅಂತ ಅಂದುಕೊಂಡು ಯಾರ ಅಂಜಿಕೆ ಇಲ್ಲದೆ ಜಗಳವಾಡುತ್ತಿರುವುದನ್ನು ನೋಡಬಹುದು. ಇದರಲ್ಲಿ ಇಬ್ಬರು ಹುಡುಗಿಯರು ಸೇರಿ ಒಬ್ಬ ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಒಂಟಿ ಹುಡುಗಿಯೂ ಕಡಿಮೆಯಿಲ್ಲ. ಅವಳು ತನ್ನ ಎರಡು ಕೈಗಳಿಂದ ಇಬ್ಬರು ಹುಡುಗಿಯರ ಕೂದಲನ್ನು ಹಿಡಿದಿದ್ದಾರೆ. ಈ ವಿಡಿಯೋ ನೋಡಲು ತಮಾಷೆ ಅನಿಸಿದ್ರೂ ಸಹ, ಇಂದಿನ ಶಾಲಾ ಶಿಕ್ಷಣದ ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ.

ಇದನ್ನೂ ಓದಿ: ರಸ್ತೆ ಮಧ್ಯ ಕಾರ್‌ ನಿಲ್ಲಿಸಿ ರಿಲ್ಸ್‌ ಮಾಡಿದ ಬ್ಯೂಟಿಗೆ 17 ಸಾವಿರ ರೂ. ದಂಡ..!

ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರಕಾರ ಇದು ಕಾನ್ಪುರದ ಪ್ರಸಿದ್ಧ ಶಾಲೆಯಲ್ಲಿ ನಡೆದ ಘಟನೆಯ ವೀಡಿಯೊವಾಗಿದೆ. ಹುಡುಗಿಯರನ್ನು ಥಳಿಸುತ್ತಿರುವಾಗ, ಇತರ ವಿದ್ಯಾರ್ಥಿಗಳು ಬಂದು ಅವರನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಆದರೂ ಮೂವರನ್ನೂ ಯಾರ ಮಾತನ್ನು ಕೇಳದೆ ತಮ್ಮ ಜಗಳವನ್ನು ಮುಂದುವರೆಸುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಸ್ವಲ್ಪ ಹಳೆಯದಾದರೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. 93.3k ಲೈಕ್‌ಗಳನ್ನು ಪಡೆದುಕೊಂಡಿದೆ.

ಅದೊಂದು ಕಾಲವಿತ್ತು, ಗುರುಗಳಿಗೆ ಅಂಜಿ ಶಾಲೆಯಲ್ಲಿ ಶಾಂತ ರೀತಿಯಿಂದ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಇದ್ದರು. ಗುರುಗಳು ಸಹ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಆದರೆ, ಇಂದು ಎಲ್ಲವೂ ಬದಲಾಗಿದೆ. ವಿದ್ಯಾಮಂದಿರಗಳು ವ್ಯಾಪರಕ್ಕೆ ನಿಂತಿವೆ. ಕೆಲ ವಿದ್ಯಾರ್ಥಿಗಳು ಗುರುಗಳಿಗೆ ಗೌರವ ನೀಡುವುದಿಲ್ಲ, ಕೆಲವು ಶಿಕ್ಷಕರು ಸಹ ವಿದ್ಯಾರ್ಥಿನಿಯರ ಮೇಲೆಯೇ ಅತ್ಯಾಚಾರ ಎಸಗುತ್ತಿದ್ದಾರೆ. ಇನ್ನೂ ಇದು ಎಲ್ಲಿವರೆಗೆ ಹೋಗುತ್ತೆ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More