Home> Viral
Advertisement

Viral Video: ಬ್ರೇಕಪ್ ಬೇಡ ಅಂತ ಶಾಲಾ ಬಾಲಕಿ ಕಾಲು ಹಿಡ್ಕೊಂಡು ಗೋಗರೆದ ಬಾಲಕ… ಮುಂದೇನಾಯ್ತು?

"ಬೇಬಿ ಮಾನ್ ಜಾವೋ ನಾ" ಎಂಬ ಟೈಟಲ್ ನೀಡಿದ್ದು, 'ಫಂಟಾಪ್' ಎಂಬ ಮೀಮ್ಸ್ ಪೇಜ್ ನಿಂದ ವೀಡಿಯೊವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. 73 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 4,600 ಲೈಕ್‌ಗಳೊಂದಿಗೆ ರೀಲ್ ವೈರಲ್ ಆಗಿದೆ.

Viral Video: ಬ್ರೇಕಪ್ ಬೇಡ ಅಂತ ಶಾಲಾ ಬಾಲಕಿ ಕಾಲು ಹಿಡ್ಕೊಂಡು ಗೋಗರೆದ ಬಾಲಕ… ಮುಂದೇನಾಯ್ತು?

Today viral video: ಮೊದಲ ಪ್ರೀತಿಯು ಅದ್ಭುತವಾದ ಮತ್ತು ಹೃದಯವಿದ್ರಾವಕ ಜೀವನ ಅನುಭವವಾಗಿದ್ದು ಅದು ನಿಮಗೆ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ. ಮೊದಲ ಪ್ರೀತಿ ಮತ್ತು ಮೊದಲ ಆಘಾತ ಯಾವಾಗಲೂ ತೀವ್ರವಾದ ಭಾವನೆಗಳನ್ನು ಒಳಗೊಂಡಿರುತ್ತದೆ. ಅನೇಕ ಜನರು ತಮ್ಮ ಶಾಲಾ ಜೀವನದಲ್ಲಿ ಈ ಅನುಭವವನ್ನು ಹೊಂದಿರುತ್ತಾರೆ. 

ಇದನ್ನೂ ಓದಿ:  Viral Video: ಮೈಮೇಲೆ ರೈಲು ಹರಿದರೂ ಬದುಕುಳಿದ ಭೂಪ: ಮೈಜುಂ ಎನ್ನುವಂತಿದೆ ವಿಡಿಯೋ

ಇದೀಗ ಅಂತಹ ಹೃದಯವಿದ್ರಾವಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ್ರೆ ನಗು ಬರುವಂತಿದೆ. ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ಮರಳಿ ಪಡೆಯಲು ಹುಡುಗಿಯ ಕಾಲಿಗೆ ಬಿದ್ದು ಗೋಗರಿತಿದ್ದಾನೆ. 

"ಬೇಬಿ ಮಾನ್ ಜಾವೋ ನಾ" ಎಂಬ ಟೈಟಲ್ ನೀಡಿದ್ದು, 'ಫಂಟಾಪ್' ಎಂಬ ಮೀಮ್ಸ್ ಪೇಜ್ ನಿಂದ ವೀಡಿಯೊವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. 73 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 4,600 ಲೈಕ್‌ಗಳೊಂದಿಗೆ ರೀಲ್ ವೈರಲ್ ಆಗಿದೆ.

 

 

ವೀಡಿಯೋದಲ್ಲಿ, ತನ್ನ ಗೆಳೆಯನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡ ಶಾಲಾ ಬಾಲಕಿ ಫುಟ್‌ಪಾತ್‌ನಲ್ಲಿ ನಿಂತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಶಾಲಾ ಬಾಲಕ ಬಂದು ನೆಲದ ಮೇಲೆ ಕುಳಿತು ಕಾಲನ್ನು ಹಿಡಿದುಕೊಂಡು ಬಾಲಕಿ ಬಳಿ ಕೈಮುಗಿದು ತನ್ನ ಪ್ರೀತಿಯನ್ನು ದೂರ ಮಾಡದಂತೆ ಬೇಡಿಕೊಳ್ಳುತ್ತಿದ್ದಾನೆ.

ಹುಡುಗನು ಹುಡುಗಿಯ ಪಾದಗಳನ್ನು ಸ್ಪರ್ಶಿಸುವುದನ್ನು ಮತ್ತು ಅವಳನ್ನು ಮನವೊಲಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಆದರೆ ಅವಳು ಇಲ್ಲ ಎಂದು ತಲೆಯಾಡಿಸುತ್ತಾಳೆ. 

ಇದನ್ನೂ ಓದಿ:  Viral Video : ಮದುಮಗನಾದ 102 ವರ್ಷದ ವೃದ್ಧ, ಬಾರಾತ್‌ನಲ್ಲಿ ಕಂಗೊಳಿಸಿದ್ದು ಹೀಗೆ

ಹುಡುಗನು ಹುಡುಗಿಯ ಪಾದಗಳನ್ನು ಹಿಡಿದಿದ್ದಾನೆ ಮತ್ತು ಅವಳನ್ನು ದೂರ ಹೋಗಲು ಬಿಡುವುದಿಲ್ಲ. ನೆಟಿಜನ್‌ಗಳು ಈ ದೃಶ್ಯವನ್ನು ಉಲ್ಲಾಸದಿಂದ ಕಂಡು ಕಾಮೆಂಟ್‌ಗಳಲ್ಲಿ ವ್ಯಕ್ತಿಯನ್ನು ಗೇಲಿ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More