Home> Viral
Advertisement

Ranu Mondal Video : ರಾನು ಮಂಡಲ್ ಹೊಸ ವಿಡಿಯೋ ವೈರಲ್‌, ಹಾಡು ಕೇಳಿ ದಂಗಾದ ನೆಟ್ಟಿಗರು

Ranu Mondal Video : ಏಕ್ ಪ್ಯಾರ್ ಕಾ ನಗ್ಮಾ... ಹಾಡುವ ಮೂಲಕ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ ರಾನು ಮಂಡಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಿಂದೆ ಕೇಳಿರಬಹುದಾದ ಹಾಡನ್ನು ಈ ಬಾರಿ ಹಾಡಿದ್ದಾರೆ.

Ranu Mondal Video : ರಾನು ಮಂಡಲ್ ಹೊಸ ವಿಡಿಯೋ ವೈರಲ್‌, ಹಾಡು ಕೇಳಿ ದಂಗಾದ ನೆಟ್ಟಿಗರು

Ranu Mondal Video : ಏಕ್ ಪ್ಯಾರ್ ಕಾ ನಗ್ಮಾ... ಹಾಡುವ ಮೂಲಕ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ ರಾನು ಮಂಡಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಿಂದೆ ಕೇಳಿರಬಹುದಾದ ಹಾಡನ್ನು ಈ ಬಾರಿ ಹಾಡಿದ್ದಾರೆ.  ರಾನು ಮಂಡಲ್ ಅವರು 'ಕಚ್ಚಾ ಬಾದಮ್' ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿಂದೆ ರಾನು ಮಂಡಲ್ ಹಾಡಿದ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಇದಾದ ನಂತರ ಅವರು ಹಾಡಿದ ಹಾಡು, ಅವರ ಧ್ವನಿಯನ್ನು ಕೇಳಲು ಜನ ಇಷ್ಟಪಡುತ್ತಿದ್ದರು. ಹಾಡು ಬೇರೆ ಬೇರೆ ವೇದಿಕೆಗಳಲ್ಲಿ ಸದ್ದು ಮಾಡಿತು. ಅದಾದ ಮೇಲೆ ರಾನು ಮೊಂಡಲ್‌ ಬೇರೆ ಬೇರೆ ಕಾರಣಗಳಿಗೆ ಟ್ರೋಲ್‌ ಆದರು. ಇದೀಗ ರಾನು ಮೊಂಡಲ್‌ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.

ಇದನ್ನೂ ಓದಿ : Trending Video : ಜೀವಂತ ವಿಷಕಾರಿ ಹಾವನ್ನು ನೂಡಲ್ಸ್‌ನಂತೆ ನುಂಗಿದ ಬಾತುಕೋಳಿ!

ಇದೀಗ ರಾನು ಮೊಂಡಲ್‌ ಅವರ ಈ ವೈರಲ್‌ ವಿಡಿಯೋದಲ್ಲಿ ಅವರು ಹಾಡನ್ನು ಹಾಡುವ ಮುನ್ನ ವಧುವಿನಂತೆ ವೇಷ ಧರಿಸಿ ಬಂದಿದ್ದನ್ನು ಕಾಣಬಹುದು. ಸೀರೆ ಉಟ್ಟಿದ್ದಾರೆ. ಕೊರಳಲ್ಲಿ ಹಾರ, ಕಿವಿಗೆ ಕಿವಿಯೋಲೆ ಹಾಕಿದ್ದಾರೆ. ರಾನು ಮೊಂಡಲ್‌ ಕಚ್ಚಾ ಬಾದಾಮ್‌ ಹಾಡನ್ನು ಹಾಡಿದ್ದಾರೆ. ಇಲ್ಲಿ ಅವರು ಮೂಲ ಹಾಡಿನ ಟೋನ್‌ ಬದಲಿಸಿ ಕಚ್ಚಾ ಬಾದಾಮ್‌ ಹಾಡನ್ನು ಹೇಳಿದ್ದಾರೆ. ಬಳಿಕ ಅವರೇ ನಗುತ್ತಾರೆ. 

 

 

ರಾನು ಮೊಂಡಲ್‌ ಕಚ್ಚಾ ಬಾದಾಮ್‌ ಹಾಡನ್ನು ಹೇಳಿದ ರೀತಿ ಮತ್ತು ಅವರು ತಯಾರಾದದ್ದನ್ನು ಕಂಡು ನಿಮಗೆ ತಡೆಯಲಾಗುವುದಿಲ್ಲ. ಈ ವಿಡಿಯೋವನ್ನು ನೆಟಿಜನ್‌ಗಳು ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಹಲವರು ಕಾಮೆಂಟ್‌ಗಳನ್ನೂ ಮಾಡುತ್ತಿದ್ದಾರೆ. 

ಇದನ್ನೂ ಓದಿ : Viral Video: ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ! ಪಕ್ಕದಲ್ಲಿದ್ದ ಹುಡುಗಿ ಮಾಡಿದ್ದೇನು ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More