Home> Viral
Advertisement

Peacock Viral Video: ಹಚ್ಚ ಹಸಿರಿನ ಮಧ್ಯೆ ಗರಿಬಿಚ್ಚಿ ಕುಣಿದಾಡಿದ ನವಿಲು: ಎಷ್ಟೊಂದು ಸುಂದರ ಈ ದೃಶ್ಯ

Today’s Peacock Video: ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಈ ವಿಡಿಯೋವನ್ನು Buitengebieden ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಮೂರು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ನಾನಾ ರೀತಿಯ ಕಮೆಂಟ್ ಗಳು ಈ ವಿಡಿಯೋಗೆ ಬಂದಿವೆ. ಪಾರ್ಕ್ ಒಂದರಲ್ಲಿ ನವಿಲು ಕ್ಯಾಮರಾದ ಮುಂದೆ ಗರಿಬಿಚ್ಚಿ ನಿಂತಿದೆ. ಹಚ್ಚ ಹಸಿರಿನ ಮಧ್ಯೆ ರಾಷ್ಟ್ರ ಪಕ್ಷಿಯ ಈ ಅಂದ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಿದೆ.

Peacock Viral Video: ಹಚ್ಚ ಹಸಿರಿನ ಮಧ್ಯೆ ಗರಿಬಿಚ್ಚಿ ಕುಣಿದಾಡಿದ ನವಿಲು: ಎಷ್ಟೊಂದು ಸುಂದರ ಈ ದೃಶ್ಯ

Today’s Peacock Video: ದಿನ ಬೆಳಗಾದರೆ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಮನಸ್ಸಿಗೆ ಮುದ ನೀಡುವ ವಿಡಿಯೋ ಒಂದೆಡೆಯಾದರೆ, ಇನ್ನೂ ಕೆಲವು ಕಣ್ಣೀರು ತರಿಸುತ್ತದೆ. ಇವೆಲ್ಲದರ ಹೊರತಾಗಿ ಕೆಲವೊಂದಿಷ್ಟು ನಕ್ಕು ನಕ್ಕು ಸುಸ್ತಾಗುವಂತೆ ಮಾಡುತ್ತವೆ. ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ಕಂಡ ಕ್ಷಣ ವಾವ್ಹ್…  ಅನಿಸದೆ ಇರದು.

ಇದನ್ನೂ ಓದಿ: Viral Video: ವಾವ್ಹ್.. ಹೇಗಿದೆ ನೋಡಿ ಪುಟ್ಟ ಮಗುವಿನ ಸ್ನಾನ..!

ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಈ ವಿಡಿಯೋವನ್ನು Buitengebieden ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಮೂರು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ನಾನಾ ರೀತಿಯ ಕಮೆಂಟ್ ಗಳು ಈ ವಿಡಿಯೋಗೆ ಬಂದಿವೆ.

 

 

ಪಾರ್ಕ್ ಒಂದರಲ್ಲಿ ನವಿಲು ಕ್ಯಾಮರಾದ ಮುಂದೆ ಗರಿಬಿಚ್ಚಿ ನಿಂತಿದೆ. ಹಚ್ಚ ಹಸಿರಿನ ಮಧ್ಯೆ ರಾಷ್ಟ್ರ ಪಕ್ಷಿಯ ಈ ಅಂದ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಿದೆ. ಈ ವಿಡಿಯೋ ಕಮೆಂಟ್ ಮಾಡಿರುವ ನೆಟ್ಟಿಗರು, ‘ತುಂಬಾ ಮುದ್ದಾಗಿದೆ’ ಎಂದು ಹೇಳಿದ್ದಾರೆ. ಮತ್ತೊಬ್ಬರು, “ ಅವುಗಳು ಮುದ್ದಾಗಿವೆ ನಿಜ. ಆದರೆ ಅದರ ಸ್ವರ ಕೇಳಿದ್ದೀರಾ? ತುಂಬಾ ಜೋರಾಗಿವೆ. ನಾನು ಬೆಳೆದ ಊರಿನಲ್ಲಿ ಅವುಗಳು ಸುತ್ತಾಡುತ್ತಿದ್ದವು. ಹೊಲದಲ್ಲಿ, ಛಾವಣಿಯ ಮೇಲೆ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿದ್ದವು” ಎಂದು ಬಾಲ್ಯವನ್ನು ನೆನಪಿಸಿಕೊಂಡರು.

ಇನ್ನೂ ಕೆಲವರು “ಹೆಣ್ಣನ್ನು ಆಕರ್ಷಿಸಲು ಗಂಡು ಯಾವಾಗಲೂ ಪ್ರಯತ್ನಿಸುತ್ತಾನೆ” ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೊಬ್ಬ ನೆಟ್ಟಿಗ “ಸೀನು ಬಂದಾಗ ಅನುಭವಿಸುವ ಭಾವನೆ” ಎಂದು ಗೇಲಿ ಮಾಡಿದ್ದಾನೆ. ಹೀಗೆ ಮತ್ತೊಬ್ಬಳು ಯುವತಿ, “ಸರಿ ಸರಿ, ನಾನು ನಿನ್ನನ್ನು ಮದುವೆಯಾಗುವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Video Viral : ಕಾರ್ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ!

ಇಂತಹದ್ದೇ ರೀತಿಯಲ್ಲಿ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಲು ಎರಡು ಕಣ್ಣು ಸಾಲದು ಎಂಬಂತಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More