Home> Viral
Advertisement

Viral video : ಪೇಪರ್ ಕತ್ತರಿಸಿ ತನ್ನ ರೆಕ್ಕೆ ಮಾಡಿಕೊಂಡ ಮುದ್ದು ಗಿಳಿ

Viral video : ಇದೀಗ ಗಿಳಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಕೊಕ್ಕಿನ ಮೂಲಕ ಕತ್ತರಿಸಿ ಆ ಕಾಗದದ ತುಂಡುಗಳನ್ನು ರೆಕ್ಕೆಯಂತೆ ಜೋಡಿಸಿಕೊಂಡಿರುವ  ವಿಡಿಯೋ  ವೈರಲ್ ಆಗುತ್ತಿದೆ. 

Viral video : ಪೇಪರ್ ಕತ್ತರಿಸಿ ತನ್ನ ರೆಕ್ಕೆ ಮಾಡಿಕೊಂಡ ಮುದ್ದು ಗಿಳಿ

Viral video : ಬಹುತೇಕ ಜನರು ತಮ್ಮ ಬಿಡುವಿನ ಸಮಯದಲ್ಲಿ  ಸಾಮಾಜಿಕ ಮಾಧ್ಯಮಗಳಲ್ಲಿನ ವಿಡಿಯೋ ನೋಡುವ ಮೂಲಕ ಕಳೆಯುತ್ತಾರೆ. ಒಂಟಿತನ, ಒತ್ತಡವನ್ನು ಕಳೆದುಕೊಳ್ಳುವ ನೆಪದಲ್ಲಿ ಈ ವಿಡಿಯೋಗಳ ಮೊರೆ ಹೋಗುತ್ತಾರೆ.  ಇಲ್ಲಿ ಕಾಣ ಸಿಗುವ ಕೆಲವು ವಿಡಿಯೋಗಳು ಮನಸ್ಸಿಗೆ ಮುದ ನೀಡುವುದು ಸುಳ್ಳಲ್ಲ. ಇಂಥಹ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಆಗುತ್ತಿದ್ದಂತೆಯೇ ವೈರಲ್ ಆಗಿ ಬಿಡುತ್ತವೆ. ಇದೀಗ ಗಿಳಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಿಳಿಗಳು ನಮ್ಮ ದೇಶದ ಅತ್ಯಂತ ಸಾಮಾನ್ಯ ಪಕ್ಷಿಗಳು. ಇದಲ್ಲದೆ, ಹಸಿರು ಗಿಳಿಗಳು ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಹೆಚ್ಚು ಕಾಣಸಿಗುತ್ತವೆ. ಈ ಗಿಳಿಗಳು ಮನುಷ್ಯರಂತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿವೆ. ಇನ್ನು ನೀಲಿ, ಕೆಂಪು, ಹಳದಿ ಮತ್ತು ಬಿಳಿಯಂತಹ ಹಲವು ಬಣ್ಣಗಳ ಗಿಳಿಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಸದ್ಯ ಗಿಣಿಯೊಂದು ಕಾಗದದ ತುಂಡನ್ನು ತನ್ನ ಕೊಕ್ಕಿನ ಮೂಲಕ ಕತ್ತರಿಸಿ ಆ ಕಾಗದದ ತುಂಡುಗಳನ್ನು ರೆಕ್ಕೆಯಂತೆ ಜೋಡಿಸಿಕೊಂಡಿರುವ  ವಿಡಿಯೋ  ವೈರಲ್ ಆಗುತ್ತಿದೆ. 

ಇದನ್ನೂ ಓದಿ : ಸೀರೆಯಲ್ಲಿ ಜಿಮ್‌ ಮಾಡಿ ಬಿಲ್ಡರ್ಸ್‌ ಚಮಕ್‌ ಕೊಟ್ಟ ಸುಂದರಿ..! ವಿಡಿಯೋ ನೊಡಿ

ವೈರಲ್ ವೀಡಿಯೊವನ್ನು ವೀಕ್ಷಿಸಿ:

 

ಇದನ್ನೂ ಓದಿ : Viral video :ʼತಾಯಿಯೇ ಮೊದಲ ಗುರುʼ ಎಂಬ ಮಾತು ಈ ವಿಡಿಯೋ ನೋಡಿ ಅರ್ಥವಾಗುತ್ತೆ..!

ಈ ವೀಡಿಯೊವನ್ನು Facebook ಖಾತೆ Furry Tails ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಗಿಳಿಯು ಕಾಗದವನ್ನು ಉದ್ದವಾಗಿ ಸೀಳುತ್ತದೆ ಮತ್ತು ಅದನ್ನು ಗರಿಗಳ ನಡುವೆ ಇರಿಸುತ್ತದೆ. ಗಿಳಿ ತನ್ನ ರೆಕ್ಕೆಗಳಿಗೆ ಹೆಚ್ಚು ಗರಿಗಳನ್ನು ಸೇರಿಸುತ್ತಿರುವುದನ್ನು ಇಲ್ಲಿ ಗಮನಿಸಬಹುದು.  ಮನುಷ್ಯರನ್ನು ಅನುಕರಿಸಿ ಮಾತನಾಡುವ ಗಿಣಿಗಳು ಇದೀಗ ಮನುಷ್ಯರಂತೆ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿರುವುದು ವಿಶೇಷವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More