Home> Viral
Advertisement

ಮುಸ್ಲಿಂ ಮದುವೆಯಾದರೂ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಕಾರ್ಡ್ ! ವಿಘ್ನ ವಿನಾಶಕನಿಗೆ ಮೊದಲ ಆಮಂತ್ರಣ !

Wedding Card Viral:ಈ ಕುಟುಂಬ  ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಂದಿಯಲ್ಲಿ ಮುದ್ರಿಸಿದೆ. ಮಾತ್ರವಲ್ಲ, ಆಮಂತ್ರಣ ಪತ್ರಿಕೆ ಹಿಂದೂ ಸಂಪ್ರದಾಯಗಳನ್ನು ಆಧರಿಸಿದೆ ಎನ್ನುವುದು ಇಲ್ಲಿ ವಿಶೇಷ. 

ಮುಸ್ಲಿಂ ಮದುವೆಯಾದರೂ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಕಾರ್ಡ್ !  ವಿಘ್ನ ವಿನಾಶಕನಿಗೆ ಮೊದಲ ಆಮಂತ್ರಣ !

Wedding Card Viral : ಮನೆಯಲ್ಲಿ ಮದುವೆ ನಿಶ್ಚಯವಾದ ಕೂಡಲೇ ಮೊದಲು ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡುವ ಕೆಲಸಕ್ಕೆ ಕೈ ಹಾಕಲಾಗುತ್ತದೆ. ನೆಂಟರಿಷ್ಟರನ್ನು ಮದುವೆಗೆ ಆಹ್ವಾನಿಸಬೇಕಾದರೆ ಆಮಂತ್ರಣ ಪತ್ರಿಕೆ ಇರಲೇ ಬೇಕು. ಹಿಂದೂ ಧರ್ಮದಲ್ಲಿ ಯಾರದ್ದೇ ಮದುವೆ ನಿಶ್ಚಯವಾದರೂ ಮೊದಲ ಪತ್ರಿಕೆ ವಿಘ್ನವಿನಾಶಕ ಗಣೇಶನಿಗೆ ಅರ್ಪಿಸಲಾಗುತ್ತದೆ. ಇದಾದ ಬಳಿಕವೇ ಬಂಧು ಬಳಗಕ್ಕೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯವನ್ನು ಮುಂದುವರೆಸಲಾಗುತ್ತದೆ. ಮುಸ್ಲಿಂ ಧರ್ಮದ ನಿಕಾಹ್ ನಲ್ಲಿ ಉರ್ದು ಅಥವಾ ಇಂಗ್ಲಿಷ್‌ನಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ. ಆದರೆ, ಉತ್ತರ ಪ್ರದೇಶದ ಬಹ್ರೈಜ್ ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಈ ಸಂಪ್ರದಾಯವನ್ನು ಸ್ವಲ್ಪ ಭಿನ್ನವಾಗಿಸಿದೆ. ಈ ಕುಟುಂಬ  ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಂದಿಯಲ್ಲಿ ಮುದ್ರಿಸಿದೆ. ಮಾತ್ರವಲ್ಲ, ಆಮಂತ್ರಣ ಪತ್ರಿಕೆ ಹಿಂದೂ ಸಂಪ್ರದಾಯಗಳನ್ನು ಆಧರಿಸಿದೆ ಎನ್ನುವುದು ಇಲ್ಲಿ ವಿಶೇಷ. 

ಹಿಂದೂ ಸಂಪ್ರದಾಯವನ್ನು ಆಧರಿಸಿದ ಆಮಂತ್ರಣ ಪತ್ರಿಕೆ :

ಬಹ್ರೈಚ್ ಜಿಲ್ಲೆಯಲ್ಲಿ ಮುಸ್ಲಿಂ ಕುಟುಂಬವೊಂದು ಮುದ್ರಿಸಿರುವ ಮದುವೆ ಕಾರ್ಡ್ ಈಗ ಸುದ್ದಿಯಾಗಿದೆ. ಪಾಂಚಜನ್ಯ ಪ್ರಕಾರ, ಬಹ್ರೈಚ್‌ನ ಅಝುಲ್ ಕಮರ್ ಅವರು ತಮ್ಮ ಮಗನ ಮದುವೆಗಾಗಿ ಹಿಂದೂ ಸಂಪ್ರದಾಯವನ್ನು ಆಧರಿಸಿದ ಕಾರ್ಡ್‌ಗಳನ್ನು ಮುದ್ರಿಸಿದ್ದಾರೆ. ಇಷ್ಟು ಮಾತ್ರವಲ್ಲ, ಹಿಂದೂ ಸಂಪ್ರದಾಯಗಳ ಪ್ರಕಾರ, ಮದುವೆಯ ಮೊದಲ ಆಹ್ವಾನವನ್ನು ಶ್ರೀ ಗಣೇಶನಿಗೆ ಕಳುಹಿಸಿದ್ದಾರೆ  ಎನ್ನಲಾಗಿದೆ. ಈ ಮದುವೆ ಕಾರ್ಡ್‌ನ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ, ಅದು ತಕ್ಷಣವೇ ವೈರಲ್ ಆಗಿದೆ. 

ಇದನ್ನೂ ಓದಿ :Viral Video: ಈ ರೀತಿ ಕೂಡ ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡಬಹುದಾ?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಧು ಮತ್ತು ವರ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಫೆಬ್ರವರಿ 29 ರಂದು ಅಂದರೆ ನಿನ್ನೆ ಈ ವಿವಹಾ ನಡೆದಿತ್ತು. 

ಹಿಂದೂ ಅತಿಥಿಗಳಿಗೆ ಪ್ರತ್ಯೇಕ ಔತಣ ಕೂಟ :  
ಮದುವೆಗೆ ಹಿಂದೂಗಳು ಆಗಮಿಸಿರುವುದರಿಂದಾಗಿ ಅವರಿಗಾಗಿ ಹಿಂದೂ ಸಂಪ್ರದಾಯದಂತೆ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ ಎಂದಿದ್ದಾರೆ  ಅಝುಲ್ ಕಮರ್ ಹೇಳುತ್ತಾರೆ. ಮದುವೆಗೆ ಬರುವ ಹಿಂದೂ ಅತಿಥಿಗಳಿಗೆ ಹಿಂದೂ ಸಂಪ್ರದಾಯದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿತ್ತು. ಎಲ್ಲಾ ಹಿಂದೂಗಳಿಗೆ ಅವರ ಧರ್ಮದ ಪ್ರಕಾರ ಆಹ್ವಾನ ಕಳುಹಿಸಬೇಕು ಎನ್ನುವ ಯೋಚನೆ ನಮ್ಮದಾಗಿತ್ತು ಎನ್ನುತ್ತಾರೆ ವರನ ತಂದೆ ಅಜುಲ್ ಕಮರ್. ಅಷ್ಟೇ ಅಲ್ಲ ಹಿಂದೂಗಳಿಗಾಗಿ ಒಂದು ದಿನ ಮುಂಚಿತವಾಗಿ  ಔತಣ ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ : Viral Video: ಲೈವ್ ಕಾಮಿಡಿ ಷೋನಲ್ಲಿ ಅತಿಥಿಗೆ ಹನಿಮೂನ್ ಕುರಿತು ಪ್ರಶ್ನೆ ಕೇಳಿದ ಕಾಮಿಡಿಯನ್... ಗತಿ ಏನಾಗಿದೆ ನೀವೇ ನೋಡಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More