Home> Viral
Advertisement

ಮಗುವಿನ ರಕ್ಷಣೆಗಾಗಿ ಮೊಸಳೆ ಜೊತೆ ಹೋರಾಡಿದ ತಾಯಿ ಆನೆ..! ರೋಚಕ ವಿಡಿಯೋ...

Baby Elephant Viral video : ಭಾರತೀಯ ಅರಣ್ಯಾಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಮನಮಿಡಿಯುವ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ತಾಯಿ ಆನೆಯು ತನ್ನ ಮಗುವನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಮಗುವಿನ ರಕ್ಷಣೆಗಾಗಿ ಮೊಸಳೆ ಜೊತೆ ಹೋರಾಡಿದ ತಾಯಿ ಆನೆ..! ರೋಚಕ ವಿಡಿಯೋ...

Elephant Viral Video : ಮನುಷ್ಯರಾಗಲಿ, ಪ್ರಾಣಿಗಳಲ್ಲಾಗಲಿ ತಾಯಿಯ ಕಾಳಜಿ ಮತ್ತು ವಾತ್ಸಲ್ಯವನ್ನು ವರ್ಣಿಸಲು ಸಾಧ್ಯವಿಲ್ಲ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋ ಒಂದು.. ತಾಯಿ ತನ್ನ ಮಗುವಿನ ರಕ್ಷಣೆಗಾಗಿ ಯಾರ ಜೊತೆಗಾಗದರೂ, ಯಾವುದೇ ಸ್ಥಿತಿಯಲ್ಲಾದರೂ ಹೋರಾಡಲು ಸದಾ ಸಿದ್ಧಳಾಗಿರುತ್ತಾಳೆ ಎನ್ನುವ ಮಾತನ್ನು ಅಕ್ಷರಶಃ ನಿರೂಪಿಸುವಂತಿದೆ.

ಹೌದು.. ಭಾರತೀಯ ಅರಣ್ಯಾಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಮನಮಿಡಿಯುವ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ತಾಯಿ ಆನೆಯು ತನ್ನ ಮಗುವನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ತಾಯಿ ತನ್ನ ಮಗುವನ್ನು ರಕ್ಷಿಸಲು ಯಾವುದೇ ಹಂತಕ್ಕೆ ಹೋಗುತ್ತಾಳೆ ಎನ್ನುವುದಕ್ಕೆ ಈ ವಿಡಿಯೋ ಒಂದು ನಿದರ್ಶನ ಅಂದ್ರೆ ತಪ್ಪಾಗಲ್ಲ.

ಇದನ್ನೂ ಓದಿ:Viral Video : ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುವ ಸ್ಮಾರ್ಟ್‌ ಆನೆ.. ವಿಡಿಯೋ ನೋಡಿ ಅಚ್ಚರಿ ಪಡ್ತೀರಾ

ವೈರಲ್ ಆಗಿರುವ ವೀಡಿಯೋದಲ್ಲಿ ಮರಿ ಆನೆಯೊಂದು ಸಣ್ಣ ನೀರಿನ ಕೊಳದಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು. ತಾಯಿ ಆನೆಯು ತನ್ನ ಮಗುವನ್ನು ತನ್ನ ಕಾಲುಗಳ ನಡುವೆ ತೆಗೆದುಕೊಂಡು ರಕ್ಷಣೆ ಮಾಡುತ್ತಿರುವುದನ್ನು ನೋಡಬಹುದು. ನೀರಿನ ಕೆಳಗೆ ಅಡಗಿದ್ದ ಮೊಸಳೆ ಆನೆ ಮರಿಯ ಮೇಲೆ ಧಾಳಿ ನಡೆಸಲು ಹೊಂಚು ಹಾಕುತ್ತಿರುತ್ತದೆ. ಇದರನ್ನು ಅರಿತ ತಾಯಿ ಆನೆ ಮಗನ್ನು ರಕ್ಷಸಲು ಮೊಸಳೆಯ ಜೊತೆ ಹೋರಾಡಿ ಯಶಸ್ವಿಯಾಗುತ್ತಾಳೆ.

ಈ ವೀಡಿಯೊ ಲಕ್ಷಾಂತರ ಜನ ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಹಲವಾರು ಜನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ತಾಯಿ ಆನೆಯ ಶೌರ್ಯವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಈ ವೀಡಿಯೊ ತಾಯಿಯ ಪ್ರೀತಿಯನ್ನು ನಿರೂಪಿಸುತ್ತದೆ ಎಂದು ಮೆಚ್ಚಿಕೊಂಡು ಶೇರ್‌ ಮಾಡಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More