Home> Viral
Advertisement

video : ಹುಡುಗಿಯನ್ನು ಇಂಪ್ರೆಸ್ ಮಾಡಲು ಹುಡುಗ ಮಾಡಿಬಿಟ್ಟನಾ ಈ ಕೆಲಸ


Girl Boy Video :ಈ ವೀಡಿಯೊವನ್ನು videonation.teb ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.  ವಿಡಿಯೋವನ್ನು ಅನೇಕ ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲ  ವಿಡಿಯೋ ನೋಡಿದ ನೆಟಿಜನ್‌ಗಳು ಇದರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. 

video : ಹುಡುಗಿಯನ್ನು ಇಂಪ್ರೆಸ್ ಮಾಡಲು ಹುಡುಗ ಮಾಡಿಬಿಟ್ಟನಾ ಈ ಕೆಲಸ

Girl Boy Video : ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ರೀತಿಯ ವಿಡಿಯೋಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವೊಂದು ವಿಡಿಯೋಗಳನ್ನು ನೋಡಿದರೆ ನಗು ತಡೆಯಲಿಕ್ಕಾಗುವುದಿಲ್ಲ. ಇದೀಗ ಶಾಲೆಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಡಿಯೋವೊಂದು  ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ಹುಡುಗ ಮತ್ತು ಕೆಲವು ಹುಡುಗಿಯರನ್ನು ಕಾಣಬಹುದು. ಈ ವಿಡಿಯೋದಲ್ಲಿ ಹುಡುಗಿಯರು ಮಾತಿನಲ್ಲಿ ಮುಳುಗಿ ಹೋಗಿದ್ದರೆ, ಹುಡುಗ ಮಾತ್ರ ಬಹಳ ಗಂಭೀರವಾಗಿ ಒಂದು ಕೆಲಸದಲ್ಲಿ ನಿರತನಾಗಿದ್ದಾನೆ.  ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. 

ಚಪ್ಪಲಿ ರಿಪೇರಿ ಮಾಡುತ್ತಿರುವ ಹುಡುಗ : 

ಕೆಲವು ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಒಬ್ಬ ಹುಡುಗ ಶಾಲೆಯ ಜಗಲಿ ಮೇಲೆ ಕುಳಿತಿದ್ದಾನೆ. ಸುಮ್ಮನೆ ಕುಳಿತಿಲ್ಲ. ಕೈಯಲ್ಲಿ ಒಂದು ಚಪ್ಪಲಿ ಇದೆ. ಆ ಚಪ್ಪಲಿಯನ್ನು ರಿಪೇರಿ ಮಾಡುವುದರಲ್ಲಿ ಹುಡುಗ ಮಗ್ನನಾಗಿ ಬಿಟ್ಟಿದ್ದಾನೆ. ಪಕ್ಕದಲ್ಲಿ ನಿಂತಿರುವ ಹುಡುಗಿ ಹುಡುಗನ ಹೆಗಲ ಮೇಲೆ  ಕೈ ಇಟ್ಟುಕೊಂಡು, ನಿಂತಿದ್ದಾಳೆ. ಆ ಹುಡುಗಿ ನಿಂತಿರುವ ಭಂಗಿ ನೋಡಿದರೆ ಹುಡುಗ ರಿಪೇರಿ ಮಾಡುತ್ತಿರುವುದು ಅದೇ ಹುಡುಗಿಯ ಚಪ್ಪಲಿ ಎನ್ನುವುದು ತಿಳಿಯುತ್ತದೆ. ಆ ಹುಡುಗಿ ತನ್ನ ಸ್ನೇಹಿತರೊಂದಿಗೆ ಮಾತಿನಲ್ಲಿಯೇ ಮುಳುಗಿ ಹೋಗಿದ್ದಾಳೆ. ಆದರೆ ಹುಡುಗ ಮಾತ್ರ ಚಪ್ಪಲಿ ಹಿಡಿದು ರಿಪೇರಿ ಮಾಡುತ್ತಿದ್ದಾನೆ.  

ಇದನ್ನೂ ಓದಿ : Viral Video : ಬೈಕಿನ ಹಿಂಬದಿ ಸೀಟಲ್ಲಿ ಎತ್ತು ಕಟ್ಟಿ ಕೂರಿಸಿ ವೇಗವಾಗಿ ಸವಾರಿ ಮಾಡಿದ ಭೂಪ

 

 

ಇದನ್ನೂ ಓದಿ : Viral Video: ಗುಂಪು ಗುಂಪಾಗಿ ವ್ಯಕ್ತಿಯ ಮೇಲೆ ಬೀದಿ ನಾಯಿಗಳ ದಾಳಿ! ಆಮೇಲೇನಾಯ್ತು ನೋಡಿ

ಹುಡುಗನ ವಿಡಿಯೋ ಇಲ್ಲಿದೆ ನೋಡಿ : 
 ಈ ವೀಡಿಯೊವನ್ನು videonation.teb ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೋವನ್ನು ಅನೇಕ ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲ  ವಿಡಿಯೋ ನೋಡಿದ ನೆಟಿಜನ್‌ಗಳು ಇದರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಂದು ಹುಡುಗಿಗಾಗಿ ಏನೆಲ್ಲಾ ಕೆಲಸ ಮಾಡಬೇಕಾಗುತ್ತದೆ ಎಂದು ವೀಕ್ಷಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಇದನು ಮಾನವೀಯತೆ ಎಂದು ಕೂಡಾ ಕರೆಯಬಹುದಲ್ಲವೇ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More