Home> Viral
Advertisement

ಕುಡುಕ ಸ್ಪೈಡರ್‌ ಮ್ಯಾನ್‌.. ಬಿಲ್ಬೋರ್ಡ್‌ಗೆ ಜೋತು ಬಿದ್ದ ಮದ್ಯಪ್ರಿಯ..! ವಿಡಿಯೋ ನೋಡಿ

ಕುಡಿದ ಮೇಲೆ ಅದೇಷ್ಟು ಹುಚ್ಚು ಧೈರ್ಯ ಬರುತ್ತೆ ಅಂದ್ರೆ, ಒಂಟಿ ಸಲಗವನ್ನು ಹಿಮ್ಮೆಟ್ಟಿಸುವ ಸಾಹಸಕ್ಕೆ ಕುಡುಕರು ಕೈ ಹಾಕ್ತಾರೆ. ಗೂಳಿಯನ್ನೇ ಎತ್ತಿ ಬಿಸಾಕ್ತಾರೆ.. ಇಂತಹ ಕೆಲವು ವಿಡಿಯೋಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಹೊಸ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸಖತ್‌ ಟ್ರೆಂಡಿಂಗ್‌ ಕ್ರಿಯೇಟ್‌ ಮಾಡುತ್ತಿದ್ದು, ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿಲ್ಬೋರ್ಡ್‌ ಫ್ರೇಮ್‌ ಹಿಡಿದು ನೇತಾಡಿದ ವಿಡಿಯೋ ಒಂದು ವೈರಲ್‌ ಆಗುತ್ತಿದೆ.

ಕುಡುಕ ಸ್ಪೈಡರ್‌ ಮ್ಯಾನ್‌.. ಬಿಲ್ಬೋರ್ಡ್‌ಗೆ ಜೋತು ಬಿದ್ದ ಮದ್ಯಪ್ರಿಯ..! ವಿಡಿಯೋ ನೋಡಿ

Viral Video : ಕುಡಿದ ಮೇಲೆ ಅದೇಷ್ಟು ಹುಚ್ಚು ಧೈರ್ಯ ಬರುತ್ತೆ ಅಂದ್ರೆ, ಒಂಟಿ ಸಲಗವನ್ನು ಹಿಮ್ಮೆಟ್ಟಿಸುವ ಸಾಹಸಕ್ಕೆ ಕುಡುಕರು ಕೈ ಹಾಕ್ತಾರೆ. ಗೂಳಿಯನ್ನೇ ಎತ್ತಿ ಬಿಸಾಕ್ತಾರೆ.. ಇಂತಹ ಕೆಲವು ವಿಡಿಯೋಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಹೊಸ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸಖತ್‌ ಟ್ರೆಂಡಿಂಗ್‌ ಕ್ರಿಯೇಟ್‌ ಮಾಡುತ್ತಿದ್ದು, ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿಲ್ಬೋರ್ಡ್‌ ಫ್ರೇಮ್‌ ಹಿಡಿದು ನೇತಾಡಿದ ವಿಡಿಯೋ ಒಂದು ವೈರಲ್‌ ಆಗುತ್ತಿದೆ.

ತೆಲಂಗಾಣದ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮದ್ಯದ ಮದದಲ್ಲಿದ್ದ ವ್ಯಕ್ತಿ ಬಿಲ್ಬೋರ್ಡ್ ಫ್ರೇಮ್‌ಗೆ ನೇತಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆಯುತ್ತಿದೆ. ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ಕುಡುಕನ ಹುಚ್ಚಾಟದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.

ಇದನ್ನೂ ಓದಿ: ಶಾಲಾ ಬಿಸಿ ಊಟದಲ್ಲಿ ಹಾವು ಪತ್ತೆ..! ಮಕ್ಕಳು ಆಸ್ಪತ್ರೆಗೆ ದಾಖಲು

ವೈರಲ್ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಬಿಲ್ಬೋರ್ಡ್ ಫ್ರೇಮ್‌ನಿಂದ ನೇತಾಡುತ್ತಿರುವುದನ್ನು ಕಾಣಬಹುದು. ಅಲ್ಲಿದ್ದವರು ಅವನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಆಗ ನೇತಾಡುತ್ತಿದ್ದ ವ್ಯಕ್ತಿ ಸ್ಥಳದ ಕೆಳಗೆ ನೇರವಾಗಿ ಬಸ್ ಬಂದ ನಂತರ ಅವನು ಕೆಳಗಿಳಿಯುತ್ತಾನೆ. ಪೊಲೀಸರ ಪ್ರಕಾರ, ಘಟನೆ ಬುಧವಾರ ಸಂಜೆ ನಡೆದಿದ್ದು, ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ವ್ಯಕ್ತಯ ರಂಪಾಟ ಅಲ್ಲಿದ್ದವರಿಗೆ ಸಾಕು ಸಾಕಾಗಿತ್ತು. ಘಟನೆ ನಿನ್ನೆ (ಜನವರಿ 11) ಸಂಜೆ ಸಂಭವಿಸಿದೆ. ವ್ಯಕ್ತಿಯನ್ನು ಕೆಳಗಿಳಿಸಿ ಅವರ ಕುಟುಂಬದೊಂದಿಗೆ ಕಳುಹಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More