Home> Viral
Advertisement

Viral Video: ಮಾಡೆಲ್‌ ನಂತೆ ಮೇಕ್‌ ಓವರ್‌! ಅಂಬಾನಿ- ಅದಾನಿ ಅವರ ಶ್ವಾನವನ್ನೂ ಬೀಟ್‌ ಒಡೆಯುತ್ತೆ ಈ ನಾಯಿ..ವಿಡಿಯೋ ನೋಡಿ ಜೀವನದ ಮೇಲೆ ಜಿಗುಪ್ಸೆ ಬರೋದು ಗ್ಯಾರಂಟಿ

Viral Video: ಇತ್ತೀಚೆಗೆ ಮನುಷ್ಯರು ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ತಮ್ಮ ಮನೆಯ ನೋಡಿಕೊಳ್ಳುವ ಟ್ರೆಂಡ್‌ ಹೆಚ್ಚಾಗಿದೆ. ವಿದೇಶದಲ್ಲಂತೂ ಇಂತಹ ಹಲವಾರು ಉದಾಹರಣೆಗಳನ್ನು ನೋಡಬಹುದು. ಈ ವಿಷಯಕ್ಕೆ ತಕ್ಕ ಉದಾಹರಣೆಯಂತೆ ಸಾಮಾಜಿಕ ಜಾಲತಾಣದಲ್ಲಿ ವಿಡುಯೋ ಒಂದು ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿನ ನಾಯಿಯ ಆಡಂಬರ ಜೀವನ ನೋಡಿದರೆ ನಿಮಗೆ ನಿಮ್ಮ ಜೀವನದ ಮೇಲೆ ಜಿಗುಪ್ಸೆ ಹುಟ್ಟುತ್ತೆ.

Viral Video: ಮಾಡೆಲ್‌ ನಂತೆ ಮೇಕ್‌ ಓವರ್‌! ಅಂಬಾನಿ- ಅದಾನಿ ಅವರ ಶ್ವಾನವನ್ನೂ ಬೀಟ್‌ ಒಡೆಯುತ್ತೆ ಈ ನಾಯಿ..ವಿಡಿಯೋ ನೋಡಿ ಜೀವನದ ಮೇಲೆ ಜಿಗುಪ್ಸೆ ಬರೋದು ಗ್ಯಾರಂಟಿ

Viral Video: ಇತ್ತೀಚೆಗೆ ಮನುಷ್ಯರು ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ತಮ್ಮ ಮನೆಯ ನೋಡಿಕೊಳ್ಳುವ ಟ್ರೆಂಡ್‌ ಹೆಚ್ಚಾಗಿದೆ. ವಿದೇಶದಲ್ಲಂತೂ ಇಂತಹ ಹಲವಾರು ಉದಾಹರಣೆಗಳನ್ನು ನೋಡಬಹುದು. ಈ ವಿಷಯಕ್ಕೆ ತಕ್ಕ ಉದಾಹರಣೆಯಂತೆ ಸಾಮಾಜಿಕ ಜಾಲತಾಣದಲ್ಲಿ ವಿಡುಯೋ ಒಂದು ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿನ ನಾಯಿಯ ಆಡಂಬರ ಜೀವನ ನೋಡಿದರೆ ನಿಮಗೆ ನಿಮ್ಮ ಜೀವನದ ಮೇಲೆ ಜಿಗುಪ್ಸೆ ಹುಟ್ಟುತ್ತೆ.

ಸಾಮಾನ್ಯವಾಗಿ, ಸಾಕುಪ್ರಾಣಿಗಳ ಮಾಲೀಕರು ನಾಯಿ ಮತ್ತು ಬೆಕ್ಕುಗಳನ್ನು ಶಾಂಪೂ ಬಳಸಿ ಸ್ನಾನ ಮಾಡಿಸುತ್ತಾರೆ, ಕೂದಲನ್ನು ಬಾಚಿ ನೋಟ್‌ ಆಗಿ ರೆಡಿ ಮಾಡುತ್ತಾರೆ. ಅಷ್ಟೆ ಅಲ್ಲ ತಮ್ಮ ಮುದ್ದಿನ ಮನೆಯ ಸದಸ್ಯನ ಆಹಾರದ ಬಗ್ಗೆಯೂ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಸಾಕುಪ್ರಾಣಿಗಳನ್ನು ಮನುಷ್ಯರಿಗಿಂತ ಚೆನ್ನಾಗಿ ನೋಡಿಕೊಳ್ಳುವುದು ಮತ್ತು ನವ ವಧುವಿನಂತೆ ಮೇಕ್ ಓವರ್ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ..? ನೋಡಿಲ್ಲ ಅಂದರೆ ಈ ವಿಡಿಯೋ ನಿಮಗಾಗಿ...

ಇದನ್ನೂ ಓದಿ: Viral video: "ಕಾಲೆ ಇಲ್ಲ ನಿಂಗೆ ಚಪ್ಪಲಿ ಯಾಕ್ ಬೇಕೋ ತಮ್ಮ"..? ಮಹಿಳೆಯ ಚಪ್ಪಲಿ ಕದ್ದ ಕಳ್ಳ ಹಾವು ವಿಡಿಯೋ ನೋಡಿ, ಎದ್ದು ಬಿದ್ದು ನಗ್ತಿರ!

ಅಂಬಾನಿ-ಅದಾನಿಗಳಂತಹ ಶ್ರೀಮಂತರ ಮನೆಯಲ್ಲಿ ಬೆಳೆಯುವ ನಾಯಿಗಳಿಗೆ ಹೆಚ್ಚಿನ ಕಾಳಜಿ ಐಶಾರಾಮಿ ಜೀವನ ಇರುತ್ತದೆ ಎಂಬುದು ಎಲ್ಲರಿಗು ಗೊತ್ತಿರುವ ವಿಚಾರ, ಆದರೆ ಇಲ್ಲೊಬ್ಬ ಮಾಲಿಕ ಅಂಬಾನಿ- ಅದಾನಿ ನಾಯಿಯನ್ನು ಬೀಟ್‌ ಹೊಡೆದು ತನ್ನ ನಾಯಿಗೆ ಮೇಕ್‌ ಓವರ್‌ ಮಾಡುತ್ತಿದ್ದಾರೆ, ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. 

ನಾಯಿ ಮೇಕ್ ಓವರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಕಪ್ ಇಷ್ಟ ಪಡುವ ಈ ಶ್ವಾನ ಕೂಡ ಬಹಳ ಉತ್ಸಾಹದಿಂದ ತನ್ನ ಮಾಲಿಕ ಮಾಡುವ ಎಲ್ಲವನ್ನು ಮಾಡಿಸಿಕೊಳ್ಳುತ್ತಿದೆ. ಈ ನಾಯಿಯ ಮಾಲಿಕ ನಾಯಿಗೆ ಸ್ನಾನ ಮಾಡಿಸುವುದಷ್ಟೆ ಅಲ್ಲದೆ ಕಿವಿಗಳನ್ನು ಸ್ವಚ್ಛಗೊಳಿಸುವುದು,  ಬ್ರಾಂಡೆಡ್ ಶಾಂಪೂ ಬಳಸಿ ಸ್ನಾನ ಮಾಡಿಸುವುದು, ಹಲ್ಲುಗಳನ್ನು ಮೃದುವಾದ ಬ್ರಷ್ ಬಳಸಿ ಚೆನ್ನಾಗಿ ಉಜ್ಜುವುದು, ಹಲ್ಲುಜ್ಜಲು ಯಾವುದೇ ಸಾಮಾನ್ಯ ಟೂತ್‌ಪೇಸ್ಟ್‌ ಅಲ್ಲದೆ  ಬ್ರ್ಯಾಂಡೆಡ್ ಟೂತ್ ಪೇಸ್ಟ್ ಮತ್ತು ಟೂತ್ ಬ್ರಷ್ ನಿಂದ ಹಲ್ಲುಜ್ಜುತ್ತಿರುವುದು ಈ ದೃಶ್ಯದಲ್ಲಿ ಕಂಡು ಬರುತ್ತದೆ. ನಾಯಿ ಕೂಡ ತನ್ನ ಮಾಲಿಕ ಮಾಡುವ ಎಲ್ಲಾ ಕೆಲಸವನ್ನು ಸಮಾಧಾನದಿಂದ ಮಾಡಿಸಿಕೊಳ್ಳುತ್ತಿದೆ.

ಇದನ್ನೂ ಓದಿ: Viral video: ಎಷ್ಟು ಕ್ಯೂಟ್‌ ಇದೆ ನೋಡಿ ಈ ಹಾವು, ನೋಡಿದ್ರೆ ಮುದ್ದಾಡಬೇಕು ಅನಿಸುತ್ತೆ! ವಿಡಿಯೋ ನೋಡಿ ಪ್ರೀತಿಯಲ್ಲಿ ಬೀಳ್ತಿರ

ಹಲ್ಲುಜುವುದಷ್ಟಕ್ಕೆ ಈ ವಿಡಿಯೋ ನಿಲ್ಲಲ್ಲ, ನಂತರ ಮಾಲಿಕ ಆಯಿಲ್ ಮಸಾಜ್ ಮಾಡುತ್ತಾನೆ, ನಾಯಿಗೆ ಮತ್ತೆ ಸ್ನಾನ ಮಾಡಿಸಿ, ದುಬಾರಿ ಟವೆಲ್ ನಿಂದ ಒರೆಸಿ ಆ ಬಳಿಕ ನಾಯಿಗೂ ತನಗೆ ಇಷ್ಟವಾದ ಮೃದುವಾದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತಾನೆ. ಉಗುರುಗಳನ್ನು ನೇಲ್ ಕಟ್ಟರ್‌ನಿಂದ ಕತ್ತರಿಸಿ, ಉಗುರುಗಳನ್ನು ಮೃದುಗೊಳಿಸಲು ವಿಶೇಷ ಮಸಾಜ್ ಕ್ರೀಮ್ ಅನ್ನು ಅನ್ವಯಿಸುತ್ತಾನೆ. ಬಳಿಕ ಮೂಗಿನ ಮೇಲೂ ಮತ್ತೊಂದು ಕ್ರೀಂ ಹಚ್ಚಿ, ಕೊನೆಯದ್ದಾಗಿ  ಸುಗಂಧ ದ್ರವ್ಯವನ್ನು ಸಹ ಒಡೆಯುತ್ತಾನೆ, ಸಧ್ಯ ಈ ನಾಯಿ ಐಶಾರಾಮಿ ಮೇಕ್‌ ಓವರ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ʻಇನ್ನುಂದು ಜನ್ಮವೆಂಬುದು ಇದ್ದರೆ, ನಾನು ಈ ನಾಯಿಯ ಸ್ಥಾನದಲ್ಲಿ ಹುಟ್ಟಬೇಕುʼ ಎಂದು ನೆಟ್ಟಿಗರು ವಿವಿಧ ರೀತಿಯಲ್ಲಿ ಫನ್ನಿಯಾಗಿ ಕಾಮೆಂಟ್ಸ್‌ ಬರೆಯುತ್ತಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More