Home> Technology
Advertisement

IPL 2022 Auction Live ವೀಕ್ಷಿಸಲು ಇಲ್ಲಿದೆ Free Apps, ಮೊಬೈಲ್ ನಲ್ಲಿ ಹೀಗೆ Download ಮಾಡಿಕೊಳ್ಳಿ

 IPL 2022 Auction : IPL ಹರಾಜು 2022 ರ ಅಧಿಕೃತ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಲಾಗಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ.

IPL 2022 Auction Live ವೀಕ್ಷಿಸಲು ಇಲ್ಲಿದೆ Free Apps, ಮೊಬೈಲ್ ನಲ್ಲಿ ಹೀಗೆ  Download ಮಾಡಿಕೊಳ್ಳಿ

ನವದೆಹಲಿ : IPL 2022 Auction : IPL ಹರಾಜು 2022 ರ ಅಧಿಕೃತ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಲಾಗಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹರಾಜು ಎರಡು ದಿನಗಳ ಕಾಲ ನಡೆಯಲಿದ್ದು, ಬೆಳಗ್ಗೆ 11 ಗಂಟೆಯಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ (IPL 2022 Mega Auction). ಐಪಿಎಲ್ 2022 ರ ಮೆಗಾ ಹರಾಜು ಮಧ್ಯಾಹ್ನ 12 ರಿಂದ ಪ್ರಾರಂಭವಾಗುತ್ತದೆ. 

IPL 2022 Auction ಲೈವ್ ಸ್ಟ್ರೀಮಿಂಗ್ :

ಐಪಿಎಲ್ ಮೆಗಾ ಹರಾಜು (IPL 2022 Mega Auction) ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.  ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಈ ಈವೆಂಟ್‌ನ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ಒಂದು ವೇಳೆ ನೀವು ಭಾರತದ ಹೊರಗೆ (ಯುಕೆ, ಯುಎಸ್ಎ, ಕೆನಡಾ) ವಾಸಿಸುತ್ತಿದ್ದರೆ  YuppTV ಗೆ ಚಂದಾದಾರರಾಗಬಹುದು. ಐಪಿಎಲ್ ಹರಾಜನ್ನು ಉಚಿತವಾಗಿ ಸ್ಟ್ರೀಮ್ ಮಾಡಲು ಹಲವು ಮಾರ್ಗಗಳಿವೆ. 

ಇದನ್ನೂ ಓದಿ : Weak Password:ಇವು ವಿಶ್ವದ ಅತ್ಯಂತ ದುರ್ಬಲ ಪಾಸ್‌ವರ್ಡ್‌ಗಳು, ಒಂದೇ ಸೆಕೆಂಡಿನಲ್ಲಿ ಹ್ಯಾಕ್ ಮಾಡಬಹುದು!

ಜಿಯೋ ಬಳಕೆದಾರರು ಏನು ಮಾಡಬೇಕು?
ರಿಲಯನ್ಸ್ ಜಿಯೋ (Reliance Jio) ನಾಲ್ಕು ಯೋಜನೆಗಳನ್ನು ಪರಿಚಯಿಸಿದೆ.  ಇದರಲ್ಲಿ ಬಳಕೆದಾರರು ಒಂದು ವರ್ಷದವರೆಗೆ Disnet+Hotstar ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲಿದ್ದಾರೆ. ಇದರಲ್ಲಿ ಜಿಯೋದ  499 ರೂ ಪ್ಲಾನ್ ಸಾಕಷ್ಟು ಜನಪ್ರಿಯವಾಗಿದೆ. ಇದರಲ್ಲಿ ಬಳಕೆದಾರರು 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಇದಲ್ಲದೇ ದಿನಕ್ಕೆ 2GB ಡೇಟಾ ಸಿಗಲಿದೆ.  699 ರೂ.  ಯೋಜನೆಯಲ್ಲಿ, ಡಿಸ್ನಿ + ಹಾಟ್‌ಸ್ಟಾರ್ ಜೊತೆಗೆ 28 ​​ದಿನಗಳವರೆಗೆ ಪ್ರತಿದಿನ 3GB ಡೇಟಾ ಲಭ್ಯವಿರಲಿದೆ. 659 ರೂಗಳ ಯೋಜನೆಯಲ್ಲಿ, 56 ದಿನಗಳವರೆಗೆ ಪ್ರತಿದಿನ 1.5GB ಡೇಟಾ ಲಭ್ಯವಿದೆ.  ಇನ್ನು, 799 ರೂಗಳ ಪ್ಲಾನ್ ನಲ್ಲಿ 56 ದಿನಗಳವರೆಗೆ ಪ್ರತಿದಿನ 2GB ಡೇಟಾ ಪಡೆಯಬಹುದು.  ಈ ಎರಡು ಪ್ಲಾನ್ ನಲ್ಲಿ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಇರಲಿದೆ. 

ಏರ್‌ಟೆಲ್ ಬಳಕೆದಾರರು ಏನು ಮಾಡಬೇಕು?
Airtel ಗ್ರಾಹಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ IPL ಹರಾಜು 2022 ಅನ್ನು ಲೈವ್ ಆಗಿ ವೀಕ್ಷಿಸಬಹುದು. ಏರ್‌ಟೆಲ್‌ನ  499 ರೂ ಯೋಜನೆಯಲ್ಲಿ, ಬಳಕೆದಾರರು ಒಂದು ವರ್ಷದವರೆಗೆ Disnet+Hotstar ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತಾರೆ. ಇದರಲ್ಲಿ ಪ್ರತಿದಿನ 2GB ಡೇಟಾ 28 ದಿನಗಳವರೆಗೆ ಲಭ್ಯವಿದೆ. 599 ರೂಗಳ ಯೋಜನೆಯಲ್ಲಿ, 3GB ಡೇಟಾವು 28 ದಿನಗಳವರೆಗೆ ಪ್ರತಿದಿನ ಲಭ್ಯವಿರಲಿದೆ ಮತ್ತು  838 ರೂ. ಯೋಜನೆಯಲ್ಲಿ, 56 ದಿನಗಳವರೆಗೆ ಪ್ರತಿದಿನ  2GB ಡೇಟಾ ಲಭ್ಯವಿರಲಿದೆ.  Disnet+Hotstar ಈ ಎರಡೂ ಯೋಜನೆಗಳೊಂದಿಗೆ ಉಚಿತವಾಗಿ ಸಿಗಲಿದೆ. 

ಇದನ್ನೂ ಓದಿ : Flipkart Mobiles Bonanza Sale 2022: ಕೇವಲ 499ರೂ.ಗೆ Samsung 5G ಫೋನ್ ಖರೀದಿಸಿ; ಮತ್ತೆ ಸಿಗಲ್ಲ ಇಂತಹ ಆಫರ್!

Vodafone Idea ಬಳಕೆದಾರರು ಏನು ಮಾಡಬೇಕು?
Vodafone Idea  601 ರೂ, 901 ಮತ್ತು 3099 ಯೋಜನೆಗಳೊಂದಿಗೆ, ಬಳಕೆದಾರರು ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.  601 ರೂಪಾಯಿ ಯೋಜನೆಯು 28 ದಿನಗಳ ಮಾನ್ಯತೆ ಮತ್ತು ದಿನಕ್ಕೆ 3GB ಡೇಟಾವನ್ನು ನೀಡುತ್ತದೆ.  701 ರೂಪಾಯಿ ಯೋಜನೆಯಲ್ಲಿ, 70 ದಿನಗಳವರೆಗೆ ಪ್ರತಿದಿನ 3GB ಡೇಟಾ ಲಭ್ಯವಿದೆ. 3099 ರೂಗಳ ಯೋಜನೆಯಲ್ಲಿ ಒಂದು ವರ್ಷದವರೆಗೆ ಪ್ರತಿದಿನ 1.5GB ಡೇಟಾ 3 ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More