Home> Technology
Advertisement

Whatsappನಲ್ಲಿ ಈಗ ಕೇವಲ ಒಂದು ಕ್ಲಿಕ್ ಮೂಲಕ ನಡೆದು ಹೋಗುತ್ತದೆ ಪೇಮೆಂಟ್

ವಾಟ್ಸಾಪ್‌ನ ಇತ್ತೀಚಿನ ಅಪ್‌ಡೇಟ್ ನಂತರ, ಆಪ್‌ನಲ್ಲಿ ಒಂದು ಹೊಸ ಫೀಚರ್ ಬಂದಿದೆ. ಇದರಿಂದ ಚಾಟ್ ಮಾಡುವ ರೀತಿಯಲ್ಲಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ.

Whatsappನಲ್ಲಿ ಈಗ ಕೇವಲ ಒಂದು ಕ್ಲಿಕ್ ಮೂಲಕ ನಡೆದು ಹೋಗುತ್ತದೆ ಪೇಮೆಂಟ್

ನವದೆಹಲಿ : ಕಳೆದ ಕೆಲವು ತಿಂಗಳುಗಳಲ್ಲಿ, ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ಹಲವು ಹೊಸ ಅಪ್‌ಡೇಟ್‌ಗಳನ್ನು (Whatsapp updates) ಬಿಡುಗಡೆ ಮಾಡಿದೆ. ಈ ಅಪ್‌ಡೇಟ್‌ಗಳ ಮೂಲಕ, ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಹೊಸ ಫೀಚರ್‌ಗಳನ್ನು ನೀಡಿದೆ.  ವಾಟ್ಸಾಪ್ ಪೇಮೆಂಟ್ (Whatsapp payment) ಕೂಡಾ ಇವುಗಳಲ್ಲಿ ಒಂದು. ಇದರ ಮೂಲಕ ಸುಲಭವಾಗಿ ಸ್ನೇಹಿತರು ಮತ್ತು ಸಂಬಂಧಿಕರಿಗೆ WhatsApp ಮೂಲಕವೇ ಹಣವನ್ನು ಕಳುಹಿಸಬಹುದು. 

WhatsApp ಪೇಮೆಂಟ್ ವೈಶಿಷ್ಟ್ಯ :

ವಾಟ್ಸಾಪ್‌ನ ಇತ್ತೀಚಿನ ಅಪ್‌ಡೇಟ್ (Whatsapp updates) ನಂತರ, ಆಪ್‌ನಲ್ಲಿ ಒಂದು ಹೊಸ ಫೀಚರ್ ಬಂದಿದೆ. ಇದರಿಂದ ಚಾಟ್ ಮಾಡುವ ರೀತಿಯಲ್ಲಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ. ವಾಟ್ಸಾಪ್‌ನ ಈ ಪೇಮೆಂಟ್ (Whatsapp payment) ವೈಶಿಷ್ಟ್ಯವು ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI ) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಮೊಬೈಲ್ ಆಪ್‌ನಿಂದ ನೇರವಾಗಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ : ಎರಡು ಫೋನ್ ಗಳನ್ನು ಬಿಡುಗಡೆ ಮಾಡಿದ Vivo, ವಯರ್ ಲೆಸ್ ಚಾರ್ಜಿಂಗ್, ಅದ್ಬುತ ಕ್ಯಾಮೆರಾದೊಂದಿಗೆ ಇರಲಿದೆ ಈ ವೈಶಿಷ್ಟ್ಯ

ಇತ್ತೀಚೆಗೆ ವಾಟ್ಸಾಪ್ ತಯಾರಕ ಫೇಸ್‌ಬುಕ್ (Facebook) ತನ್ನ ಭಾರತೀಯ ಬಳಕೆದಾರರಿಗಾಗಿ ವಿಶೇಷ ಅಪ್‌ಡೇಟ್ ಅನ್ನು ನೀಡಿದೆ.   ಈ ಬದಲಾವಣೆಯು WhatsApp ಪಾವತಿ ವೈಶಿಷ್ಟ್ಯಕ್ಕೆ ಸಂಬಂಧಿಸಿದ್ದಾಗಿದೆ. ಇಂದಿನಿಂದ, ಎಲ್ಲಾ WhatsApp ಬಳಕೆದಾರರ ಚಾಟ್ ಬಾಕ್ಸ್‌ನಲ್ಲಿ ಒಂದು ರೂಪಾಯಿ ಚಿಹ್ನೆಯನ್ನು ನೀಡಲಾಗುವುದು ಎಂದು ಕಂಪನಿಯು ಗ್ಲೋಬಲ್ ಫಿನ್‌ಟೆಕ್ ಫೆಸ್ಟಿವಲ್ (GFF) 2021 ನಲ್ಲಿ ಘೋಷಿಸಿದೆ. ಇದರ ಮೂಲಕ WhatsApp ಪೇಮೆಂಟ್ ವೈಶಿಷ್ಟ್ಯವನ್ನು ಬಳಸಲು ಸುಲಭವಾಗುತ್ತದೆ. 

ಇದರೊಂದಿಗೆ, ವಾಟ್ಸಾಪ್ ಚಾಟ್ ಬಾಕ್ಸ್‌ನಲ್ಲಿರುವ (Whatsapp chat) ಕ್ಯಾಮರಾ ಐಕಾನ್, ಬಳಕೆದಾರರಿಗೆ ಭಾರತದ 20 ದಶಲಕ್ಷಕ್ಕೂ ಹೆಚ್ಚು ಮಳಿಗೆಗಳಲ್ಲಿ ಯಾವುದೇ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಈ ವೈಶಿಷ್ಟ್ಯವನ್ನು ಬಳಸಲು ಅನುಮತಿಸುತ್ತದೆ ಎಂಬ ಮಾಹಿತಿಯನ್ನು ಫೇಸ್‌ಬುಕ್ ಬಿಡುಗಡೆ ಮಾಡಿದೆ.  

ಇದನ್ನೂ ಓದಿ : Motorola's Tablet: ಕಡಿಮೆ ಬೆಲೆಯಲ್ಲಿ ಸಿಗಲಿದೆ ಹಲವು ವೈಶಿಷ್ಟ್ಯಗಳು

WhatsApp ನ ಪಾವತಿಗಳ ವೈಶಿಷ್ಟ್ಯಕ್ಕಾಗಿ ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ಫೇಸ್ ವೈಸ್ ಅನ್ನು ಬಿಡುಗಡೆ ಮಾಡಿತ್ತು ಮತ್ತು ಈಗ ಈ ಹೊಸ ಅಪ್‌ಡೇಟ್ ನಂತರ, ಈ ವೈಶಿಷ್ಟ್ಯವನ್ನು ಬಳಸುವುದು ತುಂಬಾ ಸುಲಭವಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More