Home> Technology
Advertisement

WhatsApp ಎಚ್ಚರಿಕೆ! ಈ 5 ನಿಯಮಗಳನ್ನು ಉಲ್ಲಂಘಿಸಿದರೆ ಹುಷಾರ್...!

WhatsApp Latest News - ಇಂದು ನಾವು ನಿಮಗೆ ವಾಟ್ಸ್ ಆಪ್ ನ ಐದು ನಿಯಮಗಳ ಕುರಿತು ಮಾಹಿತಿ ನೀಡಲಿದ್ದು, ಅವುಗಳನ್ನು ಉಲ್ಲಂಘಿಸಿದರೆ ನಿಮ್ಮ ವಾಟ್ಸ್ ಆಪ್ ಖಾತೆ ಬ್ಯಾನ್ ಆಗುವ ಸಾಧ್ಯತೆ ಇದೆ. ಈ ಅನಾನುಕೂಲತೆಯಿಂದ ಬಚಾವಾಗಬೇಕಾದರೆ ಈ ಐದು ನಿಯಮಗಳನ್ನು ಎಂದಿಗೂ ಕೂಡ ಉಲ್ಲಂಘಿಸಬೇಡಿ.
 

WhatsApp ಎಚ್ಚರಿಕೆ! ಈ 5 ನಿಯಮಗಳನ್ನು ಉಲ್ಲಂಘಿಸಿದರೆ ಹುಷಾರ್...!

WhatsApp Tearms And Conditions - WhatsApp ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಾಗುವ ತ್ವರಿತ ಸಂದೇಶ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಸುಮಾರು 200 ಮಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ಇಂದಿನ ಕಾಲದಲ್ಲಿ ವಾಟ್ಸಾಪ್ ಬಳಸದವರೇ ಇಲ್ಲ. ಈ ಅಪ್ಲಿಕೇಶನ್‌ನ ಸಹಾಯದಿಂದ, ಸಂದೇಶಗಳನ್ನು ಹಂಚಿಕೊಳ್ಳಲು ಮಾತ್ರವಲ್ಲದೆ ಫೋಟೋಗಳು-ವೀಡಿಯೊಗಳು ಮತ್ತು ದಾಖಲೆಗಳನ್ನು ಸಹ ಕ್ಷಣಾರ್ಧದಲ್ಲಿ ಹಂಚಿಕೊಳ್ಳಬಹುದು. ಆದರೆ ನಿಯಮಗಳನ್ನು ಪಾಲಿಸದ ಬಳಕೆದಾರರ ವಿರುದ್ಧ ವಾಟ್ಸಾಪ್ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ನಿಮಗೆ ತಿಳಿದಿರಬೇಕು. ನೀವೂ ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ವಾಟ್ಸ್ ಆಪ್ ನಿಮ್ಮ ಖಾತೆಯನ್ನು ಸಹ ನಿಷೇಧಿಸಬಹುದು.

ಅತಿ ಹೆಚ್ಚು ಬಾರಿ ರಿಪೋರ್ಟ್ ಗೆ ಒಳಗಾದರೆ

ಸಾಮಾನ್ಯವಾಗಿ ವಾಟ್ಸ್ ಆಪ್ ನಲ್ಲಿ ಯಾರೂ ಕಿರಿಕಿರಿಯನ್ನು ಇಷ್ಟಪಡುವುದಿಲ್ಲ. ಹಲವು ಹಣರು ಒಂದು ವೇಳೆ ನಿಮ್ಮ ಕುರಿತು ವರದಿ ಮಾಡಿದರೆ, ಅದು ನಿಮ್ಮನ್ನು ಸಂಪೂರ್ಣವಾಗಿ ತೆಗೆದುಹಾಕಲು ಮಾಡರೇಟರ್‌ಗಳನ್ನು ಪ್ರೇರೇಪಿಸುತ್ತದೆ ಎಂದು ನಿಮಗೆ ತಿಳಿದಿರಬೇಕು. ನೀವು ವಾಟ್ಸಾಪ್‌ನಲ್ಲಿ ಯಾರಿಗಾದರೂ ಕಿರುಕುಳ ನೀಡಿದರೆ, ಅವರು ನಿಮ್ಮನ್ನು ನಿರ್ಬಂಧಿಸಬಹುದು. ನಿಮಗೆ ಪರಿಚಯವಿಲ್ಲದ ಜನರನ್ನು ಸಂಪರ್ಕಿಸುವುದು ನಿಮ್ಮನ್ನು ನಿರ್ಬಂಧಿಸುವ ಇನ್ನೊಂದು ಮಾರ್ಗವಾಗಿದೆ. ಆದ್ದರಿಂದ ಇತರರನ್ನು ಗೌರವಿಸಿ ಮತ್ತು ಅನಗತ್ಯವಾಗಿ ಅವರಿಗೆ ತೊಂದರೆ ಕೊಡಬೇಡಿ. ಏಕೆಂದರೆ ನೀವು ಹಲವು ಬಾರಿ ಬ್ಲಾಕ್ ಆಗಿದ್ದರೆ, WhatsApp ನಿಮ್ಮ ಖಾತೆಯನ್ನು ಬ್ಯಾನ್ ಮಾಡಬಹುದು.

2. ಬೇರೊಬ್ಬರ ಖಾತೆಯಲ್ಲಿ ನಕಲಿ ಖಾತೆ ತಯಾರಿಸುವುದು - ಒಂದು ವೇಳೆ ನೀವು ದ್ರೋಹಿಗಳ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರೂ ಕೂಡ, ಯಾರೊಬ್ಬರ ಸೋಗು ಹಾಕಲು WhatsApp ನಿಮಗೆ ಅನುಮತಿಸುವುದಿಲ್ಲ. ಬೇರೆಯವರ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿಸಿ ಸಿಕ್ಕಿಬಿದ್ದರೆ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ.

3. ಒರಿಜಿನಲ್ ಬದಲಾಗಿ ಥರ್ಡ್ ಪಾರ್ಟಿ ಆಪ್ ಬಳಕೆ ಮಾಡುವುದು - WhatsApp ನೀವು ಅದರ ಅಧಿಕೃತ ಅಪ್ಲಿಕೇಶನ್ ಅನ್ನು ಮಾತ್ರ ಬಳಸಬೇಕೆಂದು ಬಯಸುತ್ತದೆ. ಒಂದು ವೇಳೆ ನೀವು WhatsApp ಪ್ಲಸ್ ಅಥವಾ GBWhatsApp ನಂತಹ ಥರ್ಡ್ ಪಾರ್ಟಿ ರಿಪ್-ಆಫ್ ಅನ್ನು ಬಳಸುತ್ತಿದ್ದರೆ, ವಾಟ್ಸ್ ಆಪ್ ನಿಮ್ಮ ಖಾತೆಯನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ-Dangerous Anti-Virus Apps: ನಿಮ್ಮ ಮೊಬೈಲ್ ನಲ್ಲಿಯೂ ಕೂಡ ಈ Anti-Virus ಆಪ್ ಗಳಿವೆಯಾ? ಈಗಲೇ ಎಚ್ಚೆತ್ತುಕೊಳ್ಳಿ!

4. ಅಟೋಮಟೆಡ್ ಅಥವಾ ಬಲ್ಕ್ ಸಂದೇಶಗಳನ್ನು ಕಳುಹಿಸುವುದು - ಸ್ವಯಂಚಾಲಿತ ಮತ್ತು ಬೃಹತ್ ಸಂದೇಶಗಳು ಸಾಮಾನ್ಯವಾಗಿ ಯಾರಾದರೂ ವಂಚನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬುದರ ಸೂಚಕವಾಗಿವೆ. ಆದ್ದರಿಂದ ನೀವು ಅವುಗಳನ್ನು ಮುಗ್ಧವಾಗಿ ಮಾಡುತ್ತಿದ್ದರೂ ಸಹ, ಅದನ್ನು ಮಾಡದಿರುವುದು ಉತ್ತಮ. ಏಕೆಂದರೆ ವಾಟ್ಸಾಪ್ AI ತಂತ್ರಜ್ಞಾನವನ್ನು ಬಳಸುತ್ತದೆ ಮತ್ತು ಅನಗತ್ಯ ಸ್ವಯಂಚಾಲಿತ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ಪತ್ತೆಹಚ್ಚಲು ಮತ್ತು ನಿಷೇಧಿಸಲು ಇತರ ಬಳಕೆದಾರರ ವರದಿಗಳನ್ನು ಬಳಸುತ್ತದೆ.

ಇದನ್ನೂ ಓದಿ-Cheapest Recharge Plan: ಟೆಲಿಕಾಂ ಮಾರುಕಟ್ಟೆಯಲ್ಲಿ ದೂಳೆಬ್ಬಿಸಿದ BSNL ಪ್ಲಾನ್! ಕೇವಲ 75 ರೂ.ಗಳಲ್ಲಿ 30 ದಿನಗಳ ವ್ಯಾಲಿಡಿಟಿ ಜೊತೆಗೆ...?

5. ವಾಟ್ಸ್ ಆಪ್ ನ ಸಾಕಷ್ಟು ಬಳಕೆ ಮಾಡದೆ ಇರುವುದು - ಇದೊಂದು ಕಟ್ಟುನಿಟ್ಟಾದ ನಿಷೇಧವಲ್ಲದಿದ್ದರೂ ಕೂಡ, ನಿಮ್ಮ WhatsApp ಖಾತೆಯನ್ನು ನೀವು ಬಳಸದಿದ್ದರೆ ಅದನ್ನು ವಾಟ್ಸ್ ಆಪ್ ನಿಷ್ಕ್ರಿಯಗೊಳಿಸಬಹುದು ಅಥವಾ ಅಳಿಸಿ ಹಾಕಬಹುದು. ಆದಾಗ್ಯೂ ಕೂಡ ವೇದಿಕೆಯು ಕನಿಷ್ಠ ಎಷ್ಟು ಸಮಯದವರೆಗೆ ಬಳಕೆ ಮಾಡಬೇಕು ಎಂಬುದು ನಿರ್ಧರಿತವಾಗಿಲ್ಲ. ಅಧಿಕೃತ ನಿಯಮ "ನೋಂದಣಿ ನಂತರ ಖಾತೆ ಸಕ್ರಿಯವಾಗಿಲ್ಲದಿದ್ದರೆ ಅಥವಾ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿ ಉಳಿದಿದ್ದರೆ WhatsApp ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಅಳಿಸಬಹುದು" ಎಂದು ಹೇಳುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More