Home> Technology
Advertisement

ಇನ್ಮುಂದೆ WhatsAppನಿಂದ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ ವಿಡಿಯೋ ಹಾಗೂ ಫೋಟೋಗಳು

ವಿಶ್ವದ ಪ್ರಸಿದ್ದ ಮೆಸೇಜಿಂಗ್ ಆಪ್ WhatsApp ಕಳೆದ ಕೆಲವು ತಿಂಗಳಿನಿಂದ ತನ್ನ ನೂತನ 'ಎಕ್ಸ್ಪೈರಿಂಗ್ ಮೆಸೇಜ್' (Espiring Message) ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಈ ಹೊಸ ವೈಶಿಷ್ಟ್ಯಕ್ಕೆ ಸಂಬಂಧಿಸಿದ ತಥ್ಯಗಳು ಇದೆ ಮೊದಲಬಾರಿಗೆ ಬಂಹಿರಂಗಗೊಂಡಿವೆ.

ಇನ್ಮುಂದೆ WhatsAppನಿಂದ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ ವಿಡಿಯೋ ಹಾಗೂ ಫೋಟೋಗಳು

ನವದೆಹಲಿ: ಫೇಸ್‌ಬುಕ್ (Facebook) ಒಡೆತನದ ಮೆಸೆಂಜರ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದೆ ಸರಣಿಯಲ್ಲಿ ಮೆಸೆಂಜರ್ ವಾಟ್ಸಾಪ್ ಕಳೆದ ಕೆಲವು ತಿಂಗಳುಗಳಿಂದ ಹೊಸ 'ಎಕ್ಸ್‌ಪೈರಿಂಗ್ ಮೆಸೇಜ್' ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಈ ಹೊಸ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಸಂಗತಿಗಳು ಈ ವರ್ಷದ ಮಾರ್ಚ್‌ನಲ್ಲಿ ಮೊದಲು ಬಹಿರಂಗಗೊಂಡಿವೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ವಿಶಿಷ್ಠ ಸೌಲಭ್ಯವನ್ನು ನೀಡುತ್ತದೆ, ಪೂರ್ವನಿರ್ಧರಿತ ಸಮಯದ ನಂತರ, ಚಿತ್ರಗಳು, ವೀಡಿಯೊಗಳು ಮತ್ತು ಜಿಐಎಫ್ ಚಿತ್ರಗಳು ಮುಂತಾದ ಸಂದೇಶದೊಂದಿಗೆ ಕಳುಹಿಸಲಾದ ಸಂದೇಶಗಳು ಇನ್ಮುಂದೆ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ.

ಇದನ್ನು ಓದಿ- ಮೊಬೈಲ್ ನಂಬರ್ ಇಲ್ಲದೆ WhatsApp ನಿರ್ವಹಿಸುವುದು ಹೇಗೆ, ಇಲ್ಲಿದೆ ವಿಧಾನ

ಇತ್ತೀಚಿನ WABetaInfo ವರದಿಯ ಪ್ರಕಾರ, ವಾಟ್ಸಾಪ್ ಇದೀಗ 2.20.201.1 ಬೀಟಾ ಆವೃತ್ತಿಯನ್ನು ಆಂಡ್ರಾಯ್ಡ್‌ನಲ್ಲಿ ಬಿಡುಗಡೆ ಮಾಡಿದೆ ಹಾಗೂ ಈ ಆವೃತ್ತಿಯಲ್ಲಿ ಎಕ್ಸಪಾಯರಿಂಗ್ ಮೀಡಿಯಾ ಫೀಚರ್ ತಥ್ಯಗಳನ್ನೂ ಶಾಮೀಲುಗೊಳಿಸಿದೆ. ಎಕ್ಸಪೈರಿಂಗ್ ಮೆಸೇಜ್ ವೈಶಿಷ್ಟ್ಯದಂತೆಗೆ ಇದು ತನ್ನ ಬಳಕೆದಾರರಿಗೆ ಎಕ್ಸಪೈರಿಂಗ್ ಮೀಡಿಯಾ (ಚಿತ್ರ, ವಿಡಿಯೋ ಹಾಗೂ ಜಿಐಎಫ್) ಕಳುಹಿಸಲು ಅನುಮತಿ ನೀಡಲಿದೆ. ಈ ಮಿಡಿಯಾಗಳನ್ನೂ ಪಡೆದ ವ್ಯಕ್ತಿ ಚಾಟ್ ಮುಕ್ತಾಯಗೊಳಿಸಿದ ಬಳಿಕ ಈ ಸಂದೇಶಗಳು ಸ್ವಯಂ ಚಾಲಿತವಾಗಿ ಡಿಲೀಟ್ ಆಗಲಿವೆ.

ಇದನ್ನು ಓದಿ- WhatsApp Web ಮೂಲಕ ಏಕಕಾಲಕ್ಕೆ 50 ಜನರ ಜೊತೆಗೆ ವಿಡಿಯೋ ಕಾಲ್

ಆದರೆ ಇದರ ವಿಶೇಷತೆ ಎಂದರೆ, ಸಂದೇಶ ಒಂದು ಬಾರಿಗೆ ಕಣ್ಮರೆಯಾದ ಬಳಿಕ (ಟೈಮರ್ ಆಧರಿಸಿ ) ನಿಮ್ಮ ಸ್ಕ್ರೀನ್ ಮೇಲೆ 'This media is expired'ಗಳಂತಹ ಸಂದೇಶಗಳು ಬರುವುದಿಲ್ಲ. ಏಕ್ಸ್ಪೈರಿಂಗ್ ಮಿಡಿಯಾ ಚ್ಯಾಟ್ ವೇಳೆ ಒಂದು ವಿಶಿಷ್ಠ ರೀತಿಯಲ್ಲಿ ಕಂಗೊಳಿಸಲಿದೆ. ಅದನ್ನು ನೋಡಿ ನೀವು ಮಿಡಿಯಾ ಡಿಲೀಟ್ ಆಗಿರುವ ಕುರಿತು ಸುಲಭವಾಗಿ ತಿಳಿದುಕೊಳ್ಳಬಹುದು.

Read More