Home> Technology
Advertisement

WhatsAppನಿಂದ ಬಂಬಾಟ್ ವೈಶಿಷ್ಟ್ಯ ಬಿಡುಗಡೆ, ಇನ್ಮುಂದೆ ಒಂದೇ ಕ್ಲಿಕ್ ನಲ್ಲಿ 100 ಕ್ಕೂ ಹೆಚ್ಚು ಫೋಟೋ ಹಾಗೂ ವಿಡಿಯೋ ಕಳುಹಿಸಿ

WhatsApp ವೇದಿಕೆಯ ಮೇಲೆ ಇನ್ಮುಂದೆ ಬಳಕೆದಾರರು ಏಕಲಾಲಕ್ಕೆ 100ಕ್ಕೂ ಹೆಚ್ಚು ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಹೌದು, ವಾಟ್ಸ್ ಆಪ್ ಇದೀಗ ಅಂಡ್ರಾಯಿಡ್ ಬಳಕೆದಾರರಿಗೆ ಈ ವೈಶಿಷ್ಟ್ಯ ಆರಂಭಿಸಿದೆ. ಅಂಡ್ರಾಯಿಡ್ ಆವೃತ್ತಿ 2.22.24.73 ಯಲ್ಲಿ ಬಳಕೆದಾರರಿಗೆ ಈ ಸೌಕರ್ಯ ಲಭಿಸುತ್ತಿದೆ.
 

WhatsAppನಿಂದ ಬಂಬಾಟ್ ವೈಶಿಷ್ಟ್ಯ ಬಿಡುಗಡೆ, ಇನ್ಮುಂದೆ ಒಂದೇ ಕ್ಲಿಕ್ ನಲ್ಲಿ 100 ಕ್ಕೂ ಹೆಚ್ಚು ಫೋಟೋ ಹಾಗೂ ವಿಡಿಯೋ ಕಳುಹಿಸಿ

WhatsApp ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ಗರುವ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತಿದೆ. ವಾಟ್ಸ್ ನ ಈ ಹೊಸ ವೈಶಿಷ್ಟ್ಯಗಳು ಅಪ್ಲಿಕೇಶನ್‌ನ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತವೆ. ಈ ಹಿಂದೆ ವಾಟ್ಸಾಪ್‌ನಲ್ಲಿ ಏಕಕಾಲಕ್ಕೆ ಬಾರಿಗೆ 30 ಚಿತ್ರಗಳನ್ನು ಮಾತ್ರ ಹಂಚಿಕೊಳ್ಳಬಹುದಾಗಿತ್ತು. ಆದರೆ ಇದೀಗ ವಾಟ್ಸಾಪ್ ಈ ಮಿತಿಯನ್ನು ಹೆಚ್ಚಿಸಿದೆ. ಅಂದರೆ, ಈಗ ಬಳಕೆದಾರರು ಒಂದೇ ಬಾರಿಗೆ 100 ಕ್ಕೂ ಹೆಚ್ಚು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ. ಹೌದು WhatsApp ಇದೀಗ ತನ್ನ Android ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಈ ವೈಶಿಷ್ಟ್ಯವು ಹೊಸ ನವೀಕರಣ Android ಆವೃತ್ತಿ 2.22.24.73 ನೊಂದಿಗೆ ಲಭ್ಯವಿದೆ. ಈ ವೈಶಿಷ್ಟ್ಯದೊಂದಿಗೆ, ನೀವು ಹೆಚ್ಚಿನ ಮೀಡಿಯಾ ಫೈಲ್ ಗಳನ್ನು ಹಂಚಿಕೊಳ್ಳುವ ಸೌಲಭ್ಯವನ್ನು ಪಡೆಯುವಿರಿ.

ಡಾಕ್ಯೂಮೆಂಟ್ ನಲ್ಲಿ ಕ್ಯಾಪ್ಶನ್ ನೀಡುವ ಅವಕಾಶ

ಇದಲ್ಲದೆ ಈ ವೈಶಿಷ್ಟ್ಯಕ್ಕೆ ಮತ್ತೊಂದು ವೈಶಿಷ್ಟ್ಯವನ್ನು ಸೇರಿಸಲಾಗಿದೆ, ಇದು ಡಾಕ್ಯುಮೆಂಟ್‌ಗೆ ಶೀರ್ಷಿಕೆಗಳನ್ನು ಸೇರಿಸಲು ಬಳಕೆದಾರರನ್ನು ಅನುಮತಿಸುತ್ತದೆ. ಈ ಹಿಂದೆ ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳಿಗೆ ಶೀರ್ಷಿಕೆಗಳನ್ನು ಬರೆಯುವ ಆಯ್ಕೆಯನ್ನು ಹೊಂದಿದ್ದರು.

ಇದನ್ನೂ ಓದಿ-

ಅಕ್ಷರ ಮಿತಿಯನ್ನು ಹೆಚ್ಚಿಸಿದೆ
ಇನ್ಮುಂದೆ ಬಳಕೆದಾರರು ವೈಯಕ್ತಿಕ ಮತ್ತು ಗುಂಪು ಚಾಟ್‌ಗಳಲ್ಲಿ ಹಂಚಿಕೊಳ್ಳಲಾದ ಡಾಕ್ಯುಮೆಂಟ್‌ಗಳಿಗೆ ಶೀರ್ಷಿಕೆಗಳನ್ನು ನೀಡಬಹುದು. WhatsApp ಗುಂಪು ವಿಷಯಗಳು ಮತ್ತು ವಿವರಣೆಗಳಿಗಾಗಿ ಅಕ್ಷರ ಮಿತಿಯನ್ನು ಹೆಚ್ಚಿಸಿದೆ. ಇದರೊಂದಿಗೆ, ಬಳಕೆದಾರರು ತಮ್ಮ ಗುಂಪುಗಳನ್ನು ಉತ್ತಮ ರೀತಿಯಲ್ಲಿ ವಿವರಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ-

ಐಒಎಸ್ ಬಳಕೆದಾರರಿಗೆ ಶೀಘ್ರದಲ್ಲೇ ಈ ವೈಶಿಷ್ಟ್ಯ ಸಿಗಲಿದೆ
ಈ ಹೊಸ ವೈಶಿಷ್ಟ್ಯಗಳನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಬಿಡುಗಡೆಗೊಳಿಸಲಾಗಿದ್ದು. ಕಂಪನಿಯು ಶೀಘ್ರದಲ್ಲೇ ಇದನ್ನು iOS ಗಾಗಿ ಪರಿಚಯಿಸುವ ನಿರೀಕ್ಷೆಯಿದೆ.  WhatsApp ಬಿಸಿನೆಸ್ ಮತ್ತೊಂದು ಹೊಸ ವೈಶಿಷ್ಟ್ಯದ ಮೇಲೆ ಕೆಲಸ ನಡೆಯುತ್ತಿದೆ. ಈ ವೈಶಿಷ್ಟ್ಯಕ್ಕೆ 'ಕೆಪ್ಟ್ ಮೆಸೇಜ್' ಹೆಸರನ್ನಿಡಲಾಗಿದೆ.

ಇದನ್ನೂ ಓದಿ-

ಈ ವೈಶಿಷ್ಟ್ಯವು ಬಳಕೆದಾರರಿಗೆ ಡಿಸ್ ಅಪೀಯರಿಂಗ್ ಸಂದೇಶಗಳನ್ನು ಇರಿಸಿಕೊಳ್ಳಲು ಅನುಮತಿಸುತ್ತದೆ. ಕಳೆದ ವರ್ಷ, WhatsApp ಫೈಲ್ ಮಿತಿಯನ್ನು ಈ ಹಿಂದೆ ಇದ್ದ 100MB ಯಿಂದ 2GB ಗೆ ಹೆಚ್ಚಿಸಿತ್ತು, ಆದರೆ ಈ ವೈಶಿಷ್ಟ್ಯವನ್ನು iOS ಗಾಗಿ WhatsApp ನಲ್ಲಿ ಇನ್ನೂ ಪರಿಚಯಿಸಲಾಗಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More