Home> Technology
Advertisement

Whatsapp: ಒಂದೇ ತಿಂಗಳಲ್ಲಿ 71 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

Whatsapp: ವಿಶ್ವದ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ದೊಡ್ಡ ಕ್ರಮ ಕೈಗೊಂಡಿದ್ದು ಸುಮಾರು 71ಲಕ್ಷ ಭಾರತೀಯರ ವಾಟ್ಸಾಪ್ ಖಾತೆಯನ್ನು ನಿಷೇಧಿಸಿದೆ. 

Whatsapp: ಒಂದೇ ತಿಂಗಳಲ್ಲಿ 71 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

Whatsapp Ban: ವಿಶ್ವದಾದ್ಯಂತ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಮೆಟಾ-ಮಾಲೀಕತ್ವದ ತ್ವರಿತ ಮೆಸೇಜಿಂಗ್ ಆಪ್ ವಾಟ್ಸಾಪ್ ಭಾರತದಲ್ಲಿ 71 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ. ಪ್ಲಾಟ್‌ಫಾರ್ಮ್‌ನ ಗೌಪ್ಯತೆ ನೀತಿಗಳನ್ನು ಉಲ್ಲಂಘಿಸಿದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸಾಪ್ ಬಹಿರಂಗಪಡಿಸಿದೆ. 

ವಾಸ್ತವವಾಗಿ, ವಾಟ್ಸಾಪ್ (WhatsApp) ವಂಚಕರು, ವೇದಿಕೆಯ ದುರುಪಯೋಗವನ್ನು ತಡೆಗಟ್ಟಲು ಮತ್ತು ಪ್ಲಾಟ್‌ಫಾರ್ಮ್‌ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಪ್ಲಾಟ್‌ಫಾರ್ಮ್‌ನ ಗೌಪ್ಯತೆ ನೀತಿಗಳನ್ನು ಉಲ್ಲಂಘಿಸುವ ಖಾತೆಗಳನ್ನು ನಿಷೇಧಿಸುತ್ತದೆ. ಇದರ ಭಾಗವಾಗಿ  ಏಪ್ರಿಲ್ 1, 2024 ಮತ್ತು ಏಪ್ರಿಲ್ 30, 2024 ರ ನಡುವೆ ಸುಮಾರು 71 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. 

ಇದನ್ನೂ ಓದಿ- Apple Iphone: ನಿಮ್ಮ Iphone ಬ್ಯಾಟರಿಯ ಅವಧಿಯನ್ನು ಹೆಚ್ಚಿಸಬೇಕೇ? ಇಲ್ಲಿದೆ ಉತ್ತಮ ಸಲಹೆಗಳು!!

ತಿಂಗಳಲ್ಲಿ 71 ಲಕ್ಷ ಭಾರತೀಯ ಖಾತೆಗಳು ಬ್ಯಾನ್: 
ಏಪ್ರಿಲ್ 1, 2024 ಮತ್ತು ಏಪ್ರಿಲ್ 30, 2024ರ ನಡುವೆ ವಾಟ್ಸಾಪ್  7,182,000 ಖಾತೆಗಳನ್ನು ನಿಷೇಧಿಸಿದೆ. ಇವುಗಳಲ್ಲಿ  1,302,000 ಖಾತೆಗಳನ್ನು ಬಳಕೆದಾರರು ವರದಿ ಮಾಡುವ ಮೊದಲೇ ಸಕ್ರಿಯವಾಗಿ ನಿಷೇಧಿಸಲಾಗಿದೆ. 

ಖಾತೆ ಬೆಂಬಲ, ನಿಷೇಧ ಮೇಲ್ಮನವಿಗಳು, ಉತ್ಪನ್ನ ಬೆಂಬಲ ಮತ್ತು ಭದ್ರತಾ ಕಾಳಜಿಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು 10,554 ಬಳಕೆದಾರರ ವರದಿಗಳನ್ನು ಸ್ವೀಕರಿಸಿದೆ. ಆದಾಗ್ಯೂ, ಈ ವರದಿಗಳ ಆಧಾರದ ಮೇಲೆ ಕೇವಲ ಆರು ಖಾತೆಗಳ ಮೇಲಷ್ಟೇ ಕ್ರಮ ಕೈಗೊಳ್ಳಲಾಗಿದೆ. 

ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಸದ್ಯದಲ್ಲೇ ಬರಲಿದೆ ಆಡಿಯೋ ಕಾಲ್ ಫೀಚರ್: ಏನಿದರ ವಿಶೇಷತೆ!

ಭಾರತೀಯ ವಾಟ್ಸಾಪ್ ಖಾತೆಗಳ ನಿಷೇಧವು (WhatsApp Account Ban) ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ಕೆ‌ಕೆ ಅನುಗುಣವಾಗಿದೆ. ಇದು ಬಳಕೆದಾರರ ದೂರುಗಳು ಮತ್ತು ಕಾನೂನು ಉಲ್ಲಂಘನೆಗಳ ವರದಿಗಳ ಪ್ರಕಟಣೆಗೆ ಪ್ರತಿಕ್ರಿಯೆಯಾಗಿ ತೆಗೆದುಕೊಂಡ ಕ್ರಮವನ್ನು ವಿವರಿಸುತ್ತದೆ ಎಂಬುದು ಗಂನಾರ್ಹವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More