Home> Technology
Advertisement

Vi Diwali Offer! 50GB ಡೇಟಾ ಕೇವಲ 200 ರೂಪಾಯಿಗೆ ಲಭ್ಯ

Vi ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಹೆಚ್ಚಿನ ಇಂಟರ್ನೆಟ್ ಬಳಕೆಗಾಗಿ ಅಪಾರ ಕೊಡುಗೆಗಳನ್ನು ತಂದಿದೆ. ಕಂಪನಿಯು 50 ಜಿಬಿ ಡೇಟಾವನ್ನು ಕೇವಲ 200 ರೂ.ಗಳಿಗೆ ನೀಡುತ್ತಿದೆ.

Vi Diwali Offer! 50GB ಡೇಟಾ ಕೇವಲ 200 ರೂಪಾಯಿಗೆ ಲಭ್ಯ

ನವದೆಹಲಿ: ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಹಬ್ಬದ ಋತುವಿನಲ್ಲಿ ಉತ್ತಮ ಕೊಡುಗೆಗಳು ಸಿಗುತ್ತಿವೆ. ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಪ್ರತಿದಿನ ಹೊಸ ಯೋಜನೆಗಳನ್ನು ತರುತ್ತಿವೆ. ಏತನ್ಮಧ್ಯೆ Vi (Vodafone-Idea) ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳಲ್ಲಿ ಇಂಟರ್ನೆಟ್ ಡೇಟಾದ ಉತ್ತಮ ಯೋಜನೆಗಳನ್ನು ತಂದಿದೆ. ಇತ್ತೀಚಿನ ಕೆಲವು ಕೊಡುಗೆಗಳ ಬಗ್ಗೆ ಇಲ್ಲಿದೆ ಮಾಹಿತಿ...

Airtel, Jio, Vi, BSNL ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ

50 ಜಿಬಿ ಡೇಟಾ ಕೇವಲ 200 ರೂಪಾಯಿಗೆ ಲಭ್ಯ: 
Vi ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಹೆಚ್ಚಿನ ಇಂಟರ್ನೆಟ್ ಬಳಕೆಗಾಗಿ ಅಪಾರ ಕೊಡುಗೆಗಳನ್ನು ತಂದಿದೆ. ಕಂಪನಿಯು 50 ಜಿಬಿ ಡೇಟಾವನ್ನು ಕೇವಲ 200 ರೂ.ಗಳಿಗೆ ನೀಡುತ್ತಿದೆ. ಗ್ರಾಹಕ ಸೇವೆಗೆ ಕರೆ ಮಾಡುವ ಮೂಲಕ ಬಳಕೆದಾರರು ಈ ಡೇಟಾ ಪ್ಯಾಕ್ ಅನ್ನು ಸಕ್ರಿಯಗೊಳಿಸಬಹುದು. ಅಂತೆಯೇ ಗ್ರಾಹಕರು ಕೇವಲ 100 ರೂ.ಗೆ 20 ಜಿಬಿ ಹೆಚ್ಚುವರಿ ಡೇಟಾವನ್ನು ತೆಗೆದುಕೊಳ್ಳಬಹುದು.

Airtel, Jio ಮತ್ತು VIನ ಧಮಾಕ ಪ್ಲಾನ್‌ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯ

ಈ ಕಂಪನಿಯು ಮೂರು ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುತ್ತಿದೆ:
ದೇಶದಲ್ಲಿ ಕೆಲಸ ಮಾಡುತ್ತಿರುವ ಇಂಟರ್ನೆಟ್ ಸೇವಾ ಪೂರೈಕೆದಾರ ಕಂಪನಿ ಎಕ್ಸಿಟೆಲ್ (Excitel)  ದೇಶದ ನಾಲ್ಕು ನಗರಗಳಲ್ಲಿ ಮೂರು ತಿಂಗಳ ಉಚಿತ ಇಂಟರ್ನೆಟ್ (Internet) ನೀಡುತ್ತಿದೆ. ಕಂಪನಿಯು ಬಿಡುಗಡೆ ಮಾಡಿರುವ ಪ್ಲಾನ್ ಪ್ರಕಾರ ಬಳಕೆದಾರರು ಮೊದಲ ಆರು ತಿಂಗಳು ಪಾವತಿಸಬಹುದು ಮತ್ತು ಅವರ ಯೋಜನೆಯಲ್ಲಿ ಮೂರು ತಿಂಗಳವರೆಗೆ ಉಚಿತ ಸೇವೆಯನ್ನು ಪಡೆಯಬಹುದು. ಕಂಪನಿಯು ಈ ಕೊಡುಗೆಗೆ #FullpeHalfFree ಎಂದು ಹೆಸರಿಸಿದೆ.

Read More