Home> Technology
Advertisement

UPI ಬಳಕೆದಾರರಿಗೆ ಶಾಕ್! ಇನ್ನು ಮುಂದೆ ವಹಿವಾಟಿನ ಮೇಲೆ ನೀಡಬೇಕಾಗುತ್ತದೆ ಹೆಚ್ಚಿನ ಶುಲ್ಕ !

UPI Transaction fees : UPI ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇಲ್ಲಿಯವರೆಗೆ ಈ ಸೇವೆ ಉಚಿತವಾಗಿತ್ತು.ಆದರೆ ಈಗ ಕಂಪನಿಗಳು ಯುಪಿಐ ಮೂಲಕ ಮಾಡಿದ ವಹಿವಾಟಿಗೆ ಶುಲ್ಕ ವಿಧಿಸಲು ಸಜ್ಜಾಗುತ್ತಿವೆ.

UPI ಬಳಕೆದಾರರಿಗೆ ಶಾಕ್! ಇನ್ನು ಮುಂದೆ ವಹಿವಾಟಿನ ಮೇಲೆ ನೀಡಬೇಕಾಗುತ್ತದೆ ಹೆಚ್ಚಿನ ಶುಲ್ಕ !

UPI Transaction : ಇನ್ನು ಕೆಲವೇ ದಿನಗಳಲ್ಲಿ UPI ವಹಿವಾಟುಗಳ ಮೇಲೆ ಶುಲ್ಕ ವಿಧಿಸಬಹುದು ಎನ್ನುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಯುಪಿಐ ಕಂಪನಿಗಳು ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿವೆ ಎನ್ನಲಾಗಿದೆ. ಪೇಟಿಎಂ ಮೇಲೆ ರಿಸರ್ವ್ ಬ್ಯಾಂಕ್  ಕ್ರಮ ಕೈಗೊಂಡ ನಂತರ, ಯುಪಿಐ ಕಂಪನಿಗಳ ಪ್ರಕ್ರಿಯೆಗಳಲ್ಲಿ ಕೆಲವು ಬದಲಾವಣೆಗಳಾಗಿವೆ.  UPI ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇಲ್ಲಿಯವರೆಗೆ ಈ ಸೇವೆ ಉಚಿತವಾಗಿತ್ತು.ಆದರೆ ಈಗ ಕಂಪನಿಗಳು ಯುಪಿಐ ಮೂಲಕ ಮಾಡಿದ ವಹಿವಾಟಿಗೆ ಶುಲ್ಕ ವಿಧಿಸಲು ಸಜ್ಜಾಗುತ್ತಿವೆ.

ಹೆಚ್ಚುತ್ತಿರುವ ಡಿಜಿಟಲ್ ವಹಿವಾಟುಗಳು :
ಡಿಜಿಟಲ್ ಇಂಡಿಯಾ, ಕೊರೊನಾ ಸಾಂಕ್ರಾಮಿಕ ಮತ್ತು ನೋಟು ಅಮಾನ್ಯೀಕರಣದ ನಂತರ ಡಿಜಿಟಲ್ ವಹಿವಾಟು ಹೆಚ್ಚಾಗಿದೆ. ಜನರಲ್ಲಿ ಡಿಜಿಟಲ್ ಹಣ ವರ್ಗಾವಣೆಯ ಕ್ರೇಜ್ ಕೂಡಾ ಹೆಚ್ಚಿದೆ.ಇದೊಂದು ಸುರಕ್ಷಿತ ಮತ್ತು ಸುಲಭ ವಿಧಾನವಾಗಿದೆ. ನೆರೆಹೊರೆಯ ಅಂಗಡಿಯಲ್ಲಿ 5 ರೂಪಾಯಿಗೆ ಮಿಠಾಯಿ ಖರೀದಿಸುತ್ತಿರಲಿ ಅಥವಾ ದೊಡ್ಡ ಅಂಗಡಿಗಳಲ್ಲಿ ಸಾವಿರಾರು ಬಟ್ಟೆ ಮತ್ತು ಆಭರಣಗಳನ್ನು ಖರೀದಿಸುತ್ತಿರಲಿ, ಇತ್ತೀಚಿನ ದಿನಗಳಲ್ಲಿ ಜನರು ಯುಪಿಐ ಪಾವತಿಗಳ ಮೂಲಕ ಸುಲಭವಾಗಿ ಪಾವತಿಗಳನ್ನು ಮಾಡುತ್ತಾರೆ. 

ಇದನ್ನೂ ಓದಿ : ಭಾರೀ ಡಿಸ್ಕೌಂಟ್ ನಲ್ಲಿ iPhone 15 ಮಾರಾಟ ! ಖರೀದಿ ಮೇಲೆ ಸಾವಿರಾರು ರೂ.ಗಳ ಉಳಿತಾಯ

UPI ಯ ಜನಪ್ರಿಯತೆಯು ಜನರಲ್ಲಿ ಸ್ವಲ್ಪ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಉಚಿತವಾಗಿರುವುದು. ಸಾರ್ವಜನಿಕರು ಮತ್ತು ವ್ಯಾಪಾರಿಗಳು ಯಾವುದೇ ಶುಲ್ಕವಿಲ್ಲದೆ UPI ಅನ್ನು ಬಳಸಬಹುದು.ಆದರೆ, ಈಗ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಯುಪಿಐ ಕಂಪನಿಗಳು ಈಗ ಇದಕ್ಕೂ ಶುಲ್ಕ ವಿಧಿಸಲು ಸಜ್ಜಾಗಿವೆ. 

UPI ವರ್ಗಾವಣೆಗೆ ಇನ್ನು ಪಾವತಿಸಬೇಕು ಹೆಚ್ಚಿನ ಶುಲ್ಕಗಳು? : 
PhonePe ಮತ್ತು Google Pay ಯುಪಿಐ ಜಾಗದಲ್ಲಿ ಪ್ರಬಲ ಪಾವತಿ ಅಪ್ಲಿಕೇಶನ್‌ಗಳಾಗಿವೆ. ಪೇಟಿಎಂ ಮೇಲೆ ಆರ್‌ಬಿಐ ಕಡಿವಾಣ ಹಾಕಿದ ನಂತರ, ಈ ಆಪ್‌ಗಳ ಬಳಕೆದಾರರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಇಲ್ಲಿಯವರೆಗೆ ಯುಪಿಐ ಸೇವೆಗಳು ಉಚಿತವಾಗಿದ್ದವು. ಆದರೆ ,ಈಗ ಅದರ ಮೇಲೆ ಶುಲ್ಕ ವಿಧಿಸಲು ಕಂಪನಿಗಳು ತಯಾರಾಗುತ್ತಿವೆ. ಫಿನ್‌ಟೆಕ್ ಕಂಪನಿಗಳು ತಮ್ಮ ಆದಾಯದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ  ಹೀಗಾಗಿ ಕಂಪನಿಗಳು UPI ವಹಿವಾಟುಗಳಿಗೆ ಶುಲ್ಕ ವಿಧಿಸುವ ಆಲೋಚನೆಯಲ್ಲಿದೆ. ದೀರ್ಘಾವಧಿಯ ಸುಸ್ಥಿರತೆಗಾಗಿ, ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಹೊಂದಿರುವ ಕ್ರೆಡಿಟ್ ಕಾರ್ಡ್ ತರಹದ ರಚನೆಯ ಅಗತ್ಯವಿದೆ ಎಂದು ಕಂಪನಿಗಳು ಹೇಳುತ್ತವೆ.

ಇದನ್ನೂ ಓದಿ  : Car Wash Tips At Home: ಹೆಚ್ಚು ನೀರಿನ ಅಗತ್ಯವಿಲ್ಲ, ಸುಲಭವಾಗಿ ಮನೆಯಲ್ಲಿಯೇ ಕಾರ್ ವಾಶ್ ಮಾಡಬಹುದು!

ಈಗ UPI ಶೂನ್ಯ MDR ಅನ್ನು ಹೊಂದಿದೆ. ಇದು ತಮ್ಮ ವ್ಯವಹಾರ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಫಿನ್‌ಟೆಕ್ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ. ಕಂಪನಿಗಳು ಎನ್‌ಪಿಸಿಐ ಜತೆ ಈ ಬಗೆ ಚರ್ಚಿಸಿವೆ. ಆದರೆ, ಯುಪಿಐ ಶುಲ್ಕ ವಿಧಿಸಲು ಸರ್ಕಾರ ನಿರಾಕರಿಸಿದೆ. ಗಮನಾರ್ಹವಾಗಿ, GooglePay ಮತ್ತು PhonePe ಪ್ರಸ್ತುತ UPI ಮಾರುಕಟ್ಟೆಯ 80 ಪ್ರತಿಶತ ಪಾಲನ್ನು ಹೊಂದಿವೆ. RBI ಕ್ರಮದ ನಂತರ, Paytm ನ UPI ವಹಿವಾಟು ಕಡಿಮೆಯಾಗಿದೆ. ಆದರೆ Google Pay, PhonePe ನಂತಹ ಕಂಪನಿಗಳು ಇದರಿಂದ ಲಾಭ ಪಡೆದಿವೆ.

UPI ಮೇಲೆ ಶುಲ್ಕ ವಿಧಿಸಿದರೆ ಶೇಕಡಾ 70 ರಷ್ಟು ಜನ ಬಳಕೆಯನ್ನೇ ನಿಲ್ಲಿಸುತ್ತಾರೆ :
ಇತ್ತೀಚೆಗಷ್ಟೇ ಯುಪಿಐ ಶುಲ್ಕಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲಾಗಿತ್ತು. ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಿದರೆ ಯುಪಿಐ ಬಳಸುವ ಶೇಕಡ 70ರಷ್ಟು ಜನರು ಯುಪಿಐ ಬಳಸುವುದನ್ನು ನಿಲ್ಲಿಸುತ್ತಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಉಚಿತ ಎಂಬುದಕ್ಕೆ ಜನರು ಇದನ್ನು ಹೆಚ್ಚು ಬಳಸುತ್ತಾರೆ ಎಂಬುದಾಗಿ ಸಮೀಕ್ಷೆಯಲ್ಲಿ ಕಂಡುಬಂದಿದೆ. ಒಂದು ವೇಳೆ ಇದರ ಮೇಲೆ ಶುಲ್ಕ ವಿಧಿಸಿದರೆ ಜನರು ಅದನ್ನು ಬಳಸುವುದನ್ನು ನಿಲ್ಲಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More