Home> Technology
Advertisement

WhatsApp Android ಬಳಕೆದಾರರಿಗಾಗಿ ಬಂದಿದೆ ಮತ್ತೆರಡು ವೈಶಿಷ್ಟ್ಯಗಳು

WaBetaInfo ಪ್ರಕಾರ, ವಾಟ್ಸಾಪ್ ಬೀಟಾದಲ್ಲಿ ಈಗ  Voice Notes Waveforms ಅನ್ನು ಸೇರಿಸಲಾಗಿದೆ. ವಾಟ್ಸಾಪ್ನ ವಾಯ್ಸ್ ನೋಟ್ ಗಳಲ್ಲಿ ಈಗ ನೇರ ರೇಖೆಗಳ ಬದಲು Waveforms ಕಾಣಿಸಲಿದೆ. 

WhatsApp Android ಬಳಕೆದಾರರಿಗಾಗಿ ಬಂದಿದೆ ಮತ್ತೆರಡು ವೈಶಿಷ್ಟ್ಯಗಳು

ನವದೆಹಲಿ: ಬಳಕೆದಾರರಿಗಾಗಿ ವಾಟ್ಸಾಪ್ ಬೀಟಾದಲ್ಲಿ 2 ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಆಂಡ್ರಾಯ್ಡ್ ಬಳಕೆದಾರರು ಮಾತ್ರ ಈ ವೈಶಿಷ್ಟ್ಯಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ. ವಾಟ್ಸಾಪ್ ನ  ಹೊಸ ವೈಶಿಷ್ಟ್ಯಗಳು Voice Notes ಮತ್ತು ಸ್ಟಿಕ್ಕರ್ ಪ್ಯಾಕ್‌ಗಳಿಗೆ (Sticker pack) ಸಂಬಂಧಿಸಿವೆ. ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರು ಈ ಹೊಸ ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುತ್ತದೆ.

ವೇವ್ ಫಾರ್ಮ್ ನೊಂದಿಗೆ ವಾಯ್ಸ್ ನೋಟ್  :

WaBetaInfo ಪ್ರಕಾರ, ವಾಟ್ಸಾಪ್ ಬೀಟಾದಲ್ಲಿ ಈಗ  Voice Notes Waveforms ಅನ್ನು ಸೇರಿಸಲಾಗಿದೆ. ವಾಟ್ಸಾಪ್ನ ವಾಯ್ಸ್ ನೋಟ್ ಗಳಲ್ಲಿ ಈಗ ನೇರ ರೇಖೆಗಳ ಬದಲು Waveforms ಕಾಣಿಸಲಿದೆ. ವಾಟ್ಸಾಪ್ನ ಈ ಹೊಸ ವೈಶಿಷ್ಟ್ಯವು ಆಂಡ್ರಾಯ್ಡ್ ಆವೃತ್ತಿ (Android Version ) 2.21.13.17 ರಲ್ಲಿ ಎಲ್ಲಾ ಬೀಟಾ ಟೆಸ್ಟರ್ಸ್ ಗೆ ಕಾಣಿಸಲಿದೆ. 

ಇದನ್ನೂ ಓದಿ : Mi 11 Lite: ಇಂದಿನಿಂದ ಮಾರಾಟಕ್ಕೆ ಲಭ್ಯವಾಗಲಿದೆ ಸ್ಲಿಮ್ಮೆಸ್ಟ್ ಸ್ಮಾರ್ಟ್‌ಫೋನ್ ಎಂಐ 11 ಲೈಟ್

ಡಾರ್ಕ್ ಮೋಡ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು : 
ಬೇರೆ ಬೇರೆ ಸ್ಥಳಗಳಿಂದ ವಾಯ್ಸ್ ನೋಟ್ ಗಳನ್ನು ಪ್ಲೆ ಮತ್ತು ಪಾಸ್ ಮಾಡುವಾಗ ಕೆಲವು ಬಳಕೆದಾರರಿಗೆ ಸಮಸ್ಯೆ ಎದುರಾಗಬಹುದು. ಯಾಕೆಂದರೆ, ವಾಯ್ಸ್ ನೋಟ್ಸ್  ತರಂಗರೂಪಗಳು ಡಾರ್ಕ್ ಮೋಡ್‌ನಲ್ಲಿ (Dark Mode) ಹೆಚ್ಚು ಗೋಚರಿಸುವುದಿಲ್ಲ. ಪ್ರಸ್ತುತ, ಈ ವೈಶಿಷ್ಟ್ಯವು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಸ್ವಲ್ಪ ಸಮಯದ ನಂತರ ಈ ಹೊಸ ವೈಶಿಷ್ಟ್ಯವು ಐಒಎಸ್ (iOS ) ಬಳಕೆದಾರರಿಗೂ ಲಭ್ಯವಾಗಲಿದೆ.

ಈಗ ಫಾವರ್ಡ್ ಮಾಡಬಹುದು ಸ್ಟಿಕ್ಕರ್ ಪ್ಯಾಕ್ : 
ವಾಟ್ಸಾಪ್ ಬೀಟಾದಲ್ಲಿ ಹೊಸ ಅಪ್ ಡೇಟ್ ಮಾಡಿದ ನಂತರ, ಬಳಕೆದಾರರು ತಮ್ಮ ಸ್ನೇಹಿತರಿಗೆ ಸ್ಟಿಕ್ಕರ್ ಪ್ಯಾಕ್‌ಗಳನ್ನು (Sticker Packs)  ಫಾರ್ವರ್ಡ್ ಮಾಡಲು ಸಾಧ್ಯವಾಗುತ್ತದೆ. ವಾಟ್ಸಾಪ್ನಿಂದ ಡೌನ್‌ಲೋಡ್ (whatsapp download) ಮಾಡಲಾದ ಸ್ಟಿಕ್ಕರ್ ಪ್ಯಾಕ್‌ಗಳನ್ನು ಮಾತ್ರ ಫಾರ್ವರ್ಡ್ ಮಾಡಲು ಸಾಧ್ಯವಾಗುತ್ತದೆ. ಐಫೋನ್ (iPhone ) ಬಳಕೆದಾರರಿಗಾಗಿ ಸ್ಟಿಕ್ಕರ್ ಪ್ಯಾಕ್‌ಗಳ ವೈಶಿಷ್ಟ್ಯವು ಈಗಾಗಲೇ ವಾಟ್ಸಾಪ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ : Electricity Saving Tips: ಈ ನಾಲ್ಕು ವಿಧಾನಗಳನ್ನು ಅನುಸರಿಸಿದರೆ ಕಡಿಮೆಯಾಗಲಿದೆ ವಿದ್ಯುತ್ ಬಿಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More