Home> Technology
Advertisement

Budget Smartphones: ದೀರ್ಘ ಬ್ಯಾಟರಿ, ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು

ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು: ಈ ಸ್ಮಾರ್ಟ್‌ಫೋನ್‌ಗಳು ಕುಟುಂಬ ಸದಸ್ಯರಿಗೆ ಉಡುಗೊರೆ ನೀಡಲು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇವುಗಳು ದೊಡ್ಡ ಬ್ಯಾಟರಿ, ಉತ್ತಮ ವಿನ್ಯಾಸ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ.

Budget Smartphones: ದೀರ್ಘ ಬ್ಯಾಟರಿ, ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು

ನವದೆಹಲಿ: ನಿಮ್ಮ ಹೆತ್ತವರು ಅಥವಾ ಉಡುಗೊರೆ ನೀಡಲು ಉತ್ತಮ ವಿನ್ಯಾಸ ಮತ್ತು ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸುವುದು ಉತ್ತಮ. ಇಂದು ನಾವು ನಿಮಗಾಗಿ ಕೆಲವು ಜನಪ್ರಿಯ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಗ್ರಾಹಕರು ದೀರ್ಘ   ಬ್ಯಾಟರಿಯನ್ನು ಜೊತೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವುಗಳ ಬೆಲೆ ಎಷ್ಟು ಎಂದು ತಿಳಿಯಿರಿ.

REDMI A1+:ಸ್ಮಾರ್ಟ್‌ಫೋನ್‌ನ ಬೆಲೆ ಕೇವಲ 6,299 ರೂ. ವೈಶಿಷ್ಟ್ಯಗಳು ಮತ್ತು ವಿಶೇಷಣಗಳ ವಿಷಯದಲ್ಲಿ ಈ ಸ್ಮಾರ್ಟ್ಫೋನ್ 3GB RAM ಜೊತೆಗೆ 32GB ROM ಮತ್ತು 512GBವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ನೀಡುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 16.56 cm (6.52 ಇಂಚು) HD+ ಡಿಸ್ಪ್ಲೇ ಲಭ್ಯವಿದೆ. ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದ್ರೆ, 8MP ಹಿಂಬದಿಯ ಕ್ಯಾಮೆರಾ, 5MP ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. 5000 mAh ಲಿಥಿಯಂ ಪಾಲಿಮರ್ ಬ್ಯಾಟರಿ ಈ ಹೊಂದಿರುವ ಈ ಸ್ಮಾರ್ಟ್‌ಫೋನ್‌ Mediatek Helio A22 ಪ್ರೊಸೆಸರ್ನೊಂದಿಗೆ ಬರುತ್ತದೆ.

ಇದನ್ನೂ ಓದಿ: ಇಪಿಎಫ್‌ಒ ಬಡ್ಡಿ ದರದಲ್ಲಿ ಹೆಚ್ಚಳ : ಹಣಕಾಸು ಸಚಿವಾಲಯ ಘೋಷಣೆ

Infinix Smart 7: ಈ ಸ್ಮಾರ್ಟ್‌ಫೋನ್‌ನ ಬೆಲೆ ಕೇವಲ 7,299 ರೂ. ಈ ಸ್ಮಾರ್ಟ್‌ಫೋನ್ Unisoc Spreadtrum SC9863A1 ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ 4GB RAM ಜೊತೆಗೆ 64GB ROM ಮತ್ತು 2TB ವಿಸ್ತರಿಸಬಹುದಾದ ಸ್ಟೋರೇಜ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ 16.76 ಸೆಂ ಅಂದರೆ (6.6 ಇಂಚು) HD + ಡಿಸ್ಪ್ಲೇಯನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ 13MP + AI ಲೆನ್ಸ್‌ನ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 6000 mAh ಬ್ಯಾಟರಿಯನ್ನು ಹೊಂದಿದೆ.

POCO C51: POCO C51 ಸ್ಮಾರ್ಟ್‌ಫೋನ್ ಬೆಲೆ ಕೇವಲ 7,999 ರೂ. ಈ ಸ್ಮಾರ್ಟ್‌ಫೋನ್‌ನಲ್ಲಿ Helio G36 ಪ್ರೊಸೆಸರ್ ನೀಡಲಾಗಿದೆ. ಇದರೊಂದಿಗೆ 5000 mAh ಬ್ಯಾಟರಿ ಸಹ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. POCO C51 ಸ್ಮಾರ್ಟ್‌ಫೋನ್ 4GB RAM ಜೊತೆಗೆ 64GB ROM ಮತ್ತು 1TBವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ 16.56 cm ಅಂದರೆ (6.52 ಇಂಚು) HD + ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದರ ಹಿಂಭಾಗದಲ್ಲಿ 8MP ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾ ಲಭ್ಯವಿದೆ.

ಇದನ್ನೂ ಓದಿ: ಕೇವಲ 55 ಸಾವಿರ ರೂ.ಗಳಿಗೆ ಮನೆಗೆ ಕೊಂಡೊಯ್ಯಿರಿ ಈ ಎಲೆಕ್ಟ್ರಿಕ್ ಸ್ಕೂಟರ್!

SAMSUNG Galaxy F04: ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 9,499 ರೂ.ಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ROM ಜೊತೆಗೆ 1 TBವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 16.51 cm ಅಂದರೆ (6.5 ಇಂಚು) HD ಡಿಸ್ಪ್ಲೇ ನೀಡಲಾಗಿದೆ. ಸ್ಮಾರ್ಟ್‌ಫೋನ್ 13MP + 2MP ಹಿಂಭಾಗದ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 5MP ಮುಂಭಾಗದ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು 5000 mAh ಲಿಥಿಯಂ ಐಯಾನ್ ಬ್ಯಾಟರಿಯ ಮೇಲೆ Mediatek Helio P35 ಪ್ರೊಸೆಸರ್ ಸಹ ಪಡೆಯುತ್ತಾರೆ.

SAMSUNG Galaxy F13: ಈ ಸ್ಮಾರ್ಟ್‌ಫೋನ್ ಅನ್ನು 10,999 ರೂ.ಗೆ ಖರೀದಿಸಬಹುದು. ಇದರಲ್ಲಿ ಗ್ರಾಹಕರಿಗೆ 64GB ROM ಜೊತೆಗೆ 4GB RAM ಮತ್ತು 1TBವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ 16.76 cm ಅಂದರೆ (6.6 ಇಂಚುಗಳು) ಪೂರ್ಣ HD+ ಡಿಸ್ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು 50MP + 5MP + 2MP ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 8MP ಕ್ಯಾಮೆರಾ ಪಡೆಯುತ್ತಾರೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು Exynos 850 ಪ್ರೊಸೆಸರ್ ಜೊತೆಗೆ 6000 mAh ಲಿಥಿಯಂ ಐಯಾನ್ ಬ್ಯಾಟರಿಯನ್ನು ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More