Home> Technology
Advertisement

ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಇಂದೇ ಮನೆಗೆ ತನ್ನಿ ಎಲ್ಪಿಜಿ ಗ್ಯಾಸ್ ಡಿಟೆಕ್ಟರ್

ಎಲ್ಪಿಜಿ ಸೋರಿಕೆಯಿಂದಾಗಿ ಸಿಲಿಂಡರ್ ಬ್ಲಾಸ್ಟ್ ನಂತಹ ಅವಘಡಗಳು ಪ್ರಾಣಕ್ಕೆ ಕುತ್ತು ತರುತ್ತವೆ. ಎಷ್ಟೇ ನಿಗಾವಹಿಸಿದರು ಕೂಡ ಕೆಲವೊಮ್ಮೆ ಇಂತಹ ಅಚಾತುರ್ಯವನ್ನು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಆದರೆ, ಒಂದು ಅಲಾರಂ ಬಲ್ಬ್ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು.

ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಇಂದೇ ಮನೆಗೆ ತನ್ನಿ ಎಲ್ಪಿಜಿ ಗ್ಯಾಸ್ ಡಿಟೆಕ್ಟರ್

ಬೆಂಗಳೂರು: ಎಲ್ಪಿಜಿ ಸೋರಿಕೆಯಿಂದಾಗಿ ಉಂಟಾಗುವ ಸಿಲಿಂಡರ್ ಬ್ಲಾಸ್ಟ್ ನಿಂದಾಗಿ ಕೆಲವೊಮ್ಮೆ ಇಡೀ ಕುಟುಂಬವೇ ಪ್ರಾಣಾಪಾಯದಲ್ಲಿ ಸಿಲುಕುತ್ತದೆ. ಕೆಲವರು ಇದನ್ನು ತಪ್ಪಿಸಲು ಸ್ಮೋಕ್ ಡಿಟೆಕ್ಟರ್‌ಗಳನ್ನು ಮನೆಯಲ್ಲಿ ಸ್ಥಾಪಿಸುತ್ತಾರೆ. ಆದರೆ, ಈ ಸ್ಮೋಕ್ ಡಿಟೆಕ್ಟರ್‌ಗಳು ಕೇವಲ ಹೊಗೆಯನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗುತ್ತದೆ, ಸಿಲಿಂಡರ್ ಲೀಕ್ ಆಗುವುದನ್ನು ಪತ್ತೆ ಹಚ್ಚುವಲ್ಲಿ ಅಷ್ಟು ಪರಿಣಾಮಕಾರಿ ಆಗಿರುವುದಿಲ್ಲ. ಆದಾಗ್ಯೂ, ತಂತ್ರಜ್ಞಾನ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಸಾಧ್ಯವಾಗುವಂತಹ ಅಲಾರಂ ಬಲ್ಬ್ ಗಳು ಬಂದಿವೆ. ಇವುಗಳ ಸಹಾಯದಿಂದ  ಮನೆಯಲ್ಲಿ ಅನಿಲ ಸೋರಿಕೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು.

ವಾಸ್ತವವಾಗಿ, ಅಡುಗೆ ಮನೆಯಲ್ಲಿ ಎಲ್ಪಿಜಿ ಗ್ಯಾಸ್ ಲೀಕೇಜ್ ಇರುತ್ತದೆ. ಆದರೆ ಅನೇಕ ಬಾರಿ ಅದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಇದನ್ನು ಗಮನದಲ್ಲಿಟ್ಟುಕೊಂದು ಗ್ಯಾಸ್ ಸೋರಿಕೆಯನ್ನು ಪತ್ತೆಹಚ್ಚುವಂತಹ ಅಲಾರಂ ಬಲ್ಬ್ ಅನ್ನು ಕಂಡು ಹಿಡಿಯಲಾಗಿದೆ. ಯಾವುದೀ ಸಾಧನ, ಇದರ ವೈಶಿಷ್ಟ್ಯಗಳೇನು ಎಂದು ತಿಳಿಯೋಣ...

ಇದನ್ನೂ ಓದಿ- ಕೈಗೆಟುಕುವ ಬೆಲೆಯಲ್ಲಿ ಮನೆಗೆ ತನ್ನಿ 55 ಇಂಚಿನ ಸ್ಮಾರ್ಟ್ ಟಿವಿ

ಹಲೋ ನಿಕಿಕ್ಸ್ ಶೀಲ್ಡ್ ಫೈರ್ ಅಲಾರ್ಮ್:
ನಾವು ಮಾತನಾಡುತ್ತಿರುವ ಸಾಧನದ ಹೆಸರು ಹಲೋ ನಿಕಿಕ್ಸ್ ಶೀಲ್ಡ್ ಫೈರ್ ಅಲಾರ್ಮ್. ಇದು ಹೊಗೆ ಮತ್ತು ಕಾರ್ಬನ್ ಡೈಆಕ್ಸೈಡ್, ಎಲ್‌ಪಿಜಿ, ಮೀಥೇನ್ ಮತ್ತು ಹೈಡ್ರೋಜನ್‌ನಂತಹ ಅನಿಲ ಸೋರಿಕೆಯನ್ನು ಸುಲಭವಾಗಿ ಪತ್ತೆ ಮಾಡಬಲ್ಲದು. ನೋಡಲು ಥೇಟ್ ಬಲ್ಬ್ ನಂತೆಯೇ ಕಾಣುವ ಈ ಸಾಧನವು ಎಲ್‌ಪಿಜಿ ಲೀಕ್ ಆದರೆ ಅಲಾರಂ ಮೂಲಕ ತಕ್ಷಣ ಎಚ್ಚರಿಕೆ ನೀಡುತ್ತದೆ. 

ಗ್ಯಾಸ್ ಸೋರಿಕೆಯಾಗುವ ಸಾಧ್ಯತೆಯಿರುವ ಮನೆಯ ಆ ಭಾಗದಲ್ಲಿ ನೀವು ಈ ಅಲಾರಂ ಅನ್ನು ಸ್ಥಾಪಿಸಬಹುದು. ಅಗತ್ಯವಿದ್ದರೆ ನೀವು ನಿಮ್ಮ ಕಚೇರಿ ಅಥವಾ ಗೋಡೌನ್‌ನಲ್ಲಿಯೂ ಈ ಸಾಧನವನ್ನು ಬಳಸಬಹುದು. ಇದರಿಂದ ಗ್ಯಾಸ್ ಸೋರಿಕೆಯಿಂದ ಉಂಟಾಗುವ ಅಗ್ನಿ ಅವಘಡದಂತಹ ದುರ್ಘಟನೆಗಳನ್ನು ತಪ್ಪಿಸಬಹುದು. ಇದು ಈ ಫೈರ್ ಅಲಾರಂ ನಿಸ್ತಂತುವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ- ಫುಲ್ ಚಾರ್ಜ್‌ನಲ್ಲಿ 525 ಕಿಮೀ ಚಲಿಸಬಲ್ಲ ಈ ಎಲೆಕ್ಟ್ರಿಕ್ ಕಾರಿಗಿದೆ ವಿಶ್ವದಲ್ಲೇ ಅತಿ ಹೆಚ್ಚು ಬೇಡಿಕೆ

ಅಲಾರಂ ಬಲ್ಬ್ ವೈಶಿಷ್ಟ್ಯ:
>> ಈ ಗ್ಯಾಸ್ ಲೀಕ್ ಅಲಾರಂ ಬಲ್ಬ್ ಅನ್ನು ನಿಮ್ಮ ಮನೆಯಲ್ಲಿ ಇರುವ ಬಲ್ಬ್ ಹೋಲ್ಡರ್‌ಗೆ ಪ್ಲಗ್ ಮಾಡಿ, ಅದರ ನಂತರ ಸಾಧನವು ವಿದ್ಯುತ್ ಸರಬರಾಜನ್ನು ಪಡೆಯಲು ಪ್ರಾರಂಭಿಸುತ್ತದೆ ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. 
>> ಈ ಅಲಾರಂನ ಸದ್ದು ಎಷ್ಟು ಜೋರಾಗಿದೆಯೆಂದರೆ ಅದು 85 ಡೆಸಿಬಲ್‌ಗಳ ಶಬ್ದವನ್ನು ಹೊಂದಿರುವುದರಿಂದ ಮನೆಯಲ್ಲಿ ಮತ್ತು ಮನೆಯ ಹೊರಗಿನ ಜನರು ಅದನ್ನು ಸುಲಭವಾಗಿ ಕೇಳಬಹುದು. 

ಬೆಲೆ ಮತ್ತು ಲಭ್ಯತೆ:
ಈ ಗ್ಯಾಸ್ ಅಲಾರಂ ಅನ್ನು ನೀವು ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದೆ. ಇದರ ಬೆಲೆ ಸುಮಾರು ₹ 700ವರೆಗೆ ಇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More