Home> Technology
Advertisement

Third Eye For Human: ಇನ್ಮುಂದೆ ಮನುಷ್ಯರು ಕೂಡ ಮುಕ್ಕಣ್ಣರಾಗಬಹುದು, ಹೇಗೆ ತಿಳಿಯಲು ಸುದ್ದಿ ಓದಿ

Third Eye For Human - ಮೊಬೈಲ್ ಸ್ಕ್ರೀನ್ ನಿಂದ ದೃಷ್ಟಿ ಬೇರೆಡೆ ಹರಿಸಲು ಇಷ್ಟಪಡದ ಜನರಿಗೆ, ಈ ವಿಶೇಷ ಸಾಧನವು ಹೆಚ್ಚು ಕೆಲಸಕ್ಕೆ ಬರಲಿದೆ.

Third Eye For Human: ಇನ್ಮುಂದೆ ಮನುಷ್ಯರು ಕೂಡ ಮುಕ್ಕಣ್ಣರಾಗಬಹುದು, ಹೇಗೆ ತಿಳಿಯಲು ಸುದ್ದಿ ಓದಿ

ಸಿಯೋಲ್: Third Eye For Human - ದೇವಾದಿದೇವ ಮಹಾದೇವನ ಮೂರನೇ ಕಣ್ಣಿನ ಬಗ್ಗೆ ನೀವೆಲ್ಲರೂ ಕೇಳಿರಬಹುದು, ಆದರೆ ಒಬ್ಬ ವ್ಯಕ್ತಿಗೆ ಮೂರನೇ ಕಣ್ಣು ನೀಡಿದಾಗ ಏನಾಗಲಿದೆ ಎಂಬುದನ್ನು ಎಂದಾದರು ಯೋಚಿಸಿದ್ದೀರಾ? ಹೌದು, ದಕ್ಷಿಣ ಕೊರಿಯಾದ (South Korea)  ವಿಜ್ಞಾನಿಯೊಬ್ಬರು (Scientist) ಇದೇ ರೀತಿಯ ಸಾಧನೆ ಮಾಡಿದ್ದಾರೆ. ಈ ವಿಜ್ಞಾನಿ ಮಾನವನ ಮೂರನೇ ಕಣ್ಣಿನಂತೆ ಕೆಲಸ ಮಾಡುವ ಸಾಧನವೊಂದನ್ನು (Device) ಅಭಿವೃದ್ಧಿ ಪಡೆಸಿದ್ದಾರೆ. ಮೂರನೇ ಕಣ್ಣು (Third Eye) ಎಂದು ಕರೆಯಲ್ಪಡುವ ಈ ಸಾಧನವು ದಾರಿಯಲ್ಲಿ ನಡೆಯುವಾಗಲೂ ಮೊಬೈಲ್ ಪರದೆಯ (Mobile Screen) ಮೇಲೆ ಕಣ್ಣಿಡುವವರಿಗೆ ತುಂಬಾ ಕೆಲಸಕ್ಕೆ ಬರಲಿದೆ.

ಮನುಷ್ಯನ ಮೂರನೇ ಕಣ್ಣು!

ಈ ವಿಶೇಷ ಸಾಧನವನ್ನು ತಯಾರಿಸಿದ ವಿಜ್ಞಾನಿಯ ಹೆಸರು Paeng Min Wook. ಅವರು ಈ ಸಾಧನಕ್ಕೆ ಮೂರನೇ ಕಣ್ಣು (The Third Eye) ಎಂದು ಹೆಸರಿಸಿದ್ದಾರೆ. ವಾಸ್ತವದಲ್ಲಿ ಇದೊಂದು  ರೀತಿಯ ರೋಬೋಟಿಕ್ ಕಣ್ಣುಗುಡ್ಡೆಯಾಗಿದೆ (Robotic Eyeball). ಈ ರೋಬೋಟಿಕ್ ಐಬಾಲ್ ಕಣ್ಣಿನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಮೊಬೈಲ್ ಬಳಕೆದಾರರನ್ನು ದಾರಿಯಲ್ಲಿ ನಡೆಯುವಾಗ ಎದುರಿಗೆ ಬರುವ ವಸ್ತುಗಳಿಗೆ ಡಿಕ್ಕಿ ಹೊಡೆಯದಂತೆ ರಕ್ಷಿಸುತ್ತದೆ.

ಇದನ್ನೂ ಓದಿ-ಸೈಪ್ರಸ್‌ನಲ್ಲಿ ಹೊಸ ಕರೋನವೈರಸ್ ರೂಪಾಂತರ ಡೆಲ್ಟಾಕ್ರಾನ್ ಪತ್ತೆ..!

ರೊಬೊಟಿಕ್ ಐಬಾಲ್ ಹೇಗೆ ಕೆಲಸ ಮಾಡುತ್ತದೆ?
ರೋಬೋಟಿಕ್ ಕಣ್ಣುಗುಡ್ಡೆಯಲ್ಲಿ ಸೆನ್ಸರ್ ಅಳವಡಿಸಲಾಗಿದೆ. ಈ ಸಾಧನವನ್ನು ಹಣೆಯ ಮೇಲೆ ಧರಿಸಬಹುದು. ದಾರಿಯಲ್ಲಿ ನಮ್ಮ ಮುಂದೆ ಏನಾದರೂ ಅಡ್ಡ ಬಂದ ತಕ್ಷಣ, ಕಣ್ಣುಗುಡ್ಡೆ ಕಂಪಿಸುತ್ತದೆ ಮತ್ತು ಮುಂದೆ ಏನಾದರೂ ಇದೆ ಎಂದು ನಮಗೆ ಸಂಕೇತಿಸುವ ಕಾರಣ ನಾವು ನಿಲ್ಲುತ್ತೇವೆ. ಹಣೆಯ ಮೇಲೆ ಮೂರನೇ ಕಣ್ಣಿನಂತೆ ರೋಬೋಟಿಕ್ ಐಬಾಲ್ ಅನ್ನು ಅನ್ವಯಿಸುವುದರಿಂದ, ಎರಡೂ ಕಣ್ಣುಗಳಿಂದ ಮೊಬೈಲ್ ಪರದೆಯನ್ನು ನೋಡುವಾಗಲೂ ಯಾವುದೇ ಆತಂಕವಿಲ್ಲದೆ ನಾವು ರಸ್ತೆಯಲ್ಲಿ ನಡೆಯಬಹುದು ಎಂದು ವಿಜ್ಞಾನಿ ಹೇಳುತ್ತಾರೆ.

ಇದನ್ನೂ ಓದಿ-Story Of Champagne: ಸಂಭ್ರಮಾಚರಣೆ ವೇಳೆ ಸಿಂಪಡಿಸಲಾಗುವ ಶಾಂಪೇನ್ ಬಾಟಲಿಯಲ್ಲೆನಿರುತ್ತದೆ? ತಿಳಿಯಲು ವರದಿ ಓದಿ

ರೋಬೋಟಿಕ್ ಕಣ್ಣುಗುಡ್ಡೆಗಳು ಯಾರಿಗೆ ಉಪಯುಕ್ತವಾಗಬಹುದು?
ಇತ್ತೀಚಿನ ದಿನಗಳಲ್ಲಿ ನಾವು ಮೊಬೈಲ್‌ನಲ್ಲಿ ತುಂಬಾ ಬ್ಯುಸಿಯಾಗಿದ್ದೇವೆ ಎಂದು ವಿಜ್ಞಾನಿ ಪಾಂಗ್ ಮಿನ್ ವೂಕ್ ಹೇಳುತ್ತಾರೆ. ಮೊಬೈಲ್ ಪರದೆಯಿಂದ ಕಣ್ಣು ತೆಗೆಯಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ರೋಬೋಟಿಕ್ ಕಣ್ಣುಗುಡ್ಡೆ ನಮಗೆ ಹೆಚ್ಚು ಉಪಯುಕ್ತವಾಗಿದೆ. ಮುಂಬರುವ ಸಮಯದಲ್ಲಿ ಈ ಸಾಧನಕ್ಕೆ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-200 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತು ಪತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More