Home> Technology
Advertisement

ಬಿಎಸ್‌ಎನ್‌ಎಲ್‌ಗೆ ಸಾಥ್ ನೀಡಿದ ಟಾಟಾ ಕಂಪನಿ: ಗ್ರಾಹಕರಿಗೆ ಸಿಗಲಿದೆ ಈ ಪ್ರಯೋಜನ

Tata With BSNL: ಸರ್ಕಾರಿ ಸ್ವಾಮ್ಯದ ಕಂಪನಿ ಬಿ‌ಎಸ್‌ಎನ್‌ಎಲ್ ಗ್ರಾಹಕರಿಗೆ ಶುಭ ಸುದ್ದಿಯೊಂದಿದೆ. ಬಿ‌ಎಸ್‌ಎನ್‌ಎಲ್ ಜೊತೆಗೆ ದೇಶದ ಪ್ರಸಿದ್ಧ ಕಂಪನಿ ಟಾಟಾ ಕೈಜೋಡಿಸಿದ್ದು ದೇಶಾದ್ಯಂತ ಬಿ‌ಎಸ್‌ಎನ್‌ಎಲ್ ಗ್ರಾಹಕರಿಗೆ ಇದರ ಪ್ರಯೋಜನ ಲಭ್ಯವಾಗಲಿದೆ. 

ಬಿಎಸ್‌ಎನ್‌ಎಲ್‌ಗೆ ಸಾಥ್ ನೀಡಿದ ಟಾಟಾ ಕಂಪನಿ:  ಗ್ರಾಹಕರಿಗೆ ಸಿಗಲಿದೆ ಈ ಪ್ರಯೋಜನ

TATA with BSNL Benefits: 2024ರ ಜುಲೈ ತಿಂಗಳಿನಿಂದ ಟೆಲಿಕಾಂ ಜಗತ್ತಿನಲ್ಲಿ ಭಾರೀ ಹವಾ ಸೃಷ್ಟಿಸುತ್ತಿರುವ ಸರ್ಕಾರಿ ಸ್ವಾಮ್ಯದ ಬಿ‌ಎಸ್‌ಎನ್‌ಎಲ್ ಕಂಪನಿ ಖಾಸಗಿ ಕಂಪನಿಗಳಾದ ಏರ್‌ಟೆಲ್, ಜಿಯೋ, ವಿಐ ಕಂಪನಿಗಳಿಗೆ ಟಕ್ಕರ್ ನೀಡುತ್ತಿದೆ. ಇದೀಗ ಬಿ‌ಎಸ್‌ಎನ್‌ಎಲ್ ಜೊತೆಗೆ ದೇಶದ ಪ್ರಸಿದ್ಧ ಕಂಪನಿಗಳಲ್ಲಿ ಒಂದಾದ ಟಾಟಾ ಕೈ ಜೋಡಿಸಿದ್ದು, ಇದರಿಂದ ಗ್ರಾಹಕರು ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ. 

ಹೌದು, ಜಿಯೋ, ಏರ್‌ಟೆಲ್, ವೋಡಾಫೋನ್ ಐಡಿಯಾ ಕಂಪನಿಗಳು ರಿಚಾರ್ಜ್ ದರಗಳಲ್ಲಿ ಏರಿಕೆ ಘೋಷಿಸಿದ ಬಳಿಕ ಬಿ‌ಎಸ್‌ಎನ್‌ಎಲ್ ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಗ್ರಾಹಕರು ಬಿ‌ಎಸ್‌ಎನ್‌ಎಲ್ ನತ್ತ ಮುಖ ಮಾಡುತ್ತಿದ್ದಾರೆ. ಇದೀಗ ಬಿಎಸ್‌ಎನ್‌ಎಲ್‌ಗೆ ಟಾಟಾ ಸಾಥ್ ನೀಡಿರುವುದರಿಂದ ಕಂಪನಿಯ ಬಹುದೊಡ್ಡ ತಲೆಬಿಸಿಯೊಂದು ಕಡಿಮೆ ಆಗಿದೆ. 

ಇದನ್ನೂ ಓದಿ- ಗೂಗಲ್‌ನಲ್ಲಿ ಅಪ್ಪಿತಪ್ಪಿಯೂ ಈ 'ಐದು' ವಿಷಯಗಳನ್ನು ಸರ್ಚ್ ಮಾಡಲೇಬೇಡಿ! ಇಲ್ಲವೇ ಜೈಲೂಟ ಫಿಕ್ಸ್!

ವಾಸ್ತವವಾಗಿ,  5ಜಿ ಯುಗದಲ್ಲಿ ಇನ್ನೂ ಭಾರತದಾದ್ಯಂತ 4ಜಿ ನೆಟ್‌ವರ್ಕ್ ಅನ್ನೂ ಸಂಪೂರ್ಣವಾಗಿ ಆರಂಭಿಸದ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗಲು ಕೆಲವು ಗ್ರಾಹಕರು ಹಿಂದೆ ಮುಂದೆ ನೋಡುತ್ತಿದ್ದರು. ಆದರೀಗ  ಟಿಸಿಎಸ್ (Tata Consultancy Services-TCS) ಬಿಎಸ್‌ಎನ್‌ಎಲ್‌ಗೆ ಸಾಥ್  ನೀಡಿರುವುದರಿಂದ ದೇಶಾದ್ಯಂತ ವೇಗವಾಗಿ 4G ಮತ್ತು 5G ನೆಟ್‌ವರ್ಕ್ ಅಳವಡಿಕೆಗೆ ಸಹಾಯಕವಾಗಲಿದೆ. 

ಇದನ್ನೂ ಓದಿ- Jio Recharge Plan: ಜಿಯೋದ ಈ ಯೋಜನೆಯಲ್ಲಿ ಕೇವಲ 75ರೂ.ಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ 

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ಬಿ‌ಎಸ್‌ಎನ್‌ಎಲ್ ಜೊತೆಗೆ ಟಾಟಾ ಸಂಸ್ಥೆ ಕೈ ಜೋಡಿಸಿದ್ದು ದೇಶದಲ್ಲಿ ಹೈಸ್ಪೀಡ್ ಮತ್ತು 5G ನೆಟ್‌ವರ್ಕ್ ಅಳವಡಿಕೆ ವೇಗಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಗಮನಾರ್ಹವಾಗಿ, ಇತ್ತೀಚಿನ ದಿನಗಳಲ್ಲಿ ಕೈಗೆಟುಕುವ ಬೆಲೆಯ ಹಲವು ಅಗ್ಗದ ರಿಚಾರ್ಜ್ ಯೋಜನೆಗಳನ್ನು ಆರಂಭಿಸಿರುವ ಬಿಎಸ್‌ಎನ್‌ಎಲ್, ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಿಗೆ ಭಾರೀ ಟಕ್ಕರ್ ನೀಡುತ್ತಿದೆ. ಇದೀಗ ದೇಶಾದ್ಯಂತ 4ಜಿ, 5ಜಿ ನೆಟ್‌ವರ್ಕ್ ಅಳವಡಿಸುವುದರಿಂದ ಬಿ‌ಎಸ್‌ಎನ್‌ಎಲ್ ಗ್ರಾಹಕರಿಗೂ ವೇಗದ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ಇದರಿಂದಾಗಿ, ದೇಶದಲ್ಲಿ ಬಿ‌ಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More