Home> Technology
Advertisement

Royal Enfield 350 ಗೆ ಪೈಪೋಟಿ ನೀಡಲು ಶೀಘ್ರದಲ್ಲೇ ಮತ್ತೆ ರೋಡಿಗಿಳಿಯುತ್ತಿದೆ ಯಮಾಹಾ ಕಂಪನಿಯ ಈ ಬೈಕ್!

Yamaha RD 350 Relaunch: ಪ್ರಸ್ತುತ, ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ 350 ಸಿಸಿ ತನ್ನ ಪಾರುಪತ್ಯ ಮೆರೆಯುತ್ತಿದೆ. ಜಪಾನಿನ ವಾಹನ ತಯಾರಕ ಸಂಸ್ಥೆಯಾದ ಯಮಹಾ ಕೂಡ ಇಂತಹ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಈ ಬೈಕ್ ವರ್ಷಗಳ ಹಿಂದೆ ಭಾರತದಲ್ಲಿ ಸಾಕಷ್ಟು ಹೆಸರು ಗಳಿಸಿದೆ.
 

Royal Enfield 350 ಗೆ ಪೈಪೋಟಿ ನೀಡಲು ಶೀಘ್ರದಲ್ಲೇ ಮತ್ತೆ ರೋಡಿಗಿಳಿಯುತ್ತಿದೆ ಯಮಾಹಾ ಕಂಪನಿಯ ಈ ಬೈಕ್!

Yamaha RD 350 Latest Update: ಭಾರತೀಯ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಮಧ್ಯಮ ತೂಕದ ಬೈಕ್ ವಿಭಾಗವು ವೇಗವಾಗಿ ಬೆಳೆಯುತ್ತಿದೆ. ಇದೇ ಕಾರಣದಿಂದಾಗಿ ಅನೇಕ ಕಂಪನಿಗಳು ತಮ್ಮ ಲಕ್ ಅನ್ನು ಟ್ರೈ ಮಾಡುತ್ತಿವೆ. ಪ್ರಸ್ತುತ, ರಾಯಲ್ ಎನ್‌ಫೀಲ್ಡ್ ಈ ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮೆರೆಯುತ್ತಿದೆ. ಜಪಾನಿನ ವಾಹನ ತಯಾರಕ ಯಮಹಾ ಕೂಡ ಮಧ್ಯಮ ತೂಕದ ವಿಭಾಗಕ್ಕೆ ಪ್ರವೇಶಿಸಲು ಇದೀಗ ತನ್ನ ಸಿದ್ಧತೆಯನ್ನು ನಡೆಸುತ್ತಿದೆ. ಕಂಪನಿಯು ಪ್ರಸ್ತುತ ಭಾರತದಲ್ಲಿ 250cc FZ 25 ಮತ್ತು FZS 25 ಅತಿ ಹೆಚ್ಚು ಚಾಲಿತ ಯಮಹಾ ಬೈಕ್‌ಗಳನ್ನು ಹೊಂದಿದೆ. ಆದರೆ ಕಂಪನಿಯು ಶೀಘ್ರದಲ್ಲೇ 350 ಸಿಸಿ ಬೈಕ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೇ, ಕಂಪನಿಯ ಈ ಬ್ಯಾಡ್ಜ್ ವರ್ಷಗಳ ಹಿಂದೆ ಭಾರತದಲ್ಲಿ ಸಾಕಷ್ಟು ಹೆಸರು ಗಳಿಸಿದೆ.

ಭಾರತ ಸೇರಿದಂತೆ ಹಲವು ಜಾಗತಿಕ ಮಾರುಕಟ್ಟೆಗಳಲ್ಲಿ ರೆಟ್ರೊ ಶೈಲಿಯ ಬೈಕ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಭಾರತದಲ್ಲಿ ಹಳೆಯ ಜನಪ್ರಿಯ ಬೈಕ್‌ಗಳನ್ನು ಹೊಸ ಅವತಾರದಲ್ಲಿ ಹಲವು ಕಂಪನಿಗಳು ಬಿಡುಗಡೆ ಅಮಾಡುತ್ತಿವೆ. ಯಮಹಾ ಕೂಡ ಶೀಘ್ರದಲ್ಲಿಯೇ ಈ ರೇಸ್ ಗೆ ಇಳಿಯಲಿದೆ.  ಕಂಪನಿಯು ಇತ್ತೀಚೆಗೆ ಜಪಾನ್‌ನಲ್ಲಿ RZ350 ಮತ್ತು RZ250 ಗಾಗಿ ಟ್ರೇಡ್‌ಮಾರ್ಕ್ ಸಲ್ಲಿಸಿದೆ. ಭಾರತದಲ್ಲಿ ರೆಟ್ರೊ ಬೈಕ್‌ಗಳ ಕ್ರೇಜ್ ಅನ್ನು ಪರಿಗಣಿಸಿ, ಯಮಹಾ ಭಾರತದಲ್ಲಿ RZ350 ಮತ್ತು RZ250 ಅನ್ನು ಪರಿಚಯಿಸುವ ಸಾಧ್ಯತೆಯಿದೆ. 80 ಮತ್ತು 90 ರ ದಶಕದಲ್ಲಿ RD350 ಭಾರತದಲ್ಲಿ ಹೆಚ್ಚು ಮಾರಾಟಗೊಳ್ಳುತ್ತಿತ್ತು. ಬೈಕು ಅದರ ಶ್ರೇಷ್ಠ ವಿನ್ಯಾಸ ಮತ್ತು ಶಕ್ತಿಯುತ ಕಾರ್ಯಕ್ಷಮತೆಗಾಗಿ ಸಾಕಷ್ಟು ಜನಪ್ರಿಯವಾಗಿತ್ತು. ಇನ್ನೂ ಅನೇಕ ಗ್ರಾಹಕರು RD350 ರನ್ನಿಂಗ್ ಸ್ಥಿತಿಯಲ್ಲಿ ಹೊಂದಿದ್ದಾರೆ.

ಇದನ್ನೂ ಓದಿ-WhatsApp ಬಳಕೆದಾರರಿಗೊಂದು ಬಂಬಾಟ್ ಸುದ್ದಿ, ಎರಡು ಹೊಸ ವೈಶಿಷ್ಟ್ಯಗಳನ್ನು ಹಂಚಿಕೊಂಡ ಮೇಟಾ!

ಹೊಸ ಬೈಕ್‌ನಲ್ಲಿ ವಿಶೇಷತೆ ಏನು?
ಆಧುನಿಕ ಕ್ಲಾಸಿಕ್ ಆಗಿ ಬೈಕ್ ಅನ್ನು ಮರುಪ್ರಾರಂಭಿಸುವ ಸಾಧ್ಯತೆಯಿದೆ. ಇದು ರಾಯಲ್ ಎನ್‌ಫೀಲ್ಡ್ 350cc, ಹೋಂಡಾ ಹೈ ನೆಸ್ CB350, ಜಾವಾ/ಯೆಜ್ಡಿ ಮತ್ತು ಮುಂಬರುವ ಬಜಾಜ್-ಟ್ರಯಂಫ್ ಮತ್ತು ಹೀರೋ-ಹಾರ್ಲಿ ಬೈಕ್‌ಗಳೊಂದಿಗೆ ಸ್ಪರ್ಧಿಸಲಿದೆ.

ಇದನ್ನೂ ಓದಿ-Star Engulfs Planet: ಗುರು ಗ್ರಹದಂತಹ ದೊಡ್ಡ ಗ್ರಹವನ್ನೇ ನುಂಗಿ ಹಾಕಿದ ನಕ್ಷತ್ರ, ಭೂಮಿಯ ಗತಿ ಏನು? ವಿಡಿಯೋ ನೋಡಿ..!

ಹಳೆಯ ಯಮಹಾ RD350 347cc ಏರ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿತ್ತು. ಈ ಎಂಜಿನ್ 39 bhp ಯ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿತ್ತು. ಹೊಸ ಅವತಾರದಲ್ಲಿ, ಇದು ನಾಲ್ಕು-ಸ್ಟ್ರೋಕ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಬೈಕ್ ಡಿಆರ್‌ಎಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡ್ಯುಯಲ್-ಚಾನೆಲ್ ಎಬಿಎಸ್, ಬ್ಲೂಟೂತ್ ಕನೆಕ್ಟಿವಿಟಿ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್ ಇದರಲ್ಲಿರುವ ಸಾಧ್ಯತೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More