Home> Technology
Advertisement

ಶೀಘ್ರವೇ ಭಾರತೀಯ ಮಾರುಕಟ್ಟೆಗೆ Sharp AQUOS R7 ಸ್ಮಾರ್ಟ್‌ಫೋನ್‌?

ಜಪಾನಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಾರ್ಪ್ ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್ Sharp AQUOS R7 ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೀವು ಅದ್ಭುತ ಕ್ಯಾಮೆರಾದೊಂದಿಗೆ ಇನ್ನೂ ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಈ ಫೋನ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಶೀಘ್ರವೇ ಭಾರತೀಯ ಮಾರುಕಟ್ಟೆಗೆ Sharp AQUOS R7 ಸ್ಮಾರ್ಟ್‌ಫೋನ್‌?

ನವದೆಹಲಿ: ಜಪಾನಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಾರ್ಪ್(Sharp) ತನ್ನ ಮೊದಲ ಪ್ರಮುಖ ಸ್ಮಾರ್ಟ್‌ಫೋನ್ ಶಾರ್ಪ್ AQUOS R7 ಅನ್ನು ಘೋಷಿಸಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಅದ್ಭುತ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ. ಆದರೆ, ಜನರ ಗಮನ ಸೆಳೆದಿರುವ ಒಂದು ವೈಶಿಷ್ಟ್ಯವೆಂದರೆ ಇದರ ಆಂತರಿಕ ಕ್ಯಾಮೆರಾ. ಈ ಫೋನ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ  

AQUOS R7ನ ಅದ್ಭುತ ವೈಶಿಷ್ಟ್ಯಗಳು

6.6 ಇಂಚಿನ Pro IGZO OLED ಸ್ಕ್ರೀನ್, 1260 x 2730 ಪಿಕ್ಸೆಲ್‌ಗಳ ರೆಸಲ್ಯೂಶನ್, Brightness of 200nits, 240Hz ವರೆಗೆ ವೇರಿಯಬಲ್ ರಿಫ್ರೆಶ್ ರೇಟ್, 10-ಬಿಟ್ ಬಣ್ಣಗಳು ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ ಶಾರ್ಪ್ AQUOS R7 ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಾಧನವು Android 12 OSನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರೊಸೆಸರ್ ಕುರಿತು ಹೇಳುವುದಾದರೆ ಇದು Snapdragon 8 Gen 1 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ವಿವೋದ ಗದರ್ ಫೋನ್ ಬಿಡುಗಡೆ: ಇದರ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್

ಗಮನ ಸೆಳೆಯುತ್ತಿದೆ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ

ಎಲ್ಲಾ ವೈಶಿಷ್ಟ್ಯಗಳ ನಡುವೆ ಶಾರ್ಪ್ AQUOS R7ನ ಕ್ಯಾಮೆರಾದ ವೈಶಿಷ್ಟ್ಯಗಳು ಜನರನ್ನು ಆಕರ್ಷಿಸಿವೆ. ಶಾರ್ಪ್‌ನ ಮೊದಲ ಪ್ರಮುಖ ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಷ್ ಮತ್ತು ಎಫ್/1.9 ಅಪರ್ಚರ್‌ನೊಂದಿಗೆ 47.2 ಎಂಪಿ ಒಂದು ಇಂಚಿನ ಹಿಂಭಾಗದ ಕ್ಯಾಮೆರಾ(one-inch rear camera)ವನ್ನು ಒಳಗೊಂಡಿದೆ. ಇದರಲ್ಲಿ ನಿಮಗೆ 12.6MP ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಆಕ್ಟಾ ಪಿಡಿ ಆಟೋಫೋಕಸ್ ಅನ್ನು ಬೆಂಬಲಿಸುತ್ತದೆ ಮತ್ತು ಅದರ ಹಿಂದಿನ ಕ್ಯಾಮೆರಾ ಸೆಟಪ್ ಮತ್ತೊಂದು ಲೆನ್ಸ್ ಅನ್ನು ಒಳಗೊಂಡಿದೆ. ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. 

ಶಾರ್ಪ್ AQUOS R7ನ ಇತರ ವೈಶಿಷ್ಟ್ಯಗಳು

ಶಾರ್ಪ್‌ನ ಈ ಮೊದಲ ಪ್ರಮುಖ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ 12GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನದ ಬಗ್ಗೆ ಏನನ್ನೂ ಹೇಳಲಾಗಿಲ್ಲ. 5G ಸೇವೆಗಳೊಂದಿಗೆ ಈ ಶಾರ್ಪ್ ಸ್ಮಾರ್ಟ್‌ಫೋನ್ ವೈಫೈ, ಬ್ಲೂಟೂತ್ 5.2, NFC ಮತ್ತು USB ಟೈಪ್-ಸಿ ಪೋರ್ಟ್‌ನೊಂದಿಗೆ ಬರುತ್ತದೆ. ಈ ಸಾಧನವು ನೀರು ಮತ್ತು ಧೂಳಿನಲ್ಲಿ ಹಾಳಾಗುವುದಿಲ್ಲವಂತೆ.

ಇದನ್ನೂ ಓದಿ: ಬೇರೆ ಬೇರೆ ಚಾರ್ಜರ್‌ನಿಂದ ಫೋನ್‌ ಚಾರ್ಜ್‌ ಮಾಡುತ್ತೀರಾ! ಹಾಗಾದರೆ ಈ ಅಪಾಯ ಗ್ಯಾರಂಟಿ

ಸದ್ಯ ಈ ಸ್ಮಾರ್ಟ್‌ಫೋನ್ ಅನ್ನು ಜಪಾನ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಜುಲೈನಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆಯಂತೆ. ಸದ್ಯ ಶಾರ್ಪ್ AQUOS R7 ಬಹುಶಃ ಜಪಾನ್ ಹೊರತುಪಡಿಸಿ ಬೇರೆ ದೇಶಗಳಲ್ಲಿ ಬಿಡುಗಡೆಯಾಗಿಲ್ಲ. ಅಲ್ಲದೆ ಈ ಫೋನ್‌ನ ಬೆಲೆಯ ಬಗೆಗಿನ ಮಾಹಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಈ ಫೋನ್ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More