Home> Technology
Advertisement

3 ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಹಠಾತ್ತನೆ ಕಡಿತಗೊಳಿಸಿದ Samsung!7 ಸಾವಿರಕ್ಕಿಂತ ಕಡಿಮೆ ಬೆಲೆ ನಿಗದಿ

Galaxy M ಮತ್ತು Galaxy F ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಹಠಾತ್ತನೆ ಕಡಿತಗೊಳಿಸುವ ನಿರ್ಧಾರ ಮಾಡಿದೆ.

3 ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಹಠಾತ್ತನೆ  ಕಡಿತಗೊಳಿಸಿದ Samsung!7 ಸಾವಿರಕ್ಕಿಂತ ಕಡಿಮೆ ಬೆಲೆ ನಿಗದಿ

ಬೆಂಗಳೂರು : ಹಬ್ಬದ ಸೀಸನ್‌ಗೂ ಮುನ್ನ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. Galaxy M ಮತ್ತು Galaxy F ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಹಠಾತ್ತನೆ ಕಡಿತಗೊಳಿಸುವ ನಿರ್ಧಾರ ಮಾಡಿದೆ. Galaxy F13, Galaxy F04, Galaxy M13, Galaxy M04 ಸೇರಿದಂತೆ ಹಲವು ಫೋನ್ ಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. 

Samsung Galaxy F13, Galaxy M13, & Galaxy M04 ಬೆಲೆ ಕುಸಿತ : 
Galaxy M04 ಮತ್ತು Galaxy F04 ಅನ್ನು ಮೂಲತಃ 8,499 ಮತ್ತು  7,499 ರೂಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ, ದಕ್ಷಿಣ ಕೊರಿಯಾದ ಟೆಕ್ ದೈತ್ಯ ಎರಡೂ  ಫೋನ್ ಗಳ ಬೆಲೆಯನ್ನು 6,499 ರೂ. ಇಳಿಸಿದೆ. ಈ ವಿಶೇಷ ಬೆಲೆ ಕುಸಿತವು Samsungನ ಅಧಿಕೃತ ವೆಬ್‌ಸೈಟ್, Amazon (Galaxy M04), Flipkart (Galaxy F04) ಮತ್ತು ಅಧಿಕೃತ ಚಿಲ್ಲರೆ ಅಂಗಡಿಗಳಲ್ಲಿ  ಲಭ್ಯವಿದೆ. 

ಇದನ್ನೂ ಓದಿ : ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ 55 ಇಂಚಿನ ಸ್ಮಾರ್ಟ್ ಟಿವಿ ! ಇಂದೇ ಖರೀದಿಸಿ ತನ್ನಿ !

ಮತ್ತೊಂದೆಡೆ, Galaxy M13 ಮತ್ತು Galaxy F13 ಬಿಡುಗಡೆಯ ಸಮಯದಲ್ಲಿ ದುಬಾರಿ ಫೋನ್ ಗಳಾಗಿತ್ತು. ಆದರೆ,  ಈಗ ಈ ಫೋನ್ ನ ಬೆಲೆಯನ್ನು ಕೂಡಾ 9,199 ರೂ.ಗೆ ಇಳಿಸಲಾಗಿದೆ. ಈ ಡೀಲ್ ಹಬ್ಬದ ಸೀಸನ್‌ಗೂ ಮುನ್ನವೇ ಗ್ರಾಹಕರಿಗೆ ಲಭ್ಯವಿದೆ. ಇತರ ಎರಡು  ಫೋನ್ ಗಳಂತೆ Galaxy M13 ನ ಹೊಸ ಬೆಲೆಯನ್ನು Amazon ನಲ್ಲಿ ಕಾಣಬಹುದು. Galaxy F13 ನ ಹೊಸ ಬೆಲೆಯನ್ನು Flipkart ನಲ್ಲಿ  ಲಿಸ್ಟ್ ಮಾಡಲಾಗುವುದು. 

Galaxy M13 ಮತ್ತು Galaxy F13 ಬೃಹತ್ 6,000mAh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಅದು ದೀರ್ಘಾವಧಿಯ ಬ್ಯಾಟರಿ ಅವಧಿಯನ್ನು ನೀಡುತ್ತದೆ. Galaxy F13 ಪೂರ್ಣ HD ಡಿಸ್ಪ್ಲೇಯನ್ನು ಹೊಂದಿದೆ. ಉತ್ತಮ ವೀಡಿಯೊ ಮತ್ತು ಗೇಮಿಂಗ್ ಅನುಭವಗಳನ್ನು ನೀಡುತ್ತದೆ. ಮತ್ತೊಂದೆಡೆ, Galaxy M04 ಮತ್ತು Galaxy F04 ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುವ 4GB RAM ನೊಂದಿಗೆ ಬರುತ್ತದೆ.

ಇದನ್ನೂ ಓದಿ : Flipkart Sale: ಹೊಸ ಸ್ಮಾರ್ಟ್‌ಫೋನ್ ಖರೀದಿಸುತ್ತೀರಾ? ಈ 5 ವಿಷಯ ನೆನಪಿಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More