Home> Technology
Advertisement

Reliance Jio Bumper Offer: ಗಣರಾಜ್ಯೋತ್ಸವದಂದು ಉಚಿತವಾಗಿ ಸಿಗುತ್ತಿದೆ 4G ಫೋನ್

Reliance Jio Bumper Offer: ಟೆಲಿಕಾಂ ಇತಿಹಾಸದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ಗಣರಾಜ್ಯೋತ್ಸವ ದಿನದಂದು ತನ್ನ ಬಳಕೆದಾರರಿಗೆ ಬಂಪರ್ ಉಡುಗೊರೆಯನ್ನು ನೀಡುತ್ತಿದೆ. 

Reliance Jio Bumper Offer: ಗಣರಾಜ್ಯೋತ್ಸವದಂದು ಉಚಿತವಾಗಿ ಸಿಗುತ್ತಿದೆ 4G ಫೋನ್

Reliance Jio Bumper Offer: ರಿಪಬ್ಲಿಕ್ ಡೇ ಪ್ರಯುಕ್ತ ಹಲವು ಕಂಪನಿಗಳು ಹೊಸ ಹೊಸ ಭರ್ಜರಿ ಆಫರ್‌ಗಳನ್ನು ಪರಿಚಯಿಸಿವೆ. ಹಲವು ಫೋನ್ ತಯಾರಕ ಕಂಪನಿಗಳು ದುಬಾರಿ ಫೋನ್‌ಗಳಲ್ಲಿ ಭಾರೀ ಡಿಸ್ಕೌಂಟ್ ಅನ್ನು ಕೂಡ ನೀಡುತ್ತಿವೆ. ಟೆಲಿಕಾಂ ಇತಿಹಾಸದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಕೂಡ ತನ್ನ ಬಳಕೆದಾರರಿಗಾಗಿ ಭರ್ಜರಿ ಕೊಡುಗೆಯನ್ನು ನೀಡುತ್ತಿದ್ದು ಗಣರಾಜ್ಯೋತ್ಸವದಂದು ಜಿಯೋ ಗ್ರಾಹಕರು 4ಜಿ ಫೋನ್ ಅನ್ನು ಉಚಿತವಾಗಿ ಮನೆಗೆ ಕೊಂಡೊಯ್ಯುವ ಅವಕಾಶವನ್ನು ನೀಡಿದೆ.

ತನ್ನ ಬಳಕೆದಾರರಿಗಾಗಿ ಗಣರಾಜ್ಯೋತ್ಸವದ ವಿಶೇಷ ಕೊಡುಗೆ ಪರಿಚಯಿಸಿರುವ ರಿಲಯನ್ಸ್ ಜಿಯೋ 4ಜಿ ಫೋನ್ ಅನ್ನು ಉಚಿತವಾಗಿ ನೀಡುವುದರ ಜೊತೆಗೆ ಅನಿಯಮಿತ ಕರೆ ಮತ್ತು ಹೆಚ್ಚಿನ ಡೇಟಾ ಸೌಲಭ್ಯವನ್ನೂ ನೀಡುತ್ತಿದೆ. ಏನಿದು ಆಫರ್, ಅದರ ಪ್ರಯೋಜನವನ್ನು ಹೇಗೆ ಪಡೆಯುವುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಇದನ್ನೂ ಓದಿ- Republic Day Wishes 2023: ಜನವರಿ 26 ರಂದು ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿವೆ ವಿಶೇಷ ಸಂದೇಶಗಳು

ಜಿಯೋ ಫೋನ್ ಅಥವಾ ಸೆಕೆಂಡರಿ ಫೋನ್ ಖರೀದಿಸಲು ಬಯಸುವ ಬಳಕೆದಾರರಿಗೆ ಜಿಯೋದ 1999 ರೂ.ಗಳ ಯೋಜನೆ ಅತ್ಯುತ್ತಮ ಎಂದು ಸಾಬೀತುಪಡಿಸಲಿದೆ. ಎರಡು ವರ್ಷಗಳ ಮಾನ್ಯತೆಯೊಂದಿಗೆ ಲಭ್ಯವಾಗುವ ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ ಸೌಲಭ್ಯದ ಜೊತೆಗೆ ಉಚಿತ ಸಂದೇಶ ಸೌಲಭ್ಯವೂ ಲಭ್ಯವಾಗಲಿದೆ. ಇದರಲ್ಲಿ ಎರಡು ವರ್ಷಗಳವರೆಗೆ 48ಜಿಬಿ ಡಾಟಾವನ್ನು ಕೂಡ ನೀಡಲಾಗುತ್ತದೆ. ಮಾತ್ರವಲ್ಲ, ಈ ಯೋಜನೆಯಲ್ಲಿ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಲಭ್ಯವಿದೆ.

ಜಿಯೋ 4ಜಿ ಫೋನ್ ಸಂಪೂರ್ಣ ಉಚಿತ:
ಇನ್ನು ಜಿಯೋದ 1999 ರೂ.ಗಳ ಯೋಜನೆಯನ್ನು ಖರೀದಿಸುವ ಗ್ರಾಹಕರಿಗೆ ಜಿಯೋ ಫೋನ್ ಉಚಿತವಾಗಿ ಲಭ್ಯವಾಗಲಿದೆ. ಇದರ ಮಾನ್ಯತೆ ಒಂದು ವರ್ಷಗಳು ಮತ್ತು ಇದರಲ್ಲಿ ಉಚಿತ ಕರೆ,  ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶದ ಜೊತೆಗೆ ವರ್ಷದವರೆಗೆ 24ಜಿಬಿ ಡೇಟಾ ಸೌಲ್ಯಭ್ಯವೂ ಸಿಗಲಿದೆ.

ಇದನ್ನೂ ಓದಿ- 74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಹೆಮ್ಮೆಯ ಭಾರತ

ಜಿಯೋಫೋನ್ ವಿಶೇಷತೆಗಳು: 
>> ಜಿಯೋಫೋನ್ 2.4 ಇಂಚಿನ ಡಿಸ್ಪ್ಲೇ ಹೊಂದಿದೆ. 
>> ಟಾರ್ಚ್ ಮತ್ತು ರೇಡಿಯೋ ಫೋನ್‌ನಲ್ಲಿ ಲಭ್ಯವಿದೆ. 
>> ಇದರಲ್ಲಿ ಕ್ಯಾಮೆರಾ, ಮೈಕ್ರೋಫೋನ್, ಸ್ಪೀಕರ್ ಇದೆ. ಫೇಸ್‌ಬುಕ್, ಯೂಟ್ಯೂಬ್ ಮತ್ತು ವಾಟ್ಸಾಪ್‌ನಂತಹ ಅಪ್ಲಿಕೇಶನ್‌ಗಳು ಕೂಡ ಲಭ್ಯವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More