Home> Technology
Advertisement

5 ಗಂಟೆಯಲ್ಲಿ 1 ಲಕ್ಷ ಮಂದಿ ಮುಗಿಬಿದ್ದು ಖರೀದಿಸಿದ ಈ ಮೊಬೈಲ್ ಬೆಲೆ ಜಸ್ಟ್ 10,999! ಐಫೋನ್ ಮಾದರಿ ಇದೆ ಇದರ ಫೀಚರ್!

Realme C55 budget friendly smartphone: ಇತ್ತೀಚೆಗಿನ ಐಫೋನ್‌ ಗಳಲ್ಲಿ ಕಂಡುಬರುವ ಡೈನಾಮಿಕ್ ಐಲ್ಯಾಂಡ್‌ ನಂತಹ ಫೀಚರ್ ಇದರಲ್ಲೂ ಸ್ವಲ್ಪಮಟ್ಟಿಗೆ ಹೋಲುತ್ತದೆ. ಕಾಸ್ಮೆಟಿಕ್ ಸ್ಪರ್ಶದ ಹೊರತಾಗಿ, ಈ ಹಿಂದೆ ಬಿಡುಗಡೆಯಾದ ರೂಪಾಂತರಗಳಂತೆಯೇ ಈ ಫೋಸ್ ಕೂಡ ಇದೆ.

5 ಗಂಟೆಯಲ್ಲಿ 1 ಲಕ್ಷ ಮಂದಿ ಮುಗಿಬಿದ್ದು ಖರೀದಿಸಿದ ಈ ಮೊಬೈಲ್ ಬೆಲೆ ಜಸ್ಟ್ 10,999! ಐಫೋನ್ ಮಾದರಿ ಇದೆ ಇದರ ಫೀಚರ್!

Realme C55 budget friendly smartphone: ಚೀನಾದ ಸ್ಮಾರ್ಟ್‌ಫೋನ್ ತಯಾರಕ Realme ಸಂಸ್ಥೆ ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು Realme C55 ಮೊಬೈಲ್‌’ಗೆ ಮತ್ತೊಂದು ಆಯಾಮವನ್ನು ನೀಡಲು ಮುಂದಾಗಿದೆ. ಈ ಸ್ಮಾರ್ಟ್ ಫೋನ್ ಮೊದಲು ಬಿಡುಗಡೆಗೊಳಿಸಿದ್ದು ಇಂಡೋನೇಷ್ಯಾದಲ್ಲಿ. ಆಗ ಇದರ ಮೂಲ ಬೆಲೆ 10,999 ರೂ. ಇತ್ತು. ಇದೀಗ ಕೊಂಚ ಬದಲಾವಣೆ ತಂದಿರುವ ಸಂಸ್ಥೆ, ಹೊಸ ಬಣ್ಣಗಳಲ್ಲಿ ಪರಿಚಯಿಸುತ್ತಿದ್ದು, ಫೋನ್ ಬೆಲೆಯನ್ನು 15 ಸಾವಿರಕ್ಕೆ ನಿಗದಿ ಪಡಿಸಿದೆ.

ಇದನ್ನೂ ಓದಿ: ಈ ರಾಶಿಯವರನ್ನು ಹಿಂಬಾಲಿಸುವುದು ಅದೃಷ್ಟ ! ಆಗುವುದು ಹಣದ ಮಳೆ

ಈ ಹೊಸ ಮಾದರಿಯ ಫೋನ್ ಸದ್ಯ ರೈನ್‌ ಫಾರೆಸ್ಟ್ ಬಣ್ಣದಲ್ಲಿ ಬಂದಿದ್ದು, ಈ ಮೂಲಕ ಜನರನ್ನು ತನ್ನತ್ತ ಆಕರ್ಷಣೆ ಮಾಡುತ್ತಿದೆ. ಇದುವರೆಗೆ ಈ ಸ್ಮಾರ್ಟ್ ಫೋನ್ ಸನ್‌ ಶವರ್ ಮತ್ತು ರೈನಿ ನೈಟ್ ಬಣ್ಣಗಳಲ್ಲಿ ಬರುತ್ತಿತ್ತು. ಇದೀಗ ಇದು ಮೂರನೇ ಬಣ್ಣವಾಗಿದೆ.

ಇನ್ನು ಕಂಪನಿಯು ಇದು ಆಂಡ್ರಾಯ್ಡ್‌ ನ ಮೊದಲ ಮಿನಿ ಕ್ಯಾಪ್ಸುಲ್ ಸ್ಮಾರ್ಟ್‌ ಫೋನ್ ಎಂದು ಹೇಳಿಕೊಂಡಿದೆ. ಇತ್ತೀಚೆಗಿನ ಐಫೋನ್‌ ಗಳಲ್ಲಿ ಕಂಡುಬರುವ ಡೈನಾಮಿಕ್ ಐಲ್ಯಾಂಡ್‌ ನಂತಹ ಫೀಚರ್ ಇದರಲ್ಲೂ ಸ್ವಲ್ಪಮಟ್ಟಿಗೆ ಹೋಲುತ್ತದೆ. ಕಾಸ್ಮೆಟಿಕ್ ಸ್ಪರ್ಶದ ಹೊರತಾಗಿ, ಈ ಹಿಂದೆ ಬಿಡುಗಡೆಯಾದ ರೂಪಾಂತರಗಳಂತೆಯೇ ಈ ಫೋಸ್ ಕೂಡ ಇದೆ.

 ಹೊಸದಾಗಿ ಬಿಡುಗಡೆಯಾದ Realme C55 ರೈನ್‌ ಫಾರೆಸ್ಟ್ ರೂಪಾಂತರದ ಬೆಲೆ ಮತ್ತು ವಿಶೇಷಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

  • Realme C55 ರೈನ್‌ ಫಾರೆಸ್ಟ್ ಬೆಲೆ ಮತ್ತು ಲಭ್ಯತೆ (ಮೂರು ರೂಪಾಂತರಗಳು) ಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ
  • Realme C55 (4GB+64GB) - ರೂ 10,999
  • Realme C55 (6GB+64GB) - ರೂ 11,999
  • Realme C55 (8GB+128GB) C55 ರ ರೈನ್‌ ಫಾರೆಸ್ಟ್ ರೂಪಾಂತರವು ಮೇ 8ರ ಮಧ್ಯರಾತ್ರಿ 12 ರಿಂದ ಅಧಿಕೃತ ವೆಬ್‌ಸೈಟ್, ಫ್ಲಿಪ್‌ ಕಾರ್ಟ್ ಮತ್ತು ಮೈನ್ ಪೇಜ್ ಗಳಲ್ಲಿ ಲಭ್ಯವಿರುತ್ತದೆ.

ಬ್ಯಾಂಕ್ ಕೊಡುಗೆಗಳ ಮೂಲಕ ಬೆಲೆ ರಿಯಾಯಿತಿ ಕೂಡ ಮಾಡಬಹುದು. ಈ ಕೆಳಗಿರುವ ಸಲಹೆಗಳನ್ನು ಗಮನಿಸಿ:

SBI Credit Card, SBI Debit Card, Axis Bank Credit and Debit Card, Flipkart Axis Credit Card ಮೂಲಕ EMI ವಹಿವಾಟುಗಳನ್ನು ಮಾಡಿ ಮೊಬೈಲ್ ಖರೀದಿಸಬಹುದು.

Realme C55 ಫೀಚರ್:

ಸ್ಮಾರ್ಟ್ಫೋನ್ ಹ್ಯಾಂಡ್‌ ಸೆಟ್ 6.72' ಇಂಚಿನ FHD+ 90Hz ಪರದೆಯನ್ನು ಹೊಂದಿದ್ದು 680 nits ವರೆಗೆ ಗರಿಷ್ಠ ಹೊಳಪನ್ನು ಹೊಂದಿರುತ್ತದೆ. ಇದು 189g ತೂಕವಿದ್ದು, 7.89mm ದಪ್ಪವಾಗಿದೆ. ಮೆಮೊರಿ ಸ್ಟೋರೇಜ್ ಬಗ್ಗೆ ಹೇಳುವುದಾದರೆ, ಇದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಇದನ್ನು MicroSD ಕಾರ್ಡ್ ಸ್ಲಾಟ್ ಮೂಲಕ 1 TB ವರೆಗೆ ವಿಸ್ತರಿಸಬಹುದಾಗಿದೆ. ಹ್ಯಾಂಡ್‌ ಸೆಟ್ Android 13 ಆಧಾರಿತ Realme UI 4.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

Realme C55 5000mAh ಬ್ಯಾಟರಿಯೊಂದಿಗೆ ಬರುತ್ತದೆ. 33W SUPERVOOC ವೇಗದ ಚಾರ್ಜಿಂಗ್ ಸಪೋರ್ಟ್ ಇದೆ. ಹಿಂಭಾಗದ ಕ್ಯಾಮಾರ 64MP ಪ್ರೈಮರಿ ಸೆನ್ಸರ್ ಹೊಂದಿದ್ದು, 1080p 60fps ವರೆಗೆ ವೀಡಿಯೊ ರೆಕಾರ್ಡಿಂಗ್ ಮಾಡಬಹುದು. ಮತ್ತೊಂದೆಡೆ ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಇದೆ.

ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಕೋಲ್ಡ್ ಡ್ರಿಂಕ್ಸ್ ಬದಲಿಗೆ ಈ ನೈಸರ್ಗಿಕ ಪಾನೀಯಗಳನ್ನು ಸೇವಿಸಿ

ಪೋರ್ಟ್ರೇಟ್ ಮೋಡ್, ನೈಟ್ ಮೋಡ್, HDR, AI ಕಲರ್ ಪೋರ್ಟ್ರೇಟ್, ಪನೋರಮಿಕ್ ವ್ಯೂ 64MP ಮೋಡ್ ಮತ್ತು ಟೈಪ್-ಸಿ ಪೋರ್ಟ್, ಹ್ಯಾಂಡ್‌ ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ವಿಶೇಷತೆಗಳು ಈ ಫೋನ್ ನಲ್ಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More