Home> Technology
Advertisement

RBI New Rule: ಇಂಟರ್ನೆಟ್ ಇಲ್ಲದಿದ್ದರೂ ನೀವು ಡಿಜಿಟಲ್ ಪಾವತಿ ಮಾಡಲು ಸಾಧ್ಯ! ಹೇಗೆಂದು ತಿಳಿಯಿರಿ

ತಂತ್ರಜ್ಞಾನದ ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಜನರು ಇಂಟರ್ನೆಟ್ ಅಥವಾ ಕಡಿಮೆ ವೇಗದ ಇಂಟರ್ನೆಟ್ ಇಲ್ಲದಿದ್ದರೂ ಡಿಜಿಟಲ್ ಪಾವತಿ ಮಾಡುವ ಸೌಲಭ್ಯವನ್ನು ಹೇಗೆ ನೀಡಬಹುದು ಎಂದು ನೋಡಲಾಗುತ್ತಿದೆ.

RBI New Rule: ಇಂಟರ್ನೆಟ್ ಇಲ್ಲದಿದ್ದರೂ ನೀವು ಡಿಜಿಟಲ್ ಪಾವತಿ ಮಾಡಲು ಸಾಧ್ಯ! ಹೇಗೆಂದು ತಿಳಿಯಿರಿ

ನವದೆಹಲಿ: ಮೊಬೈಲ್‌ನಿಂದ ಹಣ ಪಾವತಿ ಮಾಡುವಾಗ ಇಂಟರ್ನೆಟ್ ಸಮಸ್ಯೆಯಿಂದಾಗಿ ನಿಮ್ಮ ವಹಿವಾಟು ಹಲವು ಬಾರಿ ವಿಫಲಗೊಳ್ಳುತ್ತದೆ. ಆದರೆ ಇನ್ನು ಮುಂದೆ ನಿಮಗೆ ಈ ತೊಂದರೆಯಾಗುವುದಿಲ್ಲ. ವಾಸ್ತವವಾಗಿ ಸರ್ಕಾರವು ಆಫ್‌ಲೈನ್ ಪಾವತಿಯ ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಿದೆ. ಈಗ ಆನ್‌ಲೈನ್ ಪಾವತಿ ಮಾಡುತ್ತಿರುವ ರೀತಿಯಲ್ಲಿಯೇ, ನೀವು ಈಗ ಇಂಟರ್ನೆಟ್ ಇಲ್ಲದೆ ಆಫ್‌ಲೈನ್ ಪಾವತಿ( ಕೂಡ ಮಾಡಲು ಸಾಧ್ಯವಾಗುತ್ತದೆ.

ವಾಸ್ತವವಾಗಿ ಡಿಜಿಟಲ್ ಪಾವತಿ(Digital Payments)ಗಳ ವ್ಯಾಪ್ತಿಯನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಯೋಜನೆಯನ್ನು ರೂಪಿಸಿದೆ. ಇದರಡಿಯಲ್ಲಿ ಜನರು ಚಿಲ್ಲರೆ ಡಿಜಿಟಲ್ ಪಾವತಿಯ ಸೇವೆಯನ್ನು ಆಫ್‌ಲೈನ್ ಮೋಡ್‌ನಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಈ ಹೊಸ ವ್ಯವಸ್ಥೆಗಳ ಮೂಲಕ ಯಾವುದೇ ವ್ಯಕ್ತಿಯು ತನ್ನ ಮೊಬೈಲ್ ಅಥವಾ ಕಂಪ್ಯೂಟರ್‌ನಿಂದ ಇಂಟರ್ನೆಟ್ ಇಲ್ಲದಿದ್ದರೂ ಸಹ ಡಿಜಿಟಲ್ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Facebook, Instagram Apologize : ಒಂದು ವಾರದಲ್ಲಿ 2ನೇ ಬಾರಿ ಸ್ಥಗಿತಗೊಂಡ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ : ಕ್ಷಮೆ ಕೇಳಿದ ಕಂಪನಿ

ಆರ್‌ಬಿಐನಿಂದ ಭರ್ಜರಿ ತಯಾರಿ

ಇದಕ್ಕಾಗಿ 6 ​​ಆಗಸ್ಟ್ 2021ರಂದು ಒಂದು ಯೋಜನೆಯನ್ನು ಘೋಷಿಸಲಾಗಿದೆ. ಅದರಡಿಯಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ. ತಂತ್ರಜ್ಞಾನದ ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಜನರು ಇಂಟರ್ನೆಟ್ ಅಥವಾ ಕಡಿಮೆ ವೇಗದ ಇಂಟರ್ನೆಟ್ ಇಲ್ಲದಿದ್ದರೂ ಡಿಜಿಟಲ್ ಪಾವತಿ(UPI Without Internet) ಮಾಡುವ ಸೌಲಭ್ಯವನ್ನು ಹೇಗೆ ನೀಡಬಹುದು ಎಂದು ನೋಡಲಾಗುತ್ತಿದೆ. ಆದ್ದರಿಂದ ಪ್ರತಿ ಪಟ್ಟಣದ ಜನರು ಆಫ್‌ಲೈನ್ ಮೋಡ್‌ನಲ್ಲಿ ಪಾವತಿ ಮಾಡಬಹುದು. ಈ ಪಾವತಿ ಸಂಪೂರ್ಣವಾಗಿ ಆಫ್‌ಲೈನ್ ಮೋಡ್‌ನಲ್ಲಿರುತ್ತದೆ.

ಗಮನಿಸಬೇಕಾದ ಸಂಗತಿಯೆಂದರೆ ಈಗ ಯಾವುದೇ ಡಿಜಿಟಲ್ ಪಾವತಿಯನ್ನು ಮಾಡಿದರೂ ಅದರಲ್ಲಿ ಇಂಟರ್ನೆಟ್ ಅಗತ್ಯವಿದೆ ಮತ್ತು ಇಂಟರ್ನೆಟ್ ಇಲ್ಲದೆ ಪಾವತಿ ವಿಫಲಗೊಳ್ಳುತ್ತದೆ. ಕಳೆದ ಒಂದು ವರ್ಷದಿಂದ ಆಫ್‌ಲೈನ್ ಪಾವತಿಗಾಗಿ ರಿಸರ್ವ್ ಬ್ಯಾಂಕಿನ(Reserve Bank) ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ 2020ರಿಂದ ಜೂನ್ 2021ರವರೆಗೆ 3 ಪ್ರಾಯೋಗಿಕ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರಡಿ 1.16 ಕೋಟಿ ರೂ.ಗಳ ಸುಮಾರು 2.41 ಲಕ್ಷ ಸಣ್ಣ-ಪ್ರಮಾಣದ ವಹಿವಾಟುಗಳನ್ನು ಮಾಡಲಾಗಿದೆ.

ಇದನ್ನೂ ಓದಿ: Aadhaar Card:e-Aadhaarಗೆ ಮಾನ್ಯತೆ ಎಷ್ಟು? ಇದಕ್ಕಾಗಿ ಯಾವ ಸಂಗತಿಗಳು ಬೇಕು... ಇಲ್ಲಿದೆ ವಿವರ

ಪ್ರಸ್ತುತ ಯುಪಿಐಗೆ ಇಂಟರ್ನೆಟ್ ಮತ್ತು ಸ್ಮಾರ್ಟ್ಫೋನ್ ಎರಡೂ ಅಗತ್ಯವಿದೆ. UPI ಅನ್ನು ಶ್ರೇಣಿ 1, ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈಗ ಅದರ ವ್ಯಾಪ್ತಿಯನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್‌ಲೈನ್ ಪಾವತಿ ಮೋಡ್‌ನತ್ತಲೂ ಗಮನ ಹರಿಸುತ್ತಿದೆ.

ಇ-ರೂಪಿ ಮೂಲಕ ಆಫ್‌ಲೈನ್ ಪಾವತಿ

ಇ-ರೂಪಿ ಡಿಜಿಟಲ್ ಪಾವತಿಯಲ್ಲಿ ಆಫ್‌ಲೈನ್ ವಹಿವಾಟು (Payment Through UPI)ಸೌಲಭ್ಯ ಲಭ್ಯವಿದೆ. ಈ ವಹಿವಾಟನ್ನು ಇಂಟರ್ನೆಟ್ ಇಲ್ಲದೆಯೇ ಫೀಚರ್ ಫೋನಿನಲ್ಲಿ ಮಾಡಬಹುದು ಮತ್ತು ಈ ವಹಿವಾಟನ್ನು SMS ಅಥವಾ QR ಕೋಡ್ ಮೂಲಕ ಹಂಚಿಕೊಳ್ಳಬಹುದು. ಡಿಜಿಟಲ್ ಪಾವತಿಗಳ ಹೆಚ್ಚುತ್ತಿರುವುದರಿಂದ ಅನೇಕ ಕಂಪನಿಗಳು ಮತ್ತು ಬ್ಯಾಂಕುಗಳು ಫೀಚರ್ ಫೋನ್ ಬಳಸುವ ಜನರನ್ನು ತಲುಪಲು ಆಫ್‌ಲೈನ್ ಪಾವತಿಗಳ ಸಾಧ್ಯತೆಗಳ ಮೇಲೆ ಕೆಲಸ ಮಾಡುತ್ತಿವೆ.  

ವೀಸಾ ಆಫ್‌ಲೈನ್ ಕಾರ್ಡ್

ಆಗಸ್ಟ್ 2021ರಲ್ಲಿ ಕ್ರೆಡಿಟ್ ಕಾರ್ಡ್ ಕಂಪನಿ ವೀಸಾ(Visa), ಯೆಸ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕಿನೊಂದಿಗೆ ಆಫ್‌ಲೈನ್ ಡಿಜಿಟಲ್ ಪಾವತಿಗಳಲ್ಲಿ ಕೆಲಸ ಮಾಡುವುದಾಗಿ ಘೋಷಿಸಿತು. ಇದಕ್ಕಾಗಿ ವೀಸಾ ಚಿಪ್ ಆಧಾರಿತ ‘ವೀಸಾ ಡೆಬಿಟ್’, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ಅನ್ನು ರೂಪಿಸಿದೆ. ಇದು ಇಂಟರ್ನೆಟ್ ಅಥವಾ ಕಡಿಮೆ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಆಫ್‌ಲೈನ್ ಪಾವತಿಗಳನ್ನು ಮಾಡಬಹುದು. ಇದರಲ್ಲಿ ಒಂದು ವ್ಯಾಲೆಟ್ ಅನ್ನು ರಚಿಸಲಾಗುವುದು, ಇದರಲ್ಲಿ ಪ್ರತಿ ದಿನದ ಮಿತಿಯ ಪ್ರಕಾರ ಹಣವನ್ನು ಜಮಾ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More