Home> Technology
Advertisement

Diwali Offer: 200KM ಮೈಲೇಜ್ ನೀಡುವ 1.15 ಲಕ್ಷ ರೂ.ಗಳ ಎಲೆಕ್ಟ್ರಿಕ್ ಸ್ಕೂಟರ್ ₹20,000 ಕಡಿಮೆ ದರದಲ್ಲಿ ಲಭ್ಯ

Pure EV Scooter Diwali Offer: ದೀಪಾವಳಿ ಸಮಯದಲ್ಲಿ ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದರೆ 200KM ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭರ್ಜರಿ ರಿಯಾಯಿತಿಯೊಂದಿಗೆ ಖರೀದಿಸಬಹುದು. 

Diwali Offer: 200KM ಮೈಲೇಜ್ ನೀಡುವ  1.15 ಲಕ್ಷ ರೂ.ಗಳ ಎಲೆಕ್ಟ್ರಿಕ್ ಸ್ಕೂಟರ್ ₹20,000 ಕಡಿಮೆ ದರದಲ್ಲಿ ಲಭ್ಯ

Pure EV Scooter Diwali Offer: ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಹಲವು ಆಟೋ ಕಂಪನಿಗಳು ಹಲವು ರೀತಿಯ ರಿಯಾಯಿತಿಗಳನ್ನು ಘೋಷಿಸಿವೆ. ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ತಯಾರಿಸುವ ದೇಶದ ಅಗ್ರ ಕಂಪನಿಗಳಲ್ಲಿ ಒಂದಾದ ಪ್ಯೂರ್ ಇವಿ ಕೂಡ ತನ್ನ ಉತ್ಪನ್ನಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಿದೆ. 

ಪ್ಯೂರ್ ಕಂಪನಿಯು ಈ ರಿಯಾಯಿತಿ ಕೊಡುಗೆಯಲ್ಲಿ ಹಲವು ರೀತಿಯ ಕೊಡುಗೆಗಳನ್ನು ಸೇರಿಸಿದೆ. ಇದರಲ್ಲಿ ಗ್ರಾಹಕರು ಹಬ್ಬದ ಬೊನಾಂಜಾ ರಿಯಾಯಿತಿಗಳು, ರೆಫರಲ್ ಕ್ಯಾಶ್‌ಬ್ಯಾಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳನ್ನು ಸಹ ಪಡೆಯಬಹುದು.

ಇದನ್ನೂ ಓದಿ- Ather 450s Festive Offer: 1.32 ಲಕ್ಷ ರೂ.ಗಳ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೀಪಾವಳಿಯಲ್ಲಿ ₹86000ಕ್ಕೆ ಖರೀದಿಸಬಹುದು

ಪ್ಯೂರ್ ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ,  ಕಂಪನಿಯು ತನ್ನ ಉತ್ಪನ್ನಗಳ ಮೇಲೆ ಒಟ್ಟು 1 ಲಕ್ಷ ರೂ.ವರೆಗೆ ಡಿಸ್ಕೌಂಟ್  ನೀಡುತ್ತಿದೆ. ಇದು  ₹ 15,000 ದಿಂದ ₹20,000  ಫೆಸ್ಟಿವ್ ಬೊನಾಂಜಾ ರಿಯಾಯಿತಿ, ₹ 40,000 ರ ರೆಫರಲ್ ಕ್ಯಾಶ್‌ಬ್ಯಾಕ್ ರಿಯಾಯಿತಿ ಮತ್ತ₹ 40,000 ವಿನಿಮಯ ಕೊಡುಗೆಯನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ. 

ವಿನಿಮಯ ಕೊಡುಗೆ: 
ಮೊದಲೇ ತಿಳಿಸಿದಂತೆ, ಈ ಹಬ್ಬದ ಆಫರ್ ನಲ್ಲಿ ಲಭ್ಯವಿರುವ ಈ ವಿನಿಮಯ ಕೊಡುಗೆಯಲ್ಲಿ, ಗ್ರಾಹಕರು ತಮ್ಮ ಹಳೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ವಿನಿಯಮ ಮಾಡಿಕೊಳ್ಳುವ ಮೂಲಕ ಪ್ಯೂರ್ ಇವಿ ಕಂಪನಿಯ  ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದು. 

ಇದನ್ನೂ ಓದಿ- ತನ್ನ ಈ ಜನಪ್ರಿಯ ಇಲೆಕ್ಟ್ರಿಕ್ ಸ್ಕೂಟರ್ ಮೇಲೆ ಜಬರ್ದಸ್ತ್ ಕೊಡುಗೆ ಪ್ರಕಟಿಸಿದ ಟಿವಿಎಸ್!

200ಕಿ.ಮೀ. ಮೈಲೇಜ್ ನೀಡುವ ಇವಿ: 
ಪ್ಯೂರ್ ಕಂಪನಿಯು ಇತ್ತೀಚೆಗೆ EV ePluto 7G ಮ್ಯಾಕ್ಸ್ ಎಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಇದರ ಗರಿಷ್ಠ ವೇಗ 60 ಕಿಮೀ., ಈ ಎಲೆಕ್ಟ್ರಿಕ್ ಸ್ಕೂಟರ್ 200 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ ಏನೂಡ್ ಕಂಪನಿ ಹೇಳಿಕೊಂಡಿದೆ. 3.5 kwh ಲಿಥಿಯಂ ಐಯಾನ್ ಬ್ಯಾಟರಿಯನ್ನು ಒಳಗೊಂಡಿರುವ ಈ ಸ್ಕೂಟರ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಸಹ ಲಭ್ಯವಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More