Home> Technology
Advertisement

ಗ್ರಾಹಕರಿಗೆ ಬಿಗ್ ಶಾಕ್! ಅಗ್ಗದ ಎಲೆಕ್ಟ್ರಿಕ್ ಕಾರು ಬೆಲೆಯನ್ನು ಒಮ್ಮೆಲೇ ಏರಿಸಿದ ಟಾಟಾ!

Tata Tiago EV Price Hike:ಕಂಪನಿಯು ಈಗ ಈ ಕಾರಿನ ಬೆಲೆಯನ್ನು 20000 ರೂಪಾಯಿಗಳಷ್ಟು ಹೆಚ್ಚಿಸಿದೆ. ಈ ಬೆಲೆ ಏರಿಕೆ ನಂತರ ಟಾಟಾ ಟಿಯಾಗೊ EV ಯ ಹೊಸ ಆರಂಭಿಕ ಬೆಲೆ 8.69 ಲಕ್ಷ ರೂ.ಯಾಗಿದೆ. 
 

ಗ್ರಾಹಕರಿಗೆ ಬಿಗ್ ಶಾಕ್! ಅಗ್ಗದ  ಎಲೆಕ್ಟ್ರಿಕ್ ಕಾರು ಬೆಲೆಯನ್ನು ಒಮ್ಮೆಲೇ ಏರಿಸಿದ ಟಾಟಾ!

Tata Tiago EV Price Hike : ಟಾಟಾ ಮೋಟಾರ್ಸ್ ಕಳೆದ ವರ್ಷ ಟಾಟಾ ಟಿಯಾಗೊ ಇವಿಯನ್ನು ತನ್ನ ಅಗ್ಗದ ಎಲೆಕ್ಟ್ರಿಕ್ ಕಾರು ಎಂದು ಬಿಡುಗಡೆ ಮಾಡಿತ್ತು. ಬಿಡುಗಡೆಯ ಸಮಯದಲ್ಲಿ, ಅದರ ಆರಂಭಿಕ ಬೆಲೆ 8.49 ಲಕ್ಷ ರೂ. ಆಗಿತ್ತು. ಇದು ಪರಿಚಯಾತ್ಮಕ ಬೆಲೆ ಎನ್ನುವುದನ್ನು ಕೂಡಾ ಆ ಸಂದರ್ಭದಲ್ಲಿಯೇ ಕಂಪನಿ ಘೋಷಿಸಿತ್ತು.   ಮೊದಲ 20,000 ಗ್ರಾಹಕರಿಗೆ ಮಾತ್ರ ಈ ಬೆಲೆಯಲ್ಲಿ ಕಾರು ಲಭ್ಯ ಎನ್ನುವುದನ್ನು ಹೇಳಿತ್ತು. ಗ್ರಾಹಕರಿಂದ ಈ ವಾಹನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಇದಾದ ಕೆಲವೇ ಸಮಯದಲ್ಲಿ 20,000 ಕ್ಕೂ ಹೆಚ್ಚು ವಾಹನಗಳು ಬುಕ್ ಆಗಿವೆ. ಅದರಂತೆ ಇದೀಗ ಕಂಪನಿ ತನ್ನ ಕಾರಿನ ಬೆಲೆಯನ್ನು ಪರಿಷ್ಕರಿಸಿದೆ. 

Tata Tiago EV ಬೆಲೆ :

ಕಂಪನಿಯು ಈಗ ಈ ಕಾರಿನ ಬೆಲೆಯನ್ನು 20,000 ರೂಪಾಯಿಗಳಷ್ಟು ಹೆಚ್ಚಿಸಿದೆ. ಈ ಬೆಲೆ ಏರಿಕೆ ನಂತರ ಟಾಟಾ ಟಿಯಾಗೊ EV ಯ ಹೊಸ ಆರಂಭಿಕ ಬೆಲೆ 8.69 ಲಕ್ಷ ರೂ.ಯಾಗಿದೆ. ಟಾಪ್ ವೆರಿಯಂಟ್ ಬೆಲೆ 11.79 ಲಕ್ಷದಿಂದ 11.99 ಲಕ್ಷಕ್ಕೆ ಏರಿಕೆಯಾಗಿದೆ. ಟಾಟಾ ಟಿಯಾಗೊ EV ವಿವಿಧ ಬ್ಯಾಟರಿ ಪ್ಯಾಕ್‌ಗಳು ಮತ್ತು ಚಾರ್ಜಿಂಗ್ ಆಯ್ಕೆಗಳ ಪ್ರಕಾರ ಒಟ್ಟು 8 ಟ್ರಿಮ್‌ಗಳಲ್ಲಿ ಬರುತ್ತದೆ. 

ಇದನ್ನೂ  ಓದಿ : ಓಲಾ ಕಂಪನಿಯ ಒತ್ತಡ ಹೆಚ್ಚಿಸಿದೆ ಈ ಎಲೆಕ್ಟ್ರಿಕ್ ಸ್ಕೂಟರ್: ಕೇವಲ ₹999 ಬುಕ್ಕಿಂಗ್ ಮಾಡಿ

 

ಬ್ಯಾಟರಿ ಪ್ಯಾಕ್ ಮತ್ತು ರೇಂಜ್ : 
ಟಾಟಾ Tiago EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ.  19.2kWh ಮತ್ತು 24kWh. ಇದರಲ್ಲಿ 19.2 kWh ಬ್ಯಾಟರಿಯನ್ನು ಹೊಂದಿರುವ ಇವಿ ಸಿಂಗಲ್ ಚಾರ್ಜ್‌ನಲ್ಲಿ 250 ಕಿಮೀ ವ್ಯಾಪ್ತಿ ಓಡುತ್ತದೆ. 24kWh ಬ್ಯಾಟರಿ ಪ್ಯಾಕ್ ಹೊಂದಿರುವ ಇವಿ  ಸಿಂಗಲ್ ಚಾರ್ಜ್‌ನಲ್ಲಿ 315 ಕಿಮೀ ವರೆಗ ಕ್ರಮಿಸುತ್ತದೆ.

ಚಾರ್ಜಿಂಗ್ ಗೆ ತೆಗೆದುಕೊಳ್ಳುವ ಸಮಯ :
ಈ ಇವಿಯನ್ನು ಚಾರ್ಜ್ ಮಾಡಲು ಒಟ್ಟು 4 ಆಯ್ಕೆಗಳನ್ನು ನೀಡಲಾಗಿದೆ. 7.2kW ಚಾರ್ಜರ್‌ನೊಂದಿಗೆ 3.6 ಗಂಟೆಗಳಲ್ಲಿ 10-100% ಚಾರ್ಜ್ ಮಾಡಬಹುದು. 15A ಪೋರ್ಟಬಲ್ ಚಾರ್ಜರ್‌ನೊಂದಿಗೆ 8.7 ಗಂಟೆಗಳಲ್ಲಿ 10 ರಿಂದ 100% ವರೆಗೆ ಚಾರ್ಜ್ ಆಗುತ್ತದೆ. ಅದೇ ರೀತಿ DC ಫಾಸ್ಟ್ ಚಾರ್ಜರ್ ಮೂಲಕ ಕೇವಲ 58 ನಿಮಿಷಗಳಲ್ಲಿ 10 ರಿಂದ 100% ಚಾರ್ಜ್ ಮಾಡಬಹುದು. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಕ್ರೂಸ್ ಕಂಟ್ರೋಲ್, ಕೂಲ್ಡ್ ಗ್ಲೋವ್ ಬಾಕ್ಸ್, ರೈನ್-ಸೆನ್ಸಿಂಗ್ ವೈಪರ್‌ಗಳು, ಆಟೋ ಹೆಡ್‌ಲೈಟ್‌ಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು 8-ಸ್ಪೀಕರ್ ಹಾರ್ಮನ್ ಮ್ಯೂಸಿಕ್ ಸಿಸ್ಟಮ್‌ನೊಂದಿಗೆ 7-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಪಡೆಯುತ್ತದೆ. 

ಇದನ್ನೂ  ಓದಿ : ಮಾರುಕಟ್ಟೆಯಲ್ಲಿರುವ ಅಗ್ಗದ 7 ಸೀಟರ್ ಇದುವೇ! ಮಾರಾಟದಲ್ಲಿಯೂ ಭರ್ಜರಿ ಹೆಚ್ಚಳ !

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More