Home> Technology
Advertisement

ಬದಲಾಗಿರುವ ಈ WhatsApp ನಿಯಮದ ಬಗ್ಗೆ ನಿಮಗೆಷ್ಟು ಗೊತ್ತು!

ವಾಟ್ಸಾಪ್ ತನ್ನ ಸೇವಾ ನಿಯಮಗಳನ್ನು ಬದಲಾಯಿಸಲಿದೆ. ಕಂಪನಿಯ ಪ್ರಕಾರ ಯಾವುದೇ ಬಳಕೆದಾರರು ಈ ಷರತ್ತುಗಳನ್ನು ಒಪ್ಪದಿದ್ದರೆ, ಅವರು ತಮ್ಮ ಅಕೌಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ.  ಅದಕ್ಕಾಗಿ ವಾಟ್ಸಾಪ್ ಫೆಬ್ರವರಿ 8 ರವರೆಗೆ ಗಡುವು ನೀಡಿದೆ.
 

ಬದಲಾಗಿರುವ ಈ WhatsApp ನಿಯಮದ ಬಗ್ಗೆ ನಿಮಗೆಷ್ಟು ಗೊತ್ತು!

ಬೆಂಗಳೂರು : ವಾಟ್ಸಾಪ್ ತನ್ನ ಗೌಪ್ಯತೆ ನೀತಿ ಮತ್ತು ನಿಯಮಗಳನ್ನು ನವೀಕರಿಸಿದ್ದು  ಮಂಗಳವಾರ ಸಂಜೆಯಿಂದ ಬಳಕೆದಾರರಿಗೆ ನವೀಕರಣದ ಅಧಿಸೂಚನೆಯನ್ನು ನೀಡಲಾಗುತ್ತಿದೆ. ಕಂಪನಿಯ ಪ್ರಕಾರ ವಾಟ್ಸಾಪ್ ಬಳಕೆದಾದರು ಈ ಹೊಸ ನೀತಿಯನ್ನು ಒಪ್ಪದಿದ್ದರೆ, ಅವರು ತಮ್ಮ ಅಕೌಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ.  ಅದಕ್ಕಾಗಿ ವಾಟ್ಸಾಪ್ ಫೆಬ್ರವರಿ 8 ರವರೆಗೆ ಗಡುವು ನೀಡಿದೆ.

ಬಳಕೆದಾರರು ತಮ್ಮ ವಾಟ್ಸಾಪ್ (Whatsapp) ಖಾತೆಯನ್ನು ಸಕ್ರಿಯವಾಗಿ ಮತ್ತು ಮುಂದುವರೆಯಲು ಈ ನೀತಿಯನ್ನು ಒಪ್ಪಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲಿ ಗ್ರಾಹಕರಿಗೆ ಈ ನೀತಿಯನ್ನು ನಿರ್ಲಕ್ಷಿಸುವ ಅಥವಾ ನಿರಾಕರಿಸುವ ಆಯ್ಕೆಯನ್ನು ನೀಡಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಶೀಘ್ರದಲ್ಲೇ ಪಾಲಿಸಿಯನ್ನು ಸ್ವೀಕರಿಸದಿದ್ದರೆ ನಿಮ್ಮ ಅಕೌಂಟ್ ಡಿಲೀಟ್ ಆಗಬಹುದು. ಇದನ್ನು ತಪ್ಪಿಸಬೇಕಿದ್ದರೆ ನಿಗದಿತ ಸಮಯದೊಳಗೆ ನೀವು ಈ ನೀತಿಯನ್ನು ಅನುಮೋದಿಸಬೇಕಾಗುತ್ತದೆ. ಇಲ್ಲದಿದ್ದರೆ ನೀವು ವಾಟ್ಸಾಪ್ ಐಡಿಯನ್ನು ಅಳಿಸಬೇಕಾಗುತ್ತದೆ.

ಫೆಬ್ರವರಿ 8 ರಿಂದ ಹೊಸ ಷರತ್ತುಗಳು ಅನ್ವಯ: 
ವಾಟ್ಸಾಪ್ ವಕ್ತಾರರು ಸಹ ಹೊಸ ಷರತ್ತುಗಳ ಬಗ್ಗೆ ದೃಢಪಡಿಸಿದ್ದಾರೆ ಮತ್ತು ವಾಟ್ಸಾಪ್ ಅನ್ನು ಬಳಸಲು ಅದರ ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಫೆಬ್ರವರಿ 8 ರಿಂದ ಹೊಸ ಸೇವಾ ಪರಿಸ್ಥಿತಿಗಳು ಜಾರಿಗೆ ಬರುವ ನಿರೀಕ್ಷೆಯಿದೆ. ಆದರೂ ಇದರಲ್ಲಿ ಬದಲಾವಣೆಯ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇದನ್ನೂ ಓದಿ : WhatsApp Earning: ಮೂಲಕ ಹಣ ಸಂಪಾದಿಸಬಹುದೇ? ಇಲ್ಲಿದೆ ಮಾಹಿತಿ

ಫೇಸ್‌ಬುಕ್ ವ್ಯವಹಾರಕ್ಕಾಗಿ ಚಾಟ್‌ಗಳನ್ನು ಬಳಸುತ್ತದೆ:
ವಾಟ್ಸಾಪ್ನ ಹೊಸ ನಿಯಮಗಳು ಹೊಸ ವರ್ಷದಲ್ಲಿ ಫೇಸ್‌ಬುಕ್ (Facebook) ಒಡೆತನದ ಕಂಪನಿ ವಾಟ್ಸಾಪ್ ಬಳಕೆದಾರರ ಡೇಟಾವನ್ನು ಹೇಗೆ ಬಳಸುವುದು ಎಂದು ಉಲ್ಲೇಖಿಸಿದೆ ಎಂದು ವರದಿ ಹೇಳಿದೆ. ವ್ಯವಹಾರಕ್ಕಾಗಿ ನಿಮ್ಮ ಚಾಟ್ ಅನ್ನು ಫೇಸ್‌ಬುಕ್ ಹೇಗೆ ಸಂಗ್ರಹಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂಬುದನ್ನು ಇದು ವಿವರಿಸುತ್ತದೆ. 

ಇದನ್ನೂ ಓದಿ : WhatsAppನಲ್ಲಿ ಡಿಲೀಟ್ ಮಾಡಲಾದ ಸಂದೇಶಗಳನ್ನೂ ಓದಬಹುದು, ಇಲ್ಲಿದೆ ಟ್ರಿಕ್

ಫೇಸ್‌ಬುಕ್‌ನ ಹೊಸ ನಿಯಮಗಳು ಮತ್ತು ಗೌಪ್ಯತೆ ನೀತಿಯಡಿಯಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಏಕೀಕರಣವು ಹೆಚ್ಚಾಗಿದೆ ಮತ್ತು ಈಗ ಬಳಕೆದಾರರ ಡೇಟಾವು ಫೇಸ್‌ಬುಕ್‌ಗಿಂತ ಹೆಚ್ಚಾಗಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More