Home> Technology
Advertisement

ಭೂಮಿಗೆ ಅಪ್ಪಳಿಸಲಿದೆ 600 KM /ಸೆಕೆಂಡ್ ವೇಗದಲ್ಲಿ ಚಲಿಸುವ ಸೌರ ಮಾರುತ .! GPS ಮೇಲೆ ಬೀರಲಿದೆ ನೇರ ಪರಿಣಾಮ

Solar winds can hit earth: ಬ್ರಹ್ಮಾಂಡದ ಅನೇಕ ರಹಸ್ಯಗಳಿವೆ, ಅದರ ಬಗ್ಗೆ ಮಾನವರಿಗೆ ತಿಳಿದಿಲ್ಲ. ಆದರೆ, ಸಂಶೋಧನೆಯಿಂದಾಗಿ ವಿಜ್ಞಾನಿಗಳು ಭೂಮಿಯ ಕಡೆಗೆ ಬರುವ ಅಪಾಯಗಳನ್ನು ಮೊದಲೇ ತಿಳಿದುಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇಂದು ರಾತ್ರಿಯೂ ಇದೇ ರೀತಿಯ ಅಪಾಯಕಾರಿ ಎಚ್ಚರಿಕೆಗಳನ್ನು ನೀಡಲಾಗಿದೆ.

ಭೂಮಿಗೆ ಅಪ್ಪಳಿಸಲಿದೆ  600 KM /ಸೆಕೆಂಡ್  ವೇಗದಲ್ಲಿ ಚಲಿಸುವ ಸೌರ ಮಾರುತ .! GPS ಮೇಲೆ ಬೀರಲಿದೆ ನೇರ ಪರಿಣಾಮ

ಬೆಂಗಳೂರು : Solar winds can hit earth: ಪ್ರಕೃತಿ ಎದುರು ಯಾರೂ ನಿಲ್ಲುವುದು ಸಾಧ್ಯವಿಲ್ಲ, ಗೆಲ್ಲುವುದೂ ಸಾಧ್ಯವಿಲ್ಲ.  ಅದಕ್ಕೆ ಹಿರಿಯರು ಹೇಳುವುದು ಪ್ರಕೃತಿಯೊಂದಿಗೆ ಆಟವಾಡುವುದು ಸರಿಯಲ್ಲ ಎಂದು.   ಮುನ್ನೆಚ್ಚರಿಕೆಗಳ ನಡುವೆಯೇ ಇಂದು ಭೂಮಿಯ ಮೇಲೆ ದೊಡ್ಡ ಅಪಾಯವೊಂದು ಎದುರಾಗಿದೆ. ವಿಜ್ಞಾನಿಗಳು ನೀಡಿರುವ ಎಚ್ಚರಿಕೆಯ ಪ್ರಕಾರ ಇನ್ನು ಕೆಲವೇ ಗಂಟೆಗಳಲ್ಲಿ ಭೀಕರ ಸೌರ ಮಾರುತಗಳು ಭೂಮಿಗೆ ಅಪ್ಪಳಿಸಬಹುದು. ಬಲವಾದ ಸೌರ ಮಾರುತಗಳು ಇಂದು ರಾತ್ರಿ ಭೂಮಿಯ ಕಾಂತಕ್ಷೇತ್ರವನ್ನು  ಅಪ್ಪಳಿಸಿದರೆ  ಯುರೋಪಿನ ಅನೇಕ ದೇಶಗಳಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳು ಎದುರಾಗಬಹುದು.  

ಸೆಕೆಂಡಿಗೆ 600 ಕಿಲೋಮೀಟರ್ ವೇಗ : 
ವಿಜ್ಞಾನಿಗಳು ನೀಡಿದ ಎಚ್ಚರಿಕೆ ಪ್ರಕಾರ, ಈ ಸೌರ ಜ್ವಾಲೆಗಳು ಸೂರ್ಯನ ರಂಧ್ರದಿಂದ ಹೊರಬರುತ್ತವೆ. ಇದರ ವೇಗ ಸೆಕೆಂಡಿಗೆ 600 ಕಿ.ಮೀ. ಇದು ನಮ್ಮ ಭೂಮಿಯ ಮ್ಯಾಗ್ನೆಟೋಸ್ಪಿಯರ್ ಮೇಲೆ ಪರಿಣಾಮ ಬೀರುತ್ತದೆ. ಆದರೂ  ಈ  ಸೌರ ಜ್ವಾಲೆಯು ಭೂಮಿಯನ್ನು ಅಪ್ಪಳಿಸುವ ಸಂಭವ ತೀರಾ ಕಡಿಮೆ ಎನ್ನಲಾಗಿದೆ. ಇದರ ಹೊರತಾಗಿಯೂ, ಒಂದು ವೇಳೆ ಇದು ಭುಉಮಿಯನ್ನು ಅಪ್ಪಳಿಸಿದರೆ, ಪವರ್ ಗ್ರಿಡ್ ನಲ್ಲಿ ಏರಿಳಿತಗಳು ಉಂಟಾಗುತ್ತವೆ.

ಇದನ್ನೂ ಓದಿ : WhatsApp New Features : ಈಗ ವಾಟ್ಸಾಪ್‌ ಕಾಲ್ ನಲ್ಲಿರುವಾಗಲೂ ಈ ಕೆಲಸಗಳನ್ನು ಮಾಡಬಹುದು

GPS ಮೇಲೆ ಪರಿಣಾಮ ಬೀರಬಹುದು : 
ಈ ಅಪಾಯಕಾರಿ ಸೌರ ಮಾರುತಗಳು Google ಮ್ಯಾಪ್ ಮತ್ತು ನಿಮ್ಮ GPS ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರೊಂದಿಗೆ, ಈ ಮಾರುತಗಳು ಹೆಚ್ಚಿನ ಎತ್ತರದಲ್ಲಿ ಹಾರುವ ವಲಸೆ ಹಕ್ಕಿಗಳ ಹಾದಿಯನ್ನು ಕೂಡಾ ತಪ್ಪಿಸಬಹುದು. 

ಸರ್ಕಾರ ಯಾವುದೇ ಎಚ್ಚರಿಕೆ ನೀಡಿಲ್ಲ : 
ಸೂರ್ಯನ ಹೊರ ಪದರವಾದ ಕರೋನಾ ತಾಪಮಾನವು 11 ಲಕ್ಷ ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.  ತಾಪಮಾನವು ತುಂಬಾ ಹೆಚ್ಚಾದಾಗ, ಸೂರ್ಯನ ಗುರುತ್ವಾಕರ್ಷಣೆಯು ವೇಗವಾಗಿ ಚಲಿಸುವ ಕಣಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ  ಅವು ನಿರಂತರವಾಗಿ ಹೊರಬರುತ್ತವೆ. ಕರೋನಾ ರಂಧ್ರದಿಂದ ಹೊರಹೊಮ್ಮುವ ಸೌರ ಮಾರುತಗಳು ತುಂಬಾ ವೇಗವಾಗಿರುತ್ತವೆ.  ಈ ವೇಗವು ಸೆಕೆಂಡಿಗೆ 600 ರಿಂದ 800 ಕಿಮೀ ತಲುಪುತ್ತದೆ. ಇಂದು ರಾತ್ರಿ ಸಂಭವಿಸಬಹುದು ಎನ್ನಲಾದ ಈ ಗತಿ ವಿಧಿಗೆ ಸಂಬಂಧಿಸಿದಂತೆ ಬ್ರಿಟನ್ ಸೇರಿದಂತೆ ಯುರೋಪ್‌ನ ಯಾವುದೇ ದೇಶದ ಸರ್ಕಾರವು ಯಾವುದೇ ರೀತಿಯ ಎಚ್ಚರಿಕೆಯ ಸಂದೇಶವನ್ನು ಜಾರಿ ಮಾಡಿಲ್ಲ. 

ಇದನ್ನೂ ಓದಿ : Nokia ಪವರ್ ಫುಲ್ ಸ್ಮಾರ್ಟ್ ಫೋನ್ ಅನ್ನು ಕೇವಲ 2,000 ರೂ.ಗೆ ಮನೆಗೆ ತನ್ನಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Read More