Home> Technology
Advertisement

16 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ WhatsApp!

 ಅಪ್ಲಿಕೇಶನ್‌ನಲ್ಲಿ ಹಾನಿಕಾರಕ ಚಟುವಟಿಕೆಯನ್ನು ತಡೆಯಲು 16.66 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ." WhatsApp ಫ್ರೇಮ್‌ವರ್ಕ್ ಪ್ರಕಾರ, ಬಳಕೆದಾರರು ಅಪ್ಲಿಕೇಶನ್  ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಾಗ  ಖಾತೆಯನ್ನು ನಿಷೇಧಿಸಲಾಗುತ್ತದೆ. 

 16 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ  WhatsApp!

ಬೆಂಗಳೂರು : ಮಾಸಿಕ ವರದಿಯ ಪ್ರಕಾರ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಏಪ್ರಿಲ್ ತಿಂಗಳಲ್ಲಿ 1.6 ಮಿಲಿಯನ್ ಭಾರತೀಯ ಬಳಕೆದಾರರ ಖಾತೆಗಳನ್ನು ನಿಷೇಧಿಸಿದೆ. ಬಳಕೆದಾರರ ದೂರುಗಳ ಆಧಾರದ ಮೇಲೆ ಒಟ್ಟು 122 ಖಾತೆಗಳನ್ನು ನಿಷೇಧಿಸಲಾಗಿದೆ, . ಆದರೆ ಅಪ್ಲಿಕೇಶನ್‌ನಲ್ಲಿ ಹಾನಿಕಾರಕ ಚಟುವಟಿಕೆಯನ್ನು ತಡೆಯಲು 16.66 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ಹೇಳಿದೆ. 

ವರದಿಯಲ್ಲಿ ಹೇಳಿದ್ದೇನು?
WhatsAppನ ವರದಿಯು "ಫೇಸ್‌ಬುಕ್ ಒಡೆತನದ ಸಂದೇಶ ಕಳುಹಿಸುವ ಅಪ್ಲಿಕೇಶನ್ ಬಳಕೆದಾರರ ದೂರುಗಳ ಆಧಾರದ ಮೇಲೆ ಒಟ್ಟು 122 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.  ಆದರೆ ಅಪ್ಲಿಕೇಶನ್‌ನಲ್ಲಿ ಹಾನಿಕಾರಕ ಚಟುವಟಿಕೆಯನ್ನು ತಡೆಯಲು 16.66 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ." WhatsApp ಫ್ರೇಮ್‌ವರ್ಕ್ ಪ್ರಕಾರ, ಬಳಕೆದಾರರು ಅಪ್ಲಿಕೇಶನ್  ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಾಗ  ಖಾತೆಯನ್ನು ನಿಷೇಧಿಸಲಾಗುತ್ತದೆ. 

ಇದನ್ನೂ ಓದಿ : Samsung: ಬಜೆಟ್ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ ಸ್ಯಾಮ್ಸಂಗ್ 5G ಸ್ಮಾರ್ಟ್‌ಫೋನ್

ಮೆಷಿನ್ ಲರ್ನಿಂಗ್ ಸಿಸ್ಟಮ್ ನಿಂದ ಕ್ರಮ : 
"ಆದಷ್ಟು ಬೇಗ ನಿಂದನೀಯ ಖಾತೆಗಳನ್ನು ಗುರುತಿಸುವುದು ಮತ್ತು ಅದನ್ನು ತಡೆಯುವುದು  ನಮ್ಮ ಗುರಿಯಾಗಿದೆ" ಎಂದು ಕಂಪನಿ ವರದಿಯಲ್ಲಿ ಹೇಳಿದೆ. ಈ ಕಾರಣದಿಂದ ಈ ಖಾತೆಗಳನ್ನು ಮ್ಯಾನುವೆಲ್ ಆಗಿ  ಗುರುತಿಸುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಮೆಷಿನ್ ಲರ್ನಿಂಗ್ ಸಿಸ್ಟಮ್  ಅನ್ನು ಅಳವಡಿಸಲಾಗಿದೆ.  ಈ ಮೂಲಕ ದಿನದ 24 ಗಂಟೆಗಳೂ ಕೂಡಾ ಆ್ಯಪ್ ಕಾರ್ಯ ಚಟುವಟಿಕೆ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳುವುದು ಸಾಧ್ಯವಾಗುತ್ತಿದೆ. 

ಯಾವ ಖಾತೆಯ ಮೂಲಕ ನಕಾರಾತ್ಮಕ ಪ್ರತಿಕ್ರಿಯೆ ಸಲ್ಲಿಸಲಾಗುತ್ತದೆಯೋ ಆ ಖಾತೆಯನ್ನು ನಿರ್ಬಂಧಿಸಲಾಗುವುದು. ಮಾತ್ರವಲ್ಲ ಬೇರೆ ಬಳಕೆದಾರರು ವರದಿ ಮಾಡಿದಾಗಲೂ ಆ ಖಾತೆಯನ್ನು block ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಆ್ಯಪ್‌ನ ವ್ಯವಸ್ಥೆಗಳು ಖಾತೆಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ನಕಾರಾತ್ಮಕ ಪ್ರತಿಕ್ರಿಯೆ ವರದಿಯಾದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂಪನಿ ಹೇಳಿದೆ. 

ಇದನ್ನೂ ಓದಿ : WhatsApp ಬಳಕೆದಾರರಿಗೊಂದು ಗುಡ್ ನ್ಯೂಸ್, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಈ ಬಹುನಿರೀಕ್ಷಿತ ವೈಶಿಷ್ಟ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Read More