Home> Technology
Advertisement

Dangerous Virus Mail: ನಿಮ್ಮ Inbox ನಲ್ಲೂ ಈ ಮೇಲ್ ಬಂದಿದೆಯಾ? ಈಗಲೇ ಎಚ್ಚೆತ್ತುಕೊಳ್ಳಿ

Dangerous Mail - ಕಂಪ್ಯೂಟರ್‌ಗಳ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡುವ ದೊಡ್ಡ ಆನ್‌ಲೈನ್ ಭದ್ರತಾ ಸಂಸ್ಥೆಯಿಂದ ಜನರಿಗೆ ಮೇಲ್ ಬರುತ್ತಿದ್ದು, ಕಂಪ್ಯೂಟರ್ ಸೇಫ್ಟಿ ಬಗ್ಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ.  ವಾಸ್ತವದಲ್ಲಿ ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯುವ ಉದ್ದೇಶದಿಂದ ಈ ಮೇಲ್‌ಗಳನ್ನು ಹ್ಯಾಕರ್‌ಗಳು ಕಳುಹಿಸುತ್ತಿದ್ದಾರೆ.

Dangerous Virus Mail: ನಿಮ್ಮ Inbox ನಲ್ಲೂ ಈ ಮೇಲ್  ಬಂದಿದೆಯಾ? ಈಗಲೇ ಎಚ್ಚೆತ್ತುಕೊಳ್ಳಿ

ನವದೆಹಲಿ: McAfee Mails - ಇಂದಿನ ಸಮಯದಲ್ಲಿ, ನಾವು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತೇವೆ. ಇಂಟರ್‌ನೆಟ್ (Latest Tech News) ಬಳಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಇಂಟರ್ನೆಟ್ ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸಿದೆಯೋ, ಅದು ಅಷ್ಟೇ ಅಪಾಯಕಾರಿ ಎಂದು ಸಾಬೀತುಪಡಿಸಿದೆ. ಕಳೆದ ಕೆಲವು ವರ್ಷಗಳಲ್ಲಿ, ಸೈಬರ್ ಕಳ್ಳತನ ಪ್ರಕರಣಗಳಲ್ಲಿ (Cyber Crime) ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಹ್ಯಾಕರ್‌ಗಳು ಇಂಟರ್ನೆಟ್ ಮೂಲಕ ಜನರ ಡೇಟಾ ಮತ್ತು ಹಣವನ್ನು ಕದಿಯುತ್ತಿದ್ದಾರೆ. ಇಂದು ನಾವು ನಿಮಗೆ ಅಂತಹ ಒಂದು ಮೇಲ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮೇಲ್ ಮೂಲಕ ಹ್ಯಾಕರ್ ಗಳು ನಿಮ್ಮ ಡೇಟಾ ಮತ್ತು ಬ್ಯಾಂಕ್ ಖಾತೆ ಎಲ್ಲವನ್ನೂ ಮಾಹಿತಿಯನ್ನು ಹ್ಯಾಕ್ ಮಾಡಬಹುದು.

ಈ ಮೇಲ್‌ ಬಗ್ಗೆ ಜಾಗರೂಕತೆ ವಹಿಸಿ

ProPrivacy ಇತ್ತೀಚೆಗೆ ಟ್ವೀಟ್ ಮೂಲಕ ಹೊಸ ಮೇಲ್ ಹಗರಣದ ಬಗ್ಗೆ ಜನರನ್ನು ಎಚ್ಚರಿಸಿದೆ. ಹ್ಯಾಕರ್‌ಗಳು ಜನರಿಗೆ ಅಪಾಯಕಾರಿ ಮೇಲ್ (Fake Mails) ಕಳುಹಿಸುತ್ತಿದ್ದಾರೆ, ಇದರಿಂದ ಅವರ ವೈಯಕ್ತಿಕ ಡೇಟಾವನ್ನು ಕದಿಯಬಹುದು ಎಂದು ಅದು ಎಚ್ಚರಿಕೆ ನೀಡಿದೆ. ಜನರಿಗೆ ಆನ್‌ಲೈನ್ ಭದ್ರತಾ ಪ್ಲಾಟ್‌ಫಾರ್ಮ್ ಮೆಕಾಫಿಯಿಂದ (Online Security)  ಈ ಮೇಲ್ ಬರುತ್ತಿವೆ ಹೇಳಲಾಗುತ್ತಿದೆ, ಇದರಿಂದ ಅವರ  ಕಂಪ್ಯೂಟರ್ ಅಪಾಯದಲ್ಲಿದೆ ಮತ್ತು ಮೆಕ್ಯಾಫೆಗೆ ಚಂದಾದಾರರಾಗುವ ಮೂಲಕ ನೀವು ಇದರಿಂದ ಪಾರಾಗಬಹುದು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ-WhatsApp ನಲ್ಲಿ ಬರುತ್ತಿದೆ ಇದುವರೆಗಿನ ಅತ್ಯಂತ ಜಬರ್ದಸ್ತ್ ವೈಶಿಷ್ಟ್ಯ

ಈ ಮೇಲ್ ಅಪಾಯಕಾರಿಯಾಗಿದೆ
ವಾಸ್ತವವಾಗಿ McAfee ಯಿಂದ  ಬರುತ್ತಿರುವ ಈ ಮೇಲ್‌ನಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಮೇಲ್ ಅನ್ನು ಹ್ಯಾಕರ್‌ಗಳು (Hackers) ವಿನ್ಯಾಸಗೊಳಿಸಿದ್ದಾರೆ ಮತ್ತು ಅವರೇ ಈ ಮೇಲ್ ಅನ್ನು ಕಳುಹಿಸುತ್ತಿದ್ದಾರೆ. ಇದರಿಂದ ಜನರು ಮೋಸ ಹೋಗಬಹುದು. ಈ ಮೇಲ್‌ನಲ್ಲಿ ನೀಡಲಾದ ಲಿಂಕ್ ಅನ್ನು ನೀವು ಕ್ಲಿಕ್ ಮಾಡಿದ ತಕ್ಷಣ, ಅದು ನಿಮ್ಮನ್ನು ಮತ್ತೊಂದು ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ, ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ ಮತ್ತು ನೀವು ಮೋಸ ಹೋಗುವಿರಿ. 

ಇದನ್ನೂ ಓದಿ-WhatsApp: ಬಳಕೆದಾರರ ಖುಷಿ ಇಮ್ಮಡಿಗೊಳಿಸಿದ ವಾಟ್ಸಾಪ್ ನ ಹೊಸ ಫೀಚರ್

ಸುರಕ್ಷಿತವಾಗಿರಲು ಇದನ್ನು ಮಾಡಿ
ಈ ಮತ್ತು ಇದೇ ರೀತಿಯ ಮೇಲ್‌ಗಳಿಂದ ನೀವು ಹೇಗೆ ಸುರಕ್ಷಿತವಾಗಿರಬೇಕು ಎಂದು ನೀವೂ ಕೂಡ ಯೋಚಿಸುತ್ತಿದ್ದರೆ, ನಿಮಗೆ  ಬಂದ ಯಾವುದೇ ಮೇಲ್ ಅನ್ನು ತೆರೆಯುವ ಮೊದಲು, ಅದನ್ನು ಕಳುಹಿಸುವವರ ಲಿಂಕ್ ಅನ್ನು ಎಚ್ಚರಿಕೆಯಿಂದ ಓದಿ, ಕಂಪನಿಯ ವೆಬ್ ಡೊಮೇನ್ ಅನ್ನು ಲಿಂಕ್‌ನಲ್ಲಿ ಸೇರಿಸಬೇಕು. ಅಲ್ಲದೆ, ಕಳುಹಿಸುವವರ ಲಿಂಕ್ ಅಥವಾ ಮೇಲ್‌ನಲ್ಲಿ ನೀಡಲಾದ ವಿಷಯದ ಸ್ಪೆಲ್ಲಿಂಗ್ ಅಥವಾ ಲೋಗೋ ತಪ್ಪುಗಳನ್ನು ನಿರ್ಲಕ್ಷಿಸಬೇಡಿ, ಈ ವಿಷಯಗಳಿಂದ ನೀವು ಮೇಲ್ ನಿಜವೇ ಅಥವಾ ನಕಲಿಯೇ ಎಂಬುದನ್ನು ಕಂಡುಹಿಡಿಯಬಹುದು.

ಇದನ್ನೂ ಓದಿ-BSNL ಹೊಸ ರಿಚಾರ್ಜ್ ಪ್ಲಾನ್ : ₹329 ಗೆ ಸಿಗಲಿದೆ 1000GB ಹೈ-ಸ್ಪೀಡ್ ಡೇಟಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More