Home> Technology
Advertisement

Earth Rotation:ಭೂಮಿ ತಿರುಗುವಿಕೆ ವೇಗದಲ್ಲಿ ಹೆಚ್ಚಳ, ದಣಿದ ಗಡಿಯಾರಗಳು, ಆತಂಕಕ್ಕೊಳಗಾದ ವಿಜ್ಞಾನಿಗಳು

Earth Rotation: ಸಾಮಾನ್ಯವಾಗಿ ನಮ್ಮ ಭೂಮಿ 24 ಗಂಟೆಗಳಲ್ಲಿ ಒಂದು ಬಾರಿಗೆ ತನ್ನ ಪರಧಿಯ ಸುತ್ತ ಸುತ್ತುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ, ಕಳೆದ ವರ್ಷದ ಜೂನ್ ನಿಂದ ಇದುವರೆಗೆ ಭೂಮಿ ತನ್ನ ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ತಿರುಗಲಾರಂಭಿಸಿದೆ. ಇದರಿಂದ ಭೂಮಿಯ ಮೇಲೆ ಇರುವ ಎಲ್ಲ ದೇಶಗಳ ಸಮಯದಲ್ಲಿ ಬದಲಾವಣೆಯಾಗುತ್ತಿದೆ.

Earth Rotation:ಭೂಮಿ ತಿರುಗುವಿಕೆ ವೇಗದಲ್ಲಿ ಹೆಚ್ಚಳ, ದಣಿದ ಗಡಿಯಾರಗಳು, ಆತಂಕಕ್ಕೊಳಗಾದ ವಿಜ್ಞಾನಿಗಳು

ನವದೆಹಲಿ: Earth Rotation - ಕಳೆದ 50 ವರ್ಷಗಳ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಭೂಮಿ ತನ್ನ ಸಾಮಾನ್ಯವೆಗಕ್ಕಿಂತ ಹೆಚ್ಚಿನ ವೇಗದಲ್ಲಿ ತನ್ನ ಪರದಿಯ ಸುತ್ತ ತಿರುಗಲಾರಂಭಿಸಿದೆ (Earth Is Spinning Faster Than Any Time In Past 50 Years). ಇದನ್ನು ಹೇಗೆ ನಿರ್ವಹಿಸುವುದು ಎಂದು ವಿಜ್ಞಾನಿಗಳು ಕೂಡ ತಲೆಕೆಡಿಸಿಕೊಂಡಿದ್ದಾರೆ. ಪ್ರಸ್ತುತ ಭೂಮಿ ಸಾಮಾನ್ಯ ವೇಗಕ್ಕಿಂತ ವೆಗವಾಗಿ ತಿರುಗುತ್ತಿದೆ.

ಪ್ರಸ್ತುತ ಭೂಮಿ 24 ಗಂಟೆಗಳಿಗೂ ಮುಂಚಿತವಾಗಿಯೇ ತನ್ನ ಪರಧಿಯ ಒಂದು ಸುತ್ತು ಪೂರ್ಣಗೊಳಿಸುತ್ತಿದೆ. ಕಳೆದ ವರ್ಷದ ಮಧ್ಯಭಾಗದಿಂದ ಭೂಮಿಯ ಗತಿಯಲ್ಲಿ ಈ ಬದಲಾವಣೆಯನ್ನು ಗಮನಿಸಲಾಗುತ್ತಿದೆ. ಹಾಗಾದರೆ ಬನ್ನಿ ಭೂಮಿ ಎಷ್ಟೊಂದು ವೇಗದಲ್ಲಿ ಸುತ್ತುತ್ತಿದೆ ಹಾಗೂ ನಮ್ಮ ಜೀವನದ ಮೇಲೆ ಅದರ ಪ್ರಭಾವ ಏನು ಎಂಬುದನ್ನು ತಿಳಿಯೋಣ.

ಋಣಾತ್ಮಕ ಲೀಪ್ ಸೆಕೆಂಡ್ ಗಳನ್ನು ಸೇರಿಸಬೇಕು
ಸಾಮಾನ್ಯವಾಗಿ ನಮ್ಮ ಭೂಮಿ (Earth) 24 ಗಂಟೆಗಳಲ್ಲಿ ಒಂದು ಬಾರಿಗೆ ತನ್ನ ಪರಧಿಯ ಸುತ್ತ ಸುತ್ತುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ, ಕಳೆದ ವರ್ಷದ ಜೂನ್ ನಿಂದ ಇದುವರೆಗೆ ಭೂಮಿ ತನ್ನ ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ತಿರುಗಲಾರಂಭಿಸಿದೆ. ಇದರಿಂದ ಭೂಮಿಯ ಮೇಲೆ ಇರುವ ಎಲ್ಲ ದೇಶಗಳ ಸಮಯದಲ್ಲಿ ಬದಲಾವಣೆಯಾಗುತ್ತಿದೆ.

ಇದನ್ನು ಓದಿ-Research: ಸಾವಿನ ನಿಖರ ಸಮಯ ತಿಳಿದುಕೊಳ್ಳಬೇಕೆ? ಈ ಸುದ್ದಿ ತಪ್ಪದೆ ಓದಿ

ಈ ಕಾರಣದಿಂದ ವಿಜ್ಞಾನಿಗಳು ತಮ್ಮ ತಮ್ಮ ಸ್ಥಾನಗಳಲ್ಲಿ ಇರುವ ಅಟೋಮಿಕ್ ಕ್ಲಾಕ್ ಗಳ ಸಮಯದಲ್ಲಿ ಬದಲಾಯಿಸಬೇಕಾಗಿದೆ. ಅಂದರೆ, ವಿಜ್ಞಾನಿಗಳು(Scientists) ತಮ್ಮ-ತಮ್ಮ ಗಡಿಯಾರದಲ್ಲಿ ಋಣಾತ್ಮಕ ಲೀಪ್ ಸೆಕೆಂಡ್ ಗಳನ್ನು ಜೋಡಿಸಬೇಕು. 1970 ರಿಂದ ಇದುವರೆಗೆ 27 ಋಣಾತ್ಮಕ ಲೀಪ್ ಸೆಕೆಂಡ್ (Negative Leap Second)ಗಳನ್ನು ಜೋಡಿಸಲಾಗಿದೆ. 

24 ಗಂಟೆಗಳಲ್ಲಿ 0.5 ಮಿಲಿ ಸೆಕೆಂಡ್ ಕಡಿಮೆಯಾಗಿದೆ
ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಭೂಮಿ 24 ಗಂಟೆಗೂ ಹೆಚ್ಚು ಸಮಯವನ್ನು ತೆಗೆದುಕೊಂಡು ತನ್ನ ಪರಧಿಯ ಸುತ್ತ ತಿರುತುತ್ತಿತ್ತು. ಆದರೆ, ಕಳೆದ ವರ್ಷದ ಜೂನ್ ತಿಂಗಳಿನಿಂದ 24 ಗಂಟೆಗಿಂತಲೂ ಕಡಿಮೆ ಸಮಯದಲ್ಲಿ ಭೂಮಿ ತನ್ನ ಒಂದು ಪರಧಿಯನ್ನು ಪೂರ್ಣಗೋಳಿಸಲಾರಂಭಿಸಿದೆ. ಪ್ರಸ್ತುತ ಭೂಮಿ 24 ಗಂಟೆಗೆ 0.5 ಮಿಲಿ ಸೆಕೆಂಡ್ ಕಡಿಮೆ ಇರುವಾಗಲೇ ತನ್ನ ಪರಧಿಯ ಒಂದು ಸುತ್ತನ್ನು ಪೂರ್ಣಗೊಳಿಸುತ್ತಿದೆ. ಅಂದರೆ ನಮ್ಮ 24 ಗಂಟೆಗಳಲ್ಲಿ 0.5 ಮಿಲಿ ಸೆಕೆಂಡ್ ಗಳು ಕಡಿಮೆಯಾಗಿವೆ. 

ಇದನ್ನು ಓದಿ- Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್

50 ವರ್ಷಗಳ ಸರಿಯಾದ ಅಂಕಿಗಳು 
ಕಳೆದ 50 ವರ್ಷಗಳಿಂದ ಭೂಮಿ ಸುತ್ತುವ ನಿಖರ ಅಂಕಿ-ಅಂಶಗಳನ್ನು ಕಲೆ ಹಾಕಲಾಗುತ್ತಿದೆ. 24 ಗಂಟೆಗಳಲ್ಲಿ ಒಟ್ಟು 86,400 ಸೆಕೆಂಡ್ ಗಳಿರುತ್ತವೆ. ಅಂದರೆ ಇಷ್ಟು ಸೆಕೆಂಡ್ ಗಳಲ್ಲಿ ಭೂಮಿ ತನ್ನ ಪರಧಿಯ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಆದರೆ ಕಳೆದ ವರ್ಷದ ಜೂನ್ ನಿಂದ 86,400 ಸೆಕೆಂಡ್ ಗಳಲ್ಲಿ 0.5 ಮಿಲಿ ಸೆಕೆಂಡ್ ಇಳಿಕೆಯಾಗಿದೆ.

28 ಬಾರಿ ದಾಖಲೆ ಮುರಿದಿವೆ
ಇದಕ್ಕೂ ಮೊದಲು 2005 ರಲ್ಲಿ ಎಲ್ಲಕ್ಕಿಂತ ಚಿಕ್ಕ ದಿನ     ಗಮನಿಸಲಾಗಿತ್ತು. ಆದರೆ, ಕಳೆದ 12 ತಿಂಗಳಲ್ಲಿ 28 ಬಾರಿ ಈ ದಾಖಲೆ ಮುರಿದಿದೆ ಎಂದು ಹೇಳಿದರೆ, ನೀವು ದಂಗಾಗುವಿರಿ. ಸಮಯದ ಈ ಬದಲಾವಣೆಯನ್ನು ಅಟೋಮಿಕ್ ಕ್ಲಾಕ್ ನಲ್ಲಿ ಮಾತ್ರ ಗಮನಿಸಬಹುದು. ಆದರೆ, ಇದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗಲಿವೆ. ಏಕೆಂದರೆ ನಮ್ಮ ಉಪಗ್ರಹಗಳನ್ನು ಹಾಗೂ ಸಂಪರ್ಕ ವ್ಯವಸ್ಥೆಯನ್ನು ಸೋಲಾರ್ ಟೈಮ್ ಗೆ ಅನುಗುಣವಾಗಿ ಸೆಟ್ ಮಾಡಲಾಗಿರುತ್ತದೆ. ಹೀಗಾಗಿ ಇದರಿಂದ ಸಂಪರ್ಕ ವ್ಯವಸ್ಥೆ ಪ್ರಭಾವಿತಗೊಳ್ಳಲಿದೆ. ಸಮಯವನ್ನು ನಕ್ಷತ್ರಗಳು, ಚಂದ್ರ ಹಾಗೂ ಸೂರ್ಯನ ಸ್ಥಾನವನ್ನು ಆಧರಿಸಿ ಸೆಟ್ ಮಾಡಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನು ಓದಿ- ನಿಜವಾಗುತ್ತಾ Nostradamus ಭವಿಷ್ಯವಾಣಿ? ಭೂಮಿಯತ್ತ ಧಾವಿಸುತ್ತಿದೆ ಬೃಹದಾಕಾರದ ಕ್ಷುದ್ರ ಗ್ರಹ

ಲೀಪ್ ಸೆಕೆಂಡ್ ತೆಗೆದುಹಾಕುವ ಸಮಯ
ಪ್ಯಾರಿಸ್ ಮೂಲದ ಅಂತರರಾಷ್ಟ್ರೀಯ ಭೂ ತಿರುಗುವಿಕೆ ಸೇವೆಯ (International Earth Rotation Service) ವಿಜ್ಞಾನಿಗಳ ಪ್ರಕಾರ 70 ರ ದಶಕದಿಂದ ಇದುವರೆಗೆ ಸುಮಾರು 27 ಅಧಿಕ ಸೆಕೆಂಡುಗಳನ್ನು ಸೇರಿಸಲಾಗಿದೆ. ಇದಕ್ಕೂ ಮೊದಲು 2016 ರಲ್ಲಿ ಅಧಿಕ ಸೆಕೆಂಡುಗಳನ್ನು ಸೇರಿಸಲಾಗಿತ್ತು. ಆದರೆ ಈಗ ಅಧಿಕ ಸೆಕೆಂಡುಗಳನ್ನು ತೆಗೆದುಹಾಕುವ ಸಮಯ ಬಂದಿದೆ, ಅಂದರೆ, ಇದೀಗ ಋಣಾತ್ಮಕ ಸೆಕೆಂಡ್ ಗಳನ್ನು ಜೋಡಿಸುವ ಕಾಲ ಕೂಡಿಬಂದಿದೆ ಎಂದರ್ಥ.

ಸಮಯದ ಜೊತೆಗೆ ಸಾಗಲು ಹಿಂದಕ್ಕೆ ಹೋಗಬೇಕು
ಇದನ್ನು ಸ್ವೀಕರಿಸಿ  ಹೇಳಿಕೆ ನೀಡಿರುವ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯದ ಹಿರಿಯ ಸಂಶೋಧನಾ ವಿಜ್ಞಾನಿ ಪೀಟರ್ ವಿಬ್ಬರ್ಲಿ, ಭೂಮಿಯು ತನ್ನ ನಿಗದಿತ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ ಕಕ್ಷೆಯ ಒಂದು ಸುತ್ತು ಪೂರ್ಣಗೊಳಿಸುತ್ತಿದೆ ಎಂದು ಹೇಳಿದ್ದಾರೆ. ಕಳೆದ 50 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಇದು ಸಂಭವಿಸಿದೆ. ಇದು ಮಾತ್ರವಲ್ಲ, ಭೂಮಿಯ ಮೇಲೆ ವಾಸಿಸುವ ಜನರು ಸಮಯದೊಂದಿಗೆ ಚಲಿಸಲು ಋಣಾತ್ಮಕವಾಗಿ ಅಧಿಕ ಸೆಕೆಂಡುಗಳನ್ನು ಸೇರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- Aliens On Earth: ಭೂಮಿಗೆ ಬರಲಿವೆಯೇ Aliens? ವಿಜ್ಞಾನಿಗಳು ಹೇಳುವುದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More