Home> Technology
Advertisement

ಜಿಯೋ ಭರ್ಜರಿ ಆಫರ್ : ವರ್ಷಪೂರ್ತಿ ನಿತ್ಯ 2.5GB ಡೇಟಾ , ಅನ್ಲಿಮಿಟೆಡ್ ಕಾಲಿಂಗ್ .!

Jio independence day 2022 Offer : ರಿಲಯನ್ಸ್ ಜಿಯೋ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಘೋಷಿಸಿದೆ.  ಇದರಲ್ಲಿ ದಿನಕ್ಕೆ 2.5GB ಡೇಟಾ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿರಲಿ ದೆ . 

ಜಿಯೋ ಭರ್ಜರಿ ಆಫರ್ : ವರ್ಷಪೂರ್ತಿ  ನಿತ್ಯ 2.5GB ಡೇಟಾ ,  ಅನ್ಲಿಮಿಟೆಡ್ ಕಾಲಿಂಗ್ .!

Jio independence day 2022 Offer : ರಿಲಯನ್ಸ್ ಜಿಯೋ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಘೋಷಿಸಿದೆ. Jio ತನ್ನ ಅತ್ಯಂತ ಜನಪ್ರಿಯ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದನ್ನು ಹೆಚ್ಚುವರಿ ಪ್ರಯೋಜನಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಗ್ರಾಹಕರಿಗೆ 2,250 ರೂಪಾಯಿ ಮೌಲ್ಯದ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಿದೆ. Jio ಇದೀಗ ಈ ಆಫರ್ ಅನ್ನು ಘೋಷಿಸಿದ್ದು, ಈ ಆಫರ್ ಎಲ್ಲಯವರೆಗೆ ಲಭ್ಯವಿರಲಿದೆ ಎನ್ನುವ ಮಾಹಿತಿ ಮಾತ್ರ ನೀಡಿಲ್ಲ. 

ರಿಲಯನ್ಸ್ ಜಿಯೋ 2022 ರ ಸ್ವಾತಂತ್ರ್ಯ ದಿನದ ಕೊಡುಗೆ :
ರಿಲಯನ್ಸ್ ಜಿಯೋ 2022 ರ ಸ್ವಾತಂತ್ರ್ಯ ದಿನದ ಕೊಡುಗೆಯನ್ನು 2999  ರೂಪಾಯಿ ಪ್ರಿಪೇಯ್ಡ್ ಯೋಜನೆಯೊಂದಿಗೆ ಪ್ರಸ್ತುತಪಡಿಸುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು 365 ದಿನಗಳವರೆಗೆ ದಿನಕ್ಕೆ 2.5GB ಡೇಟಾವನ್ನು ಪಡೆಯಲಿದ್ದಾರೆ. ಇದು ಧ್ವನಿ ಕರೆ ಮತ್ತು SMS ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಪ್ರತಿ ದಿನ 100 SMS ಪಡೆಯುತ್ತಾರೆ. 

ಇದನ್ನೂ ಓದಿ : Future Smartphone: ಮುಂಬರುವ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳು ಹೇಗಿರಲಿವೆ ಗೊತ್ತಾ? ವಿಡಿಯೋ ನೋಡಿ ಗೊತ್ತಾಗುತ್ತದೆ

ರಿಲಯನ್ಸ್ ಜಿಯೋ ಸ್ವಾತಂತ್ರ್ಯ ದಿನದ  ಆಫರ್ ನಲ್ಲಿ ಏನಿರಲಿದೆ ?   :
ಯೋಜನೆಗಳ ಹೆಚ್ಚುವರಿ ಪ್ರಯೋಜನಗಳೆಂದರೆ JioTV, JioCinema, JioSecurity, JioCloud ಮತ್ತು Disney+ Hotstar ಮೊಬೈಲ್ ಚಂದಾದಾರಿಕೆಯನ್ನು ಒಂದು ವರ್ಷಕ್ಕೆ ಉಚಿತವಾಗಿ ಪಡೆಯಬಹುದು. 

ಜಿಯೋ ಸ್ವಾತಂತ್ರ್ಯ ದಿನದ ಕೊಡುಗೆ ಏನು?
Jio ನ ಸ್ವಾತಂತ್ರ್ಯ ದಿನದ 2022 ಆಫರ್ ಅಡಿಯಲ್ಲಿ, ಬಳಕೆದಾರರು ಈ ಯೋಜನೆಯೊಂದಿಗೆ 75GB ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ.  2,250 ರೂಪಾಯಿ ಮೌಲ್ಯದ ಇತರ ಪ್ರಯೋಜನಗಳು ಕೂಡಾ ಲಭ್ಯವಿರಲಿವೆ. 

ಇದನ್ನೂ ಓದಿ : ತಕ್ಷಣ WhatsApp update ಮಾಡಿಕೊಳ್ಳಿ, ಬಂದಿದೆ ಬಹು ನಿರೀಕ್ಷಿತ ವೈಶಿಷ್ಟ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More