Home> Technology
Advertisement

ಭೂಮಿ ಮತ್ತು ಚಂದ್ರನ ಫೋಟೋ ಕ್ಲಿಕ್ಕಿಸಿದ ಆದಿತ್ಯ L1 : ಫೋಟೋ ಹಂಚಿಕೊಂಡ ISRO

Aditya L 1 Mission: ಆದಿತ್ಯ L1 ಕೆಲವು ಫೋಟೋಗಳನ್ನು ಕಳುಹಿಸಿದ್ದು ಅದರಲ್ಲಿ ಭೂಮಿ ಮತ್ತು ಚಂದ್ರನ ಎರಡೂ ಕಾಣಿಸುತ್ತದೆ. ಈ ಫೋಟೋವನ್ನು ಇಸ್ರೋ ಹಂಚಿಕೊಂಡಿದೆ. 

ಭೂಮಿ ಮತ್ತು ಚಂದ್ರನ ಫೋಟೋ ಕ್ಲಿಕ್ಕಿಸಿದ ಆದಿತ್ಯ L1 : ಫೋಟೋ ಹಂಚಿಕೊಂಡ ISRO

Aditya L 1 Mission: ಆದಿತ್ಯ L 1 ಸೂರ್ಯನನ್ನು ಅಧ್ಯಯನ ಮಾಡುವ ಹಾದಿಯಲ್ಲಿ ಮುಂದುವರೆದಿದೆ. ಸುಮಾರು ನಾಲ್ಕು ತಿಂಗಳ ನಂತರ, ಇದು ಸೂರ್ಯ ಮತ್ತು ಭೂಮಿಯ ಅಕ್ಷದ ಮೇಲೆ ನೆಲೆಗೊಂಡಿರುವ L1 ಬಿಂದುವಿನಲ್ಲಿ ಸ್ಥಾಪಿಸಲ್ಪಡುತ್ತದೆ. ಇದೀಗ ಎರಡನೇ ಜಿಗಿತದಲ್ಲಿ 282 ಕಿಮೀ x 40 825 ಕಿಮೀ ದೂರದಲ್ಲಿ ಸುತ್ತುತ್ತಿದ್ದು, ಮೂರನೇ ಜಿಗಿತದಲ್ಲಿ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಾಗುವುದು. ಈ ಎಲ್ಲದರ ನಡುವೆ, ಆದಿತ್ಯ L1 ಕೆಲವು ಫೋಟೋಗಳನ್ನು ಕಳುಹಿಸಿದ್ದು ಅದರಲ್ಲಿ ಭೂಮಿ ಮತ್ತು ಚಂದ್ರನ ಎರಡೂ ಕಾಣಿಸುತ್ತದೆ. 

ಸೆಲ್ಫಿ ತೆಗೆದ ಆದಿತ್ಯ  : 
ಆದಿತ್ಯ ಎಲ್ 1 ಕಳುಹಿಸಿದ ಚಿತ್ರದಲ್ಲಿ ಭೂಮಿ ಮತ್ತು ಚಂದ್ರ ಎರಡೂ ಗೋಚರಿಸುತ್ತವೆ. ಅದರಲ್ಲಿ ಚಂದ್ರನು ಚಿಕ್ಕ ಚುಕ್ಕೆಯಂತೆ ಗೋಚರಿಸುತ್ತಾನೆ. ಸೂರ್ಯನತ್ತ ಪ್ರಯಾಣ ಬೆಳೆಸುತ್ತಿರುವ ಆದಿತ್ಯ ಭೂಮಿ ಮತ್ತು ಚಂದ್ರನ ಸೆಲ್ಫಿ ಕ್ಲಿಕ್ಕಿಸಿದ್ದಾನೆ ಎಂದು ಇಸ್ರೋ ಟ್ವೀಟ್ ನಲ್ಲಿ ಬರೆದುಕೊಂಡಿದೆ. ಈ ಸೆಲ್ಫಿಯ ಮೂಲಕ ಆದಿತ್ಯ L1 ಮಿಷನ್ ನಿಧಾನವಾಗಿ ತನ್ನ ಪಯಣದಲ್ಲಿ ಮುನ್ನಡೆಯುತ್ತಿದೆ ಎನ್ನುವುದು ತಿಳಿಯುತ್ತದೆ. ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ದೂರದಲ್ಲಿರುವ ಎಲ್ 1 ಪಾಯಿಂಟ್ ನಲ್ಲಿ ಆದಿತ್ಯ ಎಲ್1 ಅನ್ನು ಅಳವಡಿಸಬೇಕಿದೆ. ಈ ಮಿಷನ್ ಅತ್ಯಂತ ಮಹತ್ವದ್ದಾಗಿದೆ. ಇದರಲ್ಲಿ ಒಟ್ಟು ಏಳು ಪೇಲೋಡ್‌ಗಳನ್ನು ನಿಯೋಜಿಸಲಾಗಿದ್ದು, ಅದರಲ್ಲಿ ನಾಲ್ಕು ಸೂರ್ಯನ ಕಿರಣಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಮೂರು ಪೇಲೋಡ್‌ಗಳ ಮೂಲಕ ಎಲ್1 ಪಾಯಿಂಟ್‌ನ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. 

 

ಇದನ್ನೂ ಓದಿ : ಮೊಬೈಲ್ ಕವರ್ ಬಣ್ಣ ಬದಲಾಗಿದೆಯೇ? ಅದನ್ನು ಫಳ ಫಳ ಹೊಳೆಯುವಂತೆ ಮಾಡುತ್ತೆ ಮನೆಯಲ್ಲಿರುವ ಈ ವಸ್ತುಗಳು

ಆದಿತ್ಯ ಮಿಷನ್‌ನ ಉದ್ದೇಶ  : 
1472 ಕೆಜಿ ತೂಕದ ಬಾಹ್ಯಾಕಾಶ ನೌಕೆಯನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) 'ಎಕ್ಸ್‌ಎಲ್' ಸಂರಚನೆಯಲ್ಲಿ ಬಾಹ್ಯಾಕಾಶಕ್ಕೆ  ಹೊತ್ತೋಯ್ದಿದೆ. ಇದು ಇಸ್ರೋದ ಅತ್ಯಂತ ವಿಶ್ವಾಸಾರ್ಹ ಮತ್ತು ಬಹುಮುಖ ವರ್ಕ್‌ಹಾರ್ಸ್ ರಾಕೆಟ್. ಆದಿತ್ಯ L1 ಮಿಷನ್‌ನ ಪ್ರಾಥಮಿಕ ಉದ್ದೇಶವೆಂದರೆ ಸೂರ್ಯನ ಮೇಲಿನ ವಾತಾವರಣದ ಪದರಗಳನ್ನು, ವಿಶೇಷವಾಗಿ ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವುದು. ಆದಿತ್ಯ-L1 ಅನ್ನು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಾಗ್ರಾಂಜಿಯನ್ ಪಾಯಿಂಟ್ 1 (L1) ಸುತ್ತ ಹಾಲೋ ಆರ್ಬಿಟ್‌ನಲ್ಲಿ ಇರಿಸಲಾಗುತ್ತದೆ. ಈ ದೂರವನ್ನು ನಾಲ್ಕು ತಿಂಗಳ ಅವಧಿಯಲ್ಲಿ ಕ್ರಮಿಸುವ ನಿರೀಕ್ಷೆಯಿದೆ. L&T, MTar ಟೆಕ್ನಾಲಜೀಸ್, ಪಾರಸ್ ಡಿಫೆನ್ಸ್, ವಾಲ್‌ಚಂದನಗರ ಇಂಡಸ್ಟ್ರೀಸ್, HAL, BHEL ಮತ್ತು ಮಿಶ್ರಾ ಧಾತು ನಿಗಮ್ ಆದಿತ್ಯ L1 ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿವೆ. 

ಇದನ್ನೂ ಓದಿ : ವಾಟ್ಸಾಪ್ ಗ್ರೂಪ್‌ನಲ್ಲಿ ಈ ಪದಗಳನ್ನು ಬಳಸಿದರೆ ಜೈಲು ಪಾಲಾಗಬಹುದು, ಹುಷಾರ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Read More