Home> Technology
Advertisement

ಅತ್ಯಂತ ಅಗ್ಗದ ಬೆಲೆಗೆ iPhone 14 Pro Max! ಖರೀದಿಸಲು ಮುಗಿಬೀಳುತ್ತಿರುವ ಜನರು!

iPhone 14 Pro Max Refurbished Product: ಐಫೋನ್ 14 ಪ್ರೊ ಮ್ಯಾಕ್ಸ್ ಮೂಲ ಬೆಲೆ 1,32,999 ರೂ.(ಅಮೇಜಾನ್) ಇದೆ. ಇದರ refurbished ಉತ್ಪನ್ನವನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಅತ್ಯಂತ ಅಗ್ಗದ ಬೆಲೆಗೆ iPhone 14 Pro Max! ಖರೀದಿಸಲು ಮುಗಿಬೀಳುತ್ತಿರುವ ಜನರು!

ನವದೆಹಲಿ: Appleನ iPhone 14 Pro Max ಖರೀದಿಸುವುದು ಅನೇಕರ ಕನಸು. ಆದರೆ ಹೆಚ್ಚಿನ ಹಣ ಕೊಟ್ಟು ದುಬಾರಿ ಫೋನ್ ಖರೀದಿಸುವುದು ಅನೇಕರಿಗೆ ಸಾಧ್ಯವಾಗುವುಲ್ಲ. ಯಾಕಂದ್ರೆ ಇದರ ಬೆಲೆ ಲಕ್ಷಗಳಲ್ಲಿರುವುದು. ಇದು ಟ್ರೆಂಡಿಂಗ್ ಉತ್ಪನ್ನವಾಗಿದ್ದು, ಹೆಚ್ಚಿನ ಬೆಲೆಯ ಹೊರತಾಗಿಯೂ ಇದರ ಬೇಡಿಕೆ ಇಂದಿಗೂ ಕಡಿಮೆಯಾಗಿಲ್ಲ.

ಬಜೆಟ್‌ಗೆ ಹೊಂದಿಕೊಳ್ಳಲು ಸಾಧ್ಯವಾಗದ ಜನರು ಇವುಗಳ ನಕಲಿ ಫೋನ್ ಖರೀದಿಸಿ ಖುಷಿಪಡುತ್ತಾರೆ. ಆದರೆ ಇದರ ವೈಶಿಷ್ಟ್ಯಗಳು ಆಪಲ್‍ನಂತೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದೀಗ ನೀವು ಈ ಐಫೋನ್ ಮಾದರಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ದೊರೆಯುತ್ತಿದ್ದು, ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.   

ಇದನ್ನೂ ಓದಿ: Budget 2023: ಇವರು ಪಾವತಿಸಬೇಕಾಗುತ್ತದೆ ಕೇವಲ 5% ಆದಾಯ ತೆರಿಗೆ

refurbished model ಖರೀದಿಸುವ ಅವಕಾಶ

ಐಫೋನ್ 14 ಪ್ರೊ ಮ್ಯಾಕ್ಸ್ ಮೂಲ ಬೆಲೆ 1,32,999 ರೂ.(ಅಮೇಜಾನ್) ಇದೆ. ಇದರ refurbished ಉತ್ಪನ್ನವನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ವಾಸ್ತವವಾಗಿ refurbished ಮಾದರಿಯಲ್ಲಿ ಫೋನ್‍ಗೆ ಕೆಲವು ರೀತಿಯ ಹಾನಿಯಾಗಿರುತ್ತದೆ. ಈ ಹಾನಿಯಾದ ಫೋನ್‍ಅನ್ನು ಹೊಸದರಂತೆ ಮರು ತಯಾರಿಸಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಮತ್ತು ಸುಮಾರು 6 ತಿಂಗಳ ವಾರಂಟಿಯೂ ನಿಮಗೆ ಸಿಗುತ್ತದೆ. ಆನ್‍ಲೈನ್‍ನಲ್ಲಿ ನೀವು ಇದನ್ನು ಖರೀದಿಸಬಹುದು. Refurbished ಐಫೋನ್ ನಿಮಗೆ 20-40 ಸಾವಿರ ರೂ.ವರೆಗೂ ಸಿಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಆನ್‍ಲೈನಲ್ಲಿ ಹುಡುಕಾಟ ನಡೆಸಿ ಕಡಿಮೆ ಬೆಲೆಗೆ ಫೋನ್ ಖರೀದಿಸಬಹುದು.

ಇದನ್ನೂ ಓದಿ: ಬಜೆಟ್ ನಲ್ಲಿ ಆಗುವ ಈ ಎರಡು ಘೋಷಣೆಯಿಂದ ಸರ್ಕಾರಿ ನೌಕರರಿಗೆ ಬಂಪರ್ ಲಾಭ  

ಇಂತಹ Refurbished ಮಾದರಿಯ ಫೋನ್‍ಗಳನ್ನು ಮಾರಾಟ ಮಾಡುವ ಹಲವಾರು ವೆಬ್‌ಸೈಟ್‌ಗಳಿವೆ. ಕಡಿಮೆ ಬೆಲೆ ಪಾವತಿಸಿ ನೀವು ಐಫೋನ್ ಖರೀದಿಸಬಹುದಾಗಿದೆ. ಈಗಾಗಲೇ ಈ ರೀತಿಯ ಉತ್ಪನ್ನದ ಮಾರಾಟ ಜೋರಾಗಿದೆ. ಅನೇಕ ಜನರು 6 ತಿಂಗಳ ವಾರಂಟಿ ಜೊತೆಗೆ ಈ ಫೋನ್ ಖರೀದಿಸುತ್ತಿದ್ದಾರೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More