Home> Technology
Advertisement

ನಿಮ್ಮ ಫೋನಿಗೂ ಈ ಮೆಸೇಜ್ ಬಂದಿದ್ದರೆ ತಕ್ಷಣ ಡಿಲೀಟ್ ಮಾಡಿ! ಇಲ್ಲವಾದರೆ ಖಾತೆ ಆಗುವುದು ಖಾಲಿ

OTP Scam :ಇತ್ತೀಚಿನ ದಿನಗಳಲ್ಲಿ, ಬ್ಯಾಂಕ್ ಖಾತೆಯ ಬಗ್ಗೆ ವಿಚಾರಿಸುವಂಥಹ, ಕೆಲಸದ ಆಫರ್ ನೀಡುವಂಥಹ ಮೆಸ್ಸೇಜ್ ಗಳನ್ನು ಅನೇಕ ಬಳಕೆದಾರರು ರಿಸೀವ್ ಮಾಡುತ್ತಿದ್ದಾರೆ. ಇದರಲ್ಲಿ ಬಳಕೆದಾರರಿಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿ ವೇತನದ ಕೆಲಸ ಸಿಗಲಿದೆ ಎಂದು ಹೇಳಲಾಗುತ್ತದೆ. 

ನಿಮ್ಮ ಫೋನಿಗೂ ಈ ಮೆಸೇಜ್ ಬಂದಿದ್ದರೆ ತಕ್ಷಣ ಡಿಲೀಟ್ ಮಾಡಿ! ಇಲ್ಲವಾದರೆ ಖಾತೆ ಆಗುವುದು ಖಾಲಿ

ಬೆಂಗಳೂರು : ಈಗ ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರ ಕೈಯ್ಯಲ್ಲಿಯೂ ಸ್ಮಾರ್ಟ್ ಫೋನ್ ಇರುತ್ತದೆ. ಸ್ಮಾರ್ಟ್ಫೋನ್ ಮೂಲಕ ನಮ್ಮ ಅದೆಷ್ಟೋ ಕೆಲಸಗಳು ಸುಲಭವಾಗುತ್ತವೆ. ಆದರೆ ಸ್ಮಾರ್ಟ್ಫೋನ್  ಬಳಸುವಾಗ ಕೆಲವೊಂದು ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಅತಿ ಸಣ್ಣದು ಎಂದೆನಿಸುವ ಕೆಲವು ವಿಚಾರಗಳನ್ನು ಇಲ್ಲಿ ನಿರ್ಲಕ್ಷಿಸಿದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ನಿಮ್ಮ ಖಾತೆಯಿಂದ ಹಣ ಖಾಲಿಯಾಗುವುದಕ್ಕೂ ಹೆಚ್ಚು ಸಮಯ ಹಿಡಿಯುವುದಿಲ್ಲ. ಹಾಗಾಗಿ ನಿಮ್ಮ ಫೋನಿಗೆ ಬರುವ ಮೆಸೇಜ್ ಗಳನ್ನು ಓಪನ್ ಮಾಡುವ ಮೊದಲು ಅತ್ಯಂತ ಎಚ್ಚರಿಕೆಯಿಂದ ಇರಬೇಕು. 

ವಾಟ್ಸಾಪ್ ಚಾಟ್‌ ಮೂಲಕ ಬರುತ್ತದೆ ಲಿಂಕ್ :

ಇತ್ತೀಚಿನ ದಿನಗಳಲ್ಲಿ, ಬ್ಯಾಂಕ್ ಖಾತೆಯ ಬಗ್ಗೆ ವಿಚಾರಿಸುವಂಥಹ, ಕೆಲಸದ ಆಫರ್ ನೀಡುವಂಥಹ ಮೆಸ್ಸೇಜ್ ಗಳನ್ನು ಅನೇಕ ಬಳಕೆದಾರರು ರಿಸೀವ್ ಮಾಡುತ್ತಿದ್ದಾರೆ. ಇದರಲ್ಲಿ ಬಳಕೆದಾರರಿಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿ ವೇತನದ ಕೆಲಸ ಸಿಗಲಿದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ, ಮೆಸೇಜ್ ನಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡುವಂತೆಯೂ ಹೇಳಲಾಗುತ್ತದೆ. ಆದರೆ, ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮನ್ನು ನೇರವಾಗಿ WhatsApp ಚಾಟ್‌ಗೆ  ಡೈರೆಕ್ಟ್ ಮಾಡಲಾಗುತ್ತದೆ. ಇಲ್ಲಿ ನಿಮ್ಮಲ್ಲಿ ಕೆಲವು ಮಾಹಿತಿಗಳನ್ನು ಕೇಳಲಾಗುತ್ತದೆ.  

ಇದನ್ನೂ ಓದಿ : ಮಾರುತಿಯ ಈ ಕಾರಿಗೆ ಹೆಚ್ಚುತ್ತಿದೆ ಬೇಡಿಕೆ ! 6 ಲಕ್ಷ ಬೆಲೆಯ ಈ ಕಾರಿನಲ್ಲಿದೆ ಸೂಪರ್ ವೈಶಿಷ್ಟ್ಯ

ಮೊದಲ ಸುತ್ತಿನ ಸಂದರ್ಶನದಲ್ಲಿ ತೇರ್ಗಡೆಯಾದ ನಂತರ, ಎರಡನೇ ಸುತ್ತನ್ನು ಕಂಪನಿಯ ಹಿರಿಯ ಅಧಿಕಾರಿಗಳು ನಡೆಸುತ್ತಾರೆ ಎಂದು ಕೂಡಾ ಹೇಳಲಾಗುತ್ತದೆ. ಈ  ಹೊತ್ತಿನಲ್ಲಿ ಸಂದರ್ಶನದ ನೆಪದಲ್ಲಿ  ಅಭ್ಯರ್ಥಿಯಿಂದ ಎಲ್ಲಾ ಅಗತ್ಯ ದಾಖಲೆಗಳನ್ನು ಕೇಳಲಾಗುತ್ತದೆ. ಅಂತಿಮ ಸುತ್ತನ್ನು ತಲುಪಲು, ಬ್ಯಾಂಕ್ ಖಾತೆ ವಿವರಗಳು ಮತ್ತು ಇತರ ಮಾಹಿತಿಯನ್ನು ನೀಡಬೇಕಾಗುತ್ತದೆ. ಇಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡದೇ  ಹೋದಲ್ಲಿ ಸಂದರ್ಶನದಿಂದ ಹೊರ ಉಳಿಯುವುದಾಗಿ ಹೇಳಲಾಗುತ್ತದೆ. 

OTP ಯಾರೊಂದಿಗೂ ಶೇರ್ ಮಾಡಬೇಡಿ : 
ನೀವು ನಿಮ್ಮ ಬ್ಯಾಂಕ್ ಖಾತೆಯ ಎಲ್ಲಾ ವಿವರಗಳನ್ನು  ನೀಡಿದ ಮೇಲೆ ನಿಮ್ಮ ನೋಂದಾಯಿತ ಫೋನ್ ಸಂಖ್ಯೆಗೆ OTP ಬರುತ್ತದೆ. ಈ OTP ಇಲ್ಲದೆ ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆಯುವುದು ಸಾಧ್ಯವಾಗುವುದಿಲ. ಹಾಗಾಗಿ ಈ OTPಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಒಂದು ವೇಳೆ  ಹಂಚಿಕೊಂಡರೆ ನಿಮ್ಮ ಖಾತೆಯಿಂದ ಹಣ ಮಾಯವಾಗಿ ಬಿಡುತ್ತದೆ. ಆದ್ದರಿಂದ, ಯಾವಾಗಲೂ ಜಾಗರೂಕರಾಗಿರಿ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳಿ.

ಇದನ್ನೂ ಓದಿ : Elon Musk In China: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಗೆ ಬೆಚ್ಚಿ ಬಿದ್ದ ಚೀನಾ ವತಿಯಿಂದ 13000 ಉಪಗ್ರಹಗಳ ಉಡಾವಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More