Home> Technology
Advertisement

Netflix ಕೂಡ ನಿಮ್ಮನ್ನು ಜೈಲಿಗಟ್ಟಬಹುದು... ಹುಷಾರ್!

Netflix Account: ನೀವೂ ಕೂಡ ನೆಟ್ಫ್ಲಿಕ್ಸ್ ಬಳಸುತ್ತಿದ್ದು, ನಿಮ್ಮ ಕುಟುಂಬದ ಯಾವುದೇ ಸದಸ್ಯ ಅಥವಾ ಗೆಳೆಯರೊಂದಿಗೆ ನಿಮ್ಮ ಖಾತೆಯ ಪಾಸ್ವರ್ಡ್ ಹಂಚಿಕೊಂಡಿದ್ದರೆ, ಈ ರೀತಿ ಮಾಡುವುದು ನಿಮ್ಮ ಪಾಲಿಗೆ ದುಬಾರಿ ಸಾಬೀತಾಗಬಹುದು.
 

Netflix ಕೂಡ ನಿಮ್ಮನ್ನು ಜೈಲಿಗಟ್ಟಬಹುದು... ಹುಷಾರ್!

Rules For Netflix: ಇತ್ತೀಚಿನ ಚಲನಚಿತ್ರಗಳು ಹಾಗೂ ಲೇಟೆಸ್ಟ್ ವೆಬ್ ಸಿರೀಸ್ ಗಳನ್ನು ನೋಡಲು ಇಂದು ಬಹುತೇಕ ಜನರು ನೆಟ್ ಫ್ಲಿಕ್ಸ್ ಅನ್ನು ಬಳಸುತ್ತಿದ್ದಾರೆ. ನೆಟ್ ಫ್ಲಿಕ್ಸ್ ಮನರಂಜನೆಯ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಆದರೆ, ನಿಮ್ಮ ಖಾತೆಯ ಮಾಹಿತಿಯನ್ನು ನೀವು ನಿಮ್ಮ ಗೆಳೆಯರು ಅಥವಾ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಪಾಲಿಗೆ ದುಬಾರಿ ಸಾಬೀತಾಗಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಈ ರೀತಿ ಮಾಡುವುದು ನಿಮ್ಮನ್ನು ಜೈಲಿಗೂ ಅಟ್ಟಬಹುದು ಮತ್ತು ಅಲ್ಲಿಂದ ನೀವು ಹೊರಬರುವುದು ಕಷ್ಟಸಾಧ್ಯ ಸಾಬೀತಾಗಬಹುದು. ಇತ್ತೀಚಿನ ದಿನಗಳಲ್ಲಿ ನೆಟ್ ಫ್ಲಿಕ್ಸ್ ಬಳಕೆ ತುಂಬಾ ಹೆಚ್ಚಾಗಿದೆ. ಆದರೂ ಕೂಡ ಕೆಲವರು ನೆಟ್ ಫ್ಲಿಕ್ಸ್ ಅನ್ನು ಬಳಸುವ ವಿಧಾನದಿಂದ ಕಂಪನಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಹೌದು, ನೆಟ್ಫ್ಲಿಕ್ಸ್ ಬಳಕೆದಾರರು ತಮ್ಮ ಐಡಿ ಹಾಗೂ ಪಾಸ್ವರ್ಡ್ ಗಳನ್ನು ಹಂಚಿಕೊಳ್ಳಬಹುದು ಹಾಗೂ ಇದರಿಂದ ಕಂಪನಿಗೆ ಸಾಕಷ್ಟು ನಷ್ಟ ಉಂಟಾಗುವುದು ಸ್ವಾಭಾವಿಕ. ಒಂದು ವೇಳೆ ನೀವೂ ಕೂಡ ಈ ರೀತಿ ಮಾಡುತ್ತಿದ್ದರೆ, ನೀವು ಜೈಲಿಗೆ ಹೋಗುವ ಎಲ್ಲಾ ಸಾಧ್ಯತೆಗಳಿವೆ.

ಇದನ್ನೂ ಓದಿ-Jio Cheapest Plan: 90 ದಿನಗಳ ವ್ಯಾಲಿಡಿಟಿ ಇರುವ ಅಗ್ಗದ 5ಜಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ!

ಪಾಸ್ವರ್ಡ್ ಹಂಚಿಕೊಳ್ಳುವುದು ಅಪರಾಧ
ಹೌದು, ನೀವು ಇನ್ಮುಂದೆ ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯ ಪಾಸ್‌ವರ್ಡ್ ಅನ್ನು ಯಾರೊಂದಿಗಾದರೂ ಹಂಚಿಕೊಂಡರೆ, ನಿಮಗೂ ಕೂಡ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಬಹುದು, ಏಕೆಂದರೆ ಇದೀಗ ಹಾಗೆ ಮಾಡುವುದು ವಂಚನೆಯ ವರ್ಗಕ್ಕೆ ಸೇರಿದೆ ಎಂದು ನಾವು ಹೇಳುತ್ತಿಲ್ಲ. ಆದರೆ, ಹಾಗೆ ಮಾಡುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಮತ್ತು ಇದಕ್ಕಾಗಿ ನೀವು ಜೈಲು ಶಿಕ್ಷೆ ಅಥವಾ ಭಾರೀ ದಂಡವನ್ನು ತೆರಬೇಕಾಗಬಹುದು. ವಾಸ್ತವದಲ್ಲಿ, ಕಳೆದ ಕೆಲವು ವರ್ಷಗಳಿಂದ, ಪಾಸ್ವರ್ಡ್ಗಳನ್ನು ಹಂಚಿಕೊಳ್ಳುವ ಪ್ರವೃತ್ತಿಯು ಜನರಲ್ಲಿ ಸಾಕಷ್ಟು ಹೆಚ್ಚಾಗಿದೆ, ಜನರು ಒಂದು ಖಾತೆಗೆ ಚಂದಾದಾರರಾಗುತ್ತಾರೆ ಮತ್ತು ನಾಲ್ಕರಿಂದ ಐದು ಜನರು ಆ ಖಾತೆಯಿಂದ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಈಗ ಅದನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಇದೆ.

ಇದನ್ನೂ ಓದಿ-Watch Video: ನೀರಿನಿಂದಲೂ ಬೈಕ್ ಓಡುತ್ತೆ... ನಂಬ್ತಿರಾ? ವಿಡಿಯೋ ನೋಡಿ

ಇತ್ತೀಚೆಗೆ, ಸರ್ಕಾರದ ಬೌದ್ಧಿಕ ಆಸ್ತಿ ಕಚೇರಿ ಕಡಲ್ಗಳ್ಳತನಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ, ಇದರಲ್ಲಿ ನೀವು ಯಾವುದೇ OTT ಪ್ಲಾಟ್‌ಫಾರ್ಮ್‌ನ ಪಾಸ್‌ವರ್ಡ್ ಅನ್ನು ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಂಡರೆ, ನಂತರ ನಿಮ್ಮ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಇದು ನೆಟ್‌ಫ್ಲಿಕ್ಸ್‌ಗೆ ಮಾತ್ರ ಅನ್ವಯಿಸುವುದಿಲ್ಲ. ಮಾರುಕಟ್ಟೆಯಲ್ಲಿರುವ ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳಿಗೆ ಈ ಕಾನೂನು ಅನ್ವಯಿಸಲಿದೆ. ಭಾರತದಲ್ಲಿ ಈ ನಿಯಮವನ್ನು ಜಾರಿಗೆ ತರದಿದ್ದರೂ, ಯುಕೆಯಲ್ಲಿ ಇದನ್ನು ಜಾರಿಗೆ ತರಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More