Home> Technology
Advertisement

Amazon Great Republic Day sale 2024: ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮೇಲೆ ಭಾರೀ ಡಿಸ್ಕೌಂಟ್ :ಇರಲಿದೆ 80 % ವರೆಗೆ ರಿಯಾಯಿತಿ

Amazon Great Republic Day sale 2024: ಸೇಲ್ ಸಮಯದಲ್ಲಿ ಆಡಿಯೊ ಸಾಧನಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಕೂಡಾ ರಿಯಾಯಿತಿಗಳು ಲಭ್ಯವಿರುತ್ತವೆ.ಯಾವ  ಉತ್ಪನ್ನಗಳ ಮೇಲೆ ಎಷ್ಟು ರಿಯಾಯಿತಿ  ಸಿಗಲಿದೆ ನೋಡೋಣ. 

 Amazon Great Republic Day sale 2024: ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮೇಲೆ ಭಾರೀ  ಡಿಸ್ಕೌಂಟ್ :ಇರಲಿದೆ  80 % ವರೆಗೆ ರಿಯಾಯಿತಿ

Amazon Great Republic Day sale 2024: Amazonನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಮತ್ತೆ ಬರುತ್ತಿದೆ. Amazon ತನ್ನ ವೆಬ್‌ಸೈಟ್‌ನಲ್ಲಿ ಈ ವರ್ಷದ ದೊಡ್ಡ  ಸೇಲ್ ನ ಕೆಲವು ಝಲಕ್ ಗಳನ್ನೂ ಈಗಾಗಲೇ ನೀಡಲು ಆರಂಭಿಸಿದೆ. ಈ ಸೇಲ್ ನಲ್ಲಿ iPhone 13, Redmi Note 12 5G, Samsung Galaxy S23, OnePlus 11 5G, iQOO Z7 Pro 5G  ಸೇರಿದಂತೆ ಇನ್ನೂ ಅನೇಕ   ಸ್ಮಾರ್ಟ್‌ಫೋನ್‌ಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿಗಳನ್ನು ನೀಡಲಿದೆ. ಇದಲ್ಲದೆ, ಸೇಲ್ ಸಮಯದಲ್ಲಿ ಆಡಿಯೊ ಸಾಧನಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಕೂಡಾ ರಿಯಾಯಿತಿಗಳು ಲಭ್ಯವಿರುತ್ತವೆ.ಯಾವ ಉತ್ಪನ್ನಗಳ ಮೇಲೆ ಎಷ್ಟು ರಿಯಾಯಿತಿ  ಸಿಗಲಿದೆ ನೋಡೋಣ. 

Amazon ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಆಫರ್‌ಗಳು : 
ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನ ನಿಖರವಾದ ದಿನಾಂಕವನ್ನು ಇನ್ನೂ  ಘೋಷಿಸಿಲ್ಲ. ಆದರೆ ಕಳೆದ ವರ್ಷ ಜನವರಿ 15 ರಂದು ಈ ಸೇಲ್ ಪ್ರಾರಂಭವಾಗಿತ್ತು.  ಹಾಗಾಗಿ ಈ ವರ್ಷವೂ ಇದೇ ಸಮಯಕ್ಕೆ ಸೇಲ್ ಆರಂಭವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ : Google Accounts: ಹ್ಯಾಕರ್‌ಗಳು ಪಾಸ್‌ವರ್ಡ್‌ ಇಲ್ಲದೆಯೇ ನಿಮ್ಮ ಅಕೌಂಟ್‌ಗಳನ್ನು ನಿಯಂತ್ರಿಸಬಲ್ಲರು! ಹೇಗೆ ಗೊತ್ತಾ?

Apple iPhone 13 ಮೇಲೆ ರಿಯಾಯಿತಿ : 
iPhone 13ನಲ್ಲಿ ವಿಶೇಷ ರಿಯಾಯಿತಿಯನ್ನು ನಿರೀಕ್ಷಿಸಲಾಗಿದೆ. ಅದರ ಬೆಲೆ ಸುಮಾರು ರೂ XX,XX0 ಎಂದು ವೆಬ್‌ಸೈಟ್‌ನಲ್ಲಿ ತೋರಿಸಲಾಗಿದೆ.ಇನ್ನು ಐಫೋನ್ ಮಾಡೆಲ್ ಗಳಲ್ಲಿ ಸಿಗುವ ಡಿಸ್ಕೌಂಟ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ನೀಡದ ಕಾರಣ ಗ್ರಾಹಕರಲ್ಲಿ ಹೆಚ್ಚಿನ ಕುತೂಹಲ ಮೂಡಿದೆ. Samsung Galaxy S23 5G, OnePlus 11 5G, OnePlus Nord 3 5G, iQOO Neo 7 Pro 5G, iQOO Z7 Pro 5G, Honor 90 5G, Moto Razr 40 Ultra, Realme Narzo 5G ಮತ್ತು ಹಲವು 60 ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ನೀಡುವ ಸಾಧ್ಯತೆಯಿದೆ. 

ಬಿಡಿಭಾಗಗಳ ಮೇಲೆ 40% ರಿಯಾಯಿತಿ : 
ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ರಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ 40% ವರೆಗೆ ರಿಯಾಯಿತಿ ಲಭ್ಯವಿರಲಿದೆ. ಈ ವಸ್ತುಗಳನ್ನು 12 ತಿಂಗಳವರೆಗೆ ಬಡ್ಡಿ ರಹಿತ EMI ಮೂಲಕ ಖರೀದಿಸಬಹುದು. ಇದರಿಂದ ಸುಲಭವಾಗಿ ಪಾವತಿ ಮಾಡಬಹುದು.ಇನ್ನು ನೀವು  ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ, ಒಂದು ದಿನ ಮುಂಚಿತವಾಗಿ  ಸೇಲ್ ಗೆ ಆಕ್ಸೆಸ್ ಸಿಗುತ್ತದೆ. 

ಇದನ್ನೂ ಓದಿ : Republic Day Sale 2024: ಈ ದಿನದಿಂದ ಆರಂಭಗೊಳ್ಳಲಿದೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್, ದಿನಾಂಕ ಘೋಷಣೆ!

9,999 ರೂಗೆ 5G ಫೋನ್  :
ಈ ಸೇಲ್‌ನಲ್ಲಿ ವಿಶೇಷ ವಿಷಯವೆಂದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಪಾವತಿ ಮಾಡುವವರಿಗೆ 10% ನೇರ ರಿಯಾಯಿತಿ ಸಿಗುತ್ತದೆ.ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವುದಾದರೆ ಎಕ್ಸ್ಚೇಂಜ್ ಆಫರ್ ನಲ್ಲಿ  50,000 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು.5G ಸ್ಮಾರ್ಟ್‌ಫೋನ್ ಖರೀದಿಸಬೇಕು ಎನ್ನುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಏಕೆಂದರೆ ಹೀಗೆ  ಎಕ್ಸ್ಚೇಂಜ್ ಆಫರ್ ಮೂಲಕ ಪೋನ್ ಅನ್ನು ಕನಿಷ್ಠ 9,999 ರೂ.ಗೆ ಖರೀದಿಸಬಹುದು. 

ಲ್ಯಾಪ್‌ಟಾಪ್‌ಗಳ ಮೇಲೆ ರಿಯಾಯಿತಿಗಳು :
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಸ್ಮಾರ್ಟ್‌ಫೋನ್‌ಗಳ ಮೇಲೆ ಮಾತ್ರವಲ್ಲದೆ ಅನೇಕ ಉತ್ಪನ್ನಗಳ ಮೇಲೆಯೂ ಭಾರಿ ರಿಯಾಯಿತಿಗಳನ್ನು ನೀಡಲಿದೆ.ಲ್ಯಾಪ್‌ಟಾಪ್‌ಗಳ ಮೇಲೆ 40,000 ರೂ.ವರೆಗೆ ರಿಯಾಯಿತಿ ಸಿಗಲಿದೆ. ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳ ಮೇಲೆ 80 % ವರೆಗೆ ರಿಯಾಯಿತಿ ಇರಲಿದೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More