Home> Technology
Advertisement

ನಿಮ್ಮ ಮೊಬೈಲ್‌ನಲ್ಲೂ ಕೆಲವು ಅಪ್ಲಿಕೇಶನ್‌ಗಳನ್ನು Remove ಮಾಡಲು ಸಾಧ್ಯವಾಗುತ್ತಿಲ್ಲವೇ? ಈ ಟ್ರಿಕ್ ಅನುಸರಿಸಿ

ಇವುಗಳ ಸಮಸ್ಯೆಯೆಂದರೆ ಈ ಅಪ್ಲಿಕೇಶನ್‌ಗಳು ತುಂಬಾ ಹೆವಿಯಾಗಿದ್ದು ನಿಮ್ಮ ಆಂತರಿಕ ಮೆಮೊರಿಯನ್ನು ಹೆಚ್ಚು ತೆಗೆದುಕೊಳ್ಳುತ್ತವೆ. ನಿಮ್ಮ ಮೊಬೈಲ್ RAM ನಲ್ಲಿ ಕಡಿಮೆ ಸ್ಥಳವಿದ್ದರೆ, ಅದು ಸ್ಥಗಿತಗೊಳ್ಳುತ್ತದೆ.

ನಿಮ್ಮ ಮೊಬೈಲ್‌ನಲ್ಲೂ ಕೆಲವು ಅಪ್ಲಿಕೇಶನ್‌ಗಳನ್ನು Remove ಮಾಡಲು ಸಾಧ್ಯವಾಗುತ್ತಿಲ್ಲವೇ? ಈ ಟ್ರಿಕ್ ಅನುಸರಿಸಿ

ನವದೆಹಲಿ: ಕೆಲವು ನಿರ್ದಿಷ್ಟ ಕೆಲಸಗಳಿಗಾಗಿ ನೀವು ಅನೇಕ ಬಾರಿ ವಿಭಿನ್ನ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಆದರೆ ಕೆಲವೊಂದು ಅಪ್ಲಿಕೇಶನ್‌ಗಳನ್ನು ಮೊಬೈಲ್‌ನಲ್ಲಿ ಒಮ್ಮೆ ಡೌನ್‌ಲೋಡ್ ಮಾಡಿದ ಬಳಿಕ ಅವುಗಳನ್ನು ಡಿಲೀಟ್ ಅಂದರೆ ತೆಗೆದುಹಾಕುವುದು ತುಂಬಾ ಕಷ್ಟ. ಈ ಅನಗತ್ಯ ಅಪ್ಲಿಕೇಶನ್‌ಗಳ ಸಮಸ್ಯೆ ಎಂದರೆ ಅವು ನಿಮ್ಮ ಆಂತರಿಕ ಮೆಮೊರಿಯಲ್ಲಿ ಸಂಗ್ರಹವಾಗುತ್ತವೆ ಮತ್ತು ಅನಗತ್ಯವಾಗಿ ಮೊಬೈಲ್ ವೇಗವನ್ನು ನಿಧಾನಗೊಳಿಸುತ್ತವೆ. ಅಂತಹ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವ ಸುಲಭ ಮಾರ್ಗದ ಬಗ್ಗೆ ತಿಳಿಯಲು ಮುಂದೆ ಓದಿ....

ಅನಗತ್ಯ ಅಪ್ಲಿಕೇಶನ್‌ಗಳನ್ನು ಏಕೆ ತೆಗೆದುಹಾಕಬೇಕು?

ನಿರ್ದಿಷ್ಟ ಕೆಲಸ ಅಥವಾ ಮನರಂಜನೆಗಾಗಿ ನೀವು ಅನೇಕ ಬಾರಿ ಅಪ್ಲಿಕೇಶನ್‌ಗಳನ್ನು (Apps) ಡೌನ್‌ಲೋಡ್ ಮಾಡುತ್ತೀರಿ. ಉದಾಹರಣೆಗೆ ಹೆಚ್ಚಿನ ಜನರು ಟೈಮ್‌ಪಾಸ್‌ಗೆ ಮೊಬೈಲ್ ಆಟಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಇವುಗಳ ಸಮಸ್ಯೆಯೆಂದರೆ ಈ ಅಪ್ಲಿಕೇಶನ್‌ಗಳು ತುಂಬಾ ಹೆವಿಯಾಗಿದ್ದು ನಿಮ್ಮ ಆಂತರಿಕ ಮೆಮೊರಿಯನ್ನು ಹೆಚ್ಚು ತೆಗೆದುಕೊಳ್ಳುತ್ತವೆ. ನಿಮ್ಮ ಮೊಬೈಲ್ RAM ನಲ್ಲಿ ಕಡಿಮೆ ಸ್ಥಳವಿದ್ದರೆ, ಅದು ಸ್ಥಗಿತಗೊಳ್ಳುತ್ತದೆ. ಅಲ್ಲದೆ, ಹ್ಯಾಂಡ್‌ಸೆಟ್ ತುಂಬಾ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದಕ್ಕಾಗಿಯೇ ಹೆಚ್ಚಿನ ತಾಂತ್ರಿಕ ತಜ್ಞರು ಅನಗತ್ಯ ಅಪ್ಲಿಕೇಶನ್‌ಗಳನ್ನು ತಕ್ಷಣ ತೆಗೆದುಹಾಕುವಂತೆ ಶಿಫಾರಸು ಮಾಡುತ್ತಾರೆ.

ನಿಮ್ಮ ಫೋನ್‌ನಲ್ಲಿಯೂ ಈ 7 ಅಪ್ಲಿಕೇಶನ್‌ಗಳಿದ್ದರೆ ಕೂಡಲೇ Delete ಮಾಡಿ, ಇಲ್ಲವೇ ಖಾಲಿಯಾಗುತ್ತೆ ಅಕೌಂಟ್

ಕೆಲವು ಅಪ್ಲಿಕೇಶನ್‌ಗಳನ್ನು Remove ಮಾಡಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಈ ಟ್ರಿಕ್ ಅನುಸರಿಸಿ:
ಈ ಟ್ರಿಕ್ ಬಳಸಲು ಮೊದಲು ನೀವು ನಿಮ್ಮ ಸ್ಮಾರ್ಟ್‌ಫೋನ್ (Smartphones) ಅನ್ನು ರೀಬೂಟ್ ಮಾಡಬೇಕು. ಅದರ ನಂತರ ನೀವು ಗೂಗಲ್ ಪ್ಲೇ ಸ್ಟೋರ್‌ಗೆ (Google Play Store) ಹೋಗಿ ಸೂಪರ್‌ಯುಸರ್ (superuser app) ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಿ
-ನಂತರ ನೀವು ಈ ಅಪ್ಲಿಕೇಶನ್ ತೆರೆಯಿರಿ
- ಅಪ್ಲಿಕೇಶನ್ ತೆರೆದಾಗ, ಮೇಲಿನ ಮಧ್ಯದಲ್ಲಿ ಡಿಲೀಟ್ ಆಯ್ಕೆಯನ್ನು ನೀವು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ
- ಇದರ ನಂತರ, ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ, ಇದರಲ್ಲಿ ಸಿಸ್ಟಮ್ ಅಪ್ಲಿಕೇಶನ್‌ನ ಆಯ್ಕೆಯು ಕಾಣಿಸುತ್ತದೆ.
- ಅದರ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಿಸ್ಟಮ್ ಅಪ್ಲಿಕೇಶನ್ ತೋರಿಸುತ್ತದೆ.
- ನೀವು ಇಲ್ಲಿಂದ ಡಿಲೀಟ್ ಮಾಡಲು ಬಯಸುವ ಅಪ್ಲಿಕೇಶನ್ ಆಯ್ಕೆಮಾಡಿ ಮತ್ತು delete icon  ಕ್ಲಿಕ್ ಮಾಡಿ

ಇನ್ಮುಂದೆ ನಿಮ್ಮ Smartphone ಬ್ಯಾಟರಿ ಹೆಚ್ಚಿಸುವುದು ಇನ್ನಷ್ಟು ಸುಲಭವಾಗಿದೆ, ಹೇಗೆ ಅಂತಿರಾ?

ಈ ಸಂಪೂರ್ಣ ಪ್ರಕ್ರಿಯೆಯ ನಂತರ ನೀವು ಸಿಸ್ಟಮ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದರಿಂದ ಸಿಸ್ಟಮ್ ಅಸ್ಥಿರತೆ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು (removing system apps may Cause system instability and other problems)ಎಂಬ ಎಚ್ಚರಿಕೆ ಸಂದೇಶವನ್ನು ನೋಡುತ್ತೀರಿ. ಈಗ ನೀವು ಹೌದು ಕ್ಲಿಕ್ ಮಾಡಬೇಕು. ಅದರ ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಅಳಿಸದ ಎಲ್ಲಾ ಅಪ್ಲಿಕೇಶನ್‌ಗಳನ್ನು Remove ಮಾಡಲಾಗುತ್ತದೆ.

Read More