Home> Technology
Advertisement

ಗೂಗಲ್ ತರುತ್ತಿದೆ ಹೊಸ ಮೆಸೇಜಿಂಗ್ ಆಪ್ ! ಹೊಸ ಹೊಸ ಫೀಚರ್ ನೊಂದಿಗೆ WhatsAppಗೆ ಭಾರೀ ಟಕ್ಕರ್ !

ಗೂಗಲ್ ಇತ್ತೀಚೆಗೆ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಇವುಗಳಲ್ಲಿ ಮೆಸೇಜ್ ಮ್ಯಾನೇಜ್ಮೆಂಟ್, ವೀಡಿಯೊ ಕರೆಗಳು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುವ ಸೌಲಭ್ಯವಿದೆ.

ಗೂಗಲ್ ತರುತ್ತಿದೆ ಹೊಸ ಮೆಸೇಜಿಂಗ್ ಆಪ್ ! ಹೊಸ ಹೊಸ ಫೀಚರ್ ನೊಂದಿಗೆ  WhatsAppಗೆ ಭಾರೀ ಟಕ್ಕರ್ !

ಬೆಂಗಳೂರು : ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಾದ WhatsApp ಮತ್ತು Signalಗೆ ಟಕ್ಕರ್ ನೀಡುವ ಹೊಸ ಸಂದೇಶ ಅಪ್ಲಿಕೇಶನ್‌ ಅನ್ನು Google ಹೊರತರುತ್ತಿದೆ. ಈ ಅಪ್ಲಿಕೇಶನ್ RCS ಅನ್ನು ಬೆಂಬಲಿಸುತ್ತದೆ. ಇದರಿಂದಾಗಿ ಇದು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಗೂಗಲ್ ಇತ್ತೀಚೆಗೆ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಇವುಗಳಲ್ಲಿ ಮೆಸೇಜ್ ಮ್ಯಾನೇಜ್ಮೆಂಟ್, ವೀಡಿಯೊ ಕರೆಗಳು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುವ ಸೌಲಭ್ಯವಿದೆ. ಈ ವೈಶಿಷ್ಟ್ಯಗಳು WhatsApp ಮತ್ತು Signalನಲ್ಲಿ  ಇಲ್ಲಿಯವರೆಗೆ ಲಭ್ಯವಿಲ್ಲ. 

ವಾಯ್ಸ್ ನೋಟ್ ಫೀಚರ್ಸ್ : 
ಗೂಗಲ್ ತನ್ನ  ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇದನ್ನು ವಾಯ್ಸ್ ನೋಟ್ ಎಂದು ಕರೆಯಲಾಗುತ್ತದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಸಣ್ಣ ಸಂದೇಶಗಳನ್ನು ರೆಕಾರ್ಡ್ ಮಾಡಲು ಮತ್ತು ಅವುಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ಸಂದೇಶಗಳನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ರೆಕಾರ್ಡ್ ಮಾಡಬಹುದು. ಇಲ್ಲಿ ಮೆಸೇಜ್ ಟೈಪ್ ಮಾಡುವ ಬದಲು ವಾಯ್ಸ್ ರೆಕಾರ್ಡ್ ಮಾಡಿದರೆ ಸಾಕಾಗುತ್ತದೆ. 

ಇದನ್ನೂ ಓದಿ : ಹೆಲಿಪ್ಯಾಡ್, ಗೋಲ್ಡನ್ ಬಾತ್ ರೂಂ, ಐಷಾರಾಮಿ ರೂಮ್ಸ್ ಒಳಗೊಂಡ ಈ ಐಷಾರಾಮಿ ಸೂಪರ್‌ಯಾಚ್ ಎಂತಹವರನ್ನೂ ಬೆರಗುಗೊಳಿಸುತ್ತೆ!

ವರದಿಯ ಪ್ರಕಾರ, ವಾಯ್ಸ್ ನೋಟ್ ನಲ್ಲಿ ನಾಯ್ಸ್ ಕ್ಯಾನ್ಸಲ್ ಮಾಡುವ ವೈಶಿಷ್ಟ್ಯವನ್ನು ಸೇರಿಸುವ ಬಗ್ಗೆಯೂ ಗೂಗಲ್‌ ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯವು ರೆಕಾರ್ಡ್ ಮಾಡಿದ ಸಂದೇಶದಿಂದ ಹಿನ್ನೆಲೆಯಲ್ಲಿ ಕೇಳಿ ಬರುವ ಶಬ್ದ ಅಂದರೆ ಬ್ಯಾಕ್ ಗ್ರೌಂಡ್ ನಾಯ್ಸ್ ಅನ್ನು ತೆಗೆದು ಹಾಕುತ್ತದೆ. ಈ ಮೂಲಕ ಬಳಕೆದಾರರು ಸ್ಪಷ್ಟ ಧ್ವನಿಯನ್ನು ಕೇಳುವುದು ಸಾಧ್ಯವಾಗುತ್ತದೆ.

ನಾಯ್ಸ್ ಕ್ಯಾನ್ಸಲೇಶನ್ ಫೀಚರ್ (Noice Cancellation Feature) :
Google Message ಅಪ್ಲಿಕೇಶನ್‌ನ ಬೀಟಾ ಆವೃತ್ತಿಗೆ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಅನ್ನು ಸೇರಿಸಲಾಗುತ್ತಿದೆ. ರೆಕಾರ್ಡ್ ಮಾಡಿದ ಆಡಿಯೊದಿಂದ ಹಿನ್ನೆಲೆ ಶಬ್ದವನ್ನು ತೆಗೆದುಹಾಕಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ಡೆಡಿಕೆಟೆಡ್ ಬಟನ್ ರೂಪದಲ್ಲಿ ಕೆಲಸ ಮಾಡುತ್ತದೆ. ಈ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ, ಆಡಿಯೊ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ ಮತ್ತು ನಾಯ್ಸ್ ಕ್ಯಾನ್ಸಲೇಶನ್ ಫೀಚರ್   ಕೂಡಾ ಆಕ್ಟಿವ್ ಆಗುತ್ತದೆ. ಪ್ರಸ್ತುತ, ಈ ವೈಶಿಷ್ಟ್ಯವು ಟೆಸ್ಟಿಂಗ್ ಹಂತದಲ್ಲಿದೆ. ಆದರೆ ಶೀಘ್ರದಲ್ಲೇ ಇದು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ :ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ಬಳಸುವವರಿಗೊಂದು ಮಹತ್ವದ ಮಾಹಿತಿ, ಈ ಹೊಸ ಅಪ್ಡೇಟ್ ನಿಮಗೆ ತಿಳಿದಿರಲಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More